ಐಸ್‍ಲ್ಯಾಂಡ್: ಸುಮಾರು 800 ಬಾರಿ ಭೂಮಿ ಕಂಪಿಸಿದ್ದರಿಂದ (Earthquake) ಐಸ್‍ಲ್ಯಾಂಡ್‍ನಲ್ಲಿ (Iceland) ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಪರಿಸ್ಥಿತಿ (Emergency) ಘೋಷಿಸಲಾಗಿದೆ.
ಶುಕ್ರವಾರ ನಸುಕಿನ ಜಾವ 2 ಗಂಟೆಗೆ ಸರಣಿ ಭೂಕಂಪಗಳಾಗಿದ್ದು, ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ. ಇದು ಜ್ವಾಲಾಮುಖಿ ಸ್ಫೋಟಕ್ಕೆ ಕಾರಣವಾಗಬಹುದು. ಇದು ಮುಂದುವರೆದರೆ ಹಲವಾರು ಸಮಸ್ಯೆಗಳು ಎದುರಾಗಬಹುದು ಎಂದು ಅಂದಾಜಿಸಲಾಗಿದೆ. ಅಕ್ಟೋಬರ್ ಅಂತ್ಯದಿಂದ ಇಲ್ಲಿಯವರೆಗೂ ದ್ವೀಪದಲ್ಲಿ ಸುಮಾರು 24,000 ಭೂಕಂಪಗಳು ದಾಖಲಾಗಿವೆ. ಇದನ್ನೂ ಓದಿ: ಇಂದು ಅಯೋಧ್ಯೆಯಲ್ಲಿ ಅದ್ಧೂರಿ ದೀಪೋತ್ಸವ – ಏಕಕಾಲದಲ್ಲಿ ಬೆಳಗಲಿದೆ 24 ಲಕ್ಷ ಹಣತೆ
Advertisement
Advertisement
ಐಸ್‍ಲ್ಯಾಂಡ್‍ನ ಅತಿದೊಡ್ಡ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾದ ಬ್ಲೂ ಲಗೂನ್ ಜಿಯೋಥರ್ಮಲ್ ಸ್ಪಾ ಜ್ವಾಲಾಮುಖಿ ಸಾಧ್ಯತೆಯಿಂದಾಗಿ ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಅಲ್ಲದೇ ಜನರ ರಕ್ಷಣೆ ಸಲುವಾಗಿ ಭೂಕಂಪನ ಸ್ಥಳಗಳಲ್ಲಿ ಸೇನಾ ಹಡಗುಗಳು ಕಾರ್ಯ ನಿರ್ವಹಿಸುತ್ತಿವೆ.
Advertisement
Advertisement
ಪ್ರವಾಸಿ ತಾಣಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಲವೆಡೆ ನಿರಾಶ್ರಿತರ ತಾಣಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿಯಾಗಿಲ್ಲ.
2010ರ ಏಪ್ರಿಲ್‍ನಲ್ಲಿ ಐಸ್‍ಲ್ಯಾಂಡ್‍ನ ದಕ್ಷಿಣ ಪ್ರದೇಶದಲ್ಲಿ ಬೃಹತ್ ಜ್ವಾಲಾಮುಖಿ ಸ್ಫೋಟದಿಂದಾಗಿ ವಿಶ್ವದಾದ್ಯಂತ ಸುಮಾರು 1 ಲಕ್ಷ ವಿಮಾನಗಳು ರದ್ದಾಗಿದ್ದವು. ಇದರೀಮದಾಗಿ ವಿಶ್ವದಲ್ಲಿ ಕೋಟಿಗೂ ಹೆಚ್ಚು ಜನರು ಪರದಾಡಿದ್ದರು. ಇದನ್ನೂ ಓದಿ: ವಿಜಯೇಂದ್ರ ಆಯ್ಕೆ ‘ಹೊಸ ಬಾಟಲಿಗೆ ಹಳೆ ವೈನ್’ ಹಾಕಿದಂತೆ: ಡಿ.ಸುಧಾಕರ್