ಬೆಳಗಾವಿ: ಶಾಸಕ ಅಭಯ್ ಪಾಟೀಲ್ (Abhay Patil) ಬೆಂಬಲಿಗರಿಂದ ಶಾಸಕರ ಭಾವಚಿತ್ರವಿರುವ ಪೋಸ್ಟರ್ ನೀಡಿ ಶಾಲಾ ಮಕ್ಕಳಿಗೆ ಐಸ್ ಕ್ರೀಂ (Ice cream) ವಿತರಣೆ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಬೆಳಗಾವಿ (Belagavi) ದಕ್ಷಿಣ ಮತಕ್ಷೇತ್ರ ವ್ಯಾಪ್ತಿಯ ಹಲವು ಶಾಲಾ ಆವರಣದಲ್ಲಿ ಶಾಸಕರ ಬೆಂಬಲಿಗರಿಂದ ಮಕ್ಕಳಿಗೆ ಐಸ್ ಕ್ರೀಂ ಉತ್ಸವ ಹೆಸರಿನಲ್ಲಿ ವಿತರಣೆ ಮಾಡಲಾಗುತ್ತಿದೆ. ಶಾಸಕರ ಒತ್ತಾಯಕ್ಕೆ ಮಣಿದು ಶಾಲಾ ಆಡಳಿತ ಮಂಡಳಿ ಐಸ್ ಕ್ರೀಂ ವಿತರಣೆ ಮಾಡಲು ಅನುಮತಿ ನೀಡಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮುಷ್ಕರಕ್ಕೂ ಮೊದಲೇ ಜಯ – KPTCL, ESCOM ನೌಕರರ ವೇತನ ಹೆಚ್ಚಳ
Advertisement
Advertisement
ಪೋಸ್ಟರ್ ಕೆಳಗೆ ನೀಡಿರುವ ಅಂಗಡಿಗಳಲ್ಲಿ ಕೂಪನ್ ನೀಡಿ ಐಸ್ ಕ್ರೀಂ ಪಡೆಯಲು ಮಕ್ಕಳಿಗೆ ಸೂಚನೆ ಕೊಡಲಾಗಿದೆ. ಚುನಾವಣೆ (Election) ಹೊತ್ತಲ್ಲಿ ಆಮಿಷ ಒಡ್ಡದಂತೆ ಜಿಲ್ಲಾಧಿಕಾರಿ ನಿರ್ಬಂಧ ಹೇರಿದ್ದಾರೆ. ಆದರೆ ಬೆಳಗಾವಿಯಲ್ಲಿ ರಾಜಾರೋಷವಾಗಿ ಮಿಕ್ಸರ್, ಗ್ರೈಂಡರ್, ಟಿಫಿನ್ ಬಾಕ್ಸ್, ಐಸ್ ಕ್ರೀಂ ಆಮಿಷ ಒಡ್ಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಇದನ್ನೂ ಓದಿ: 10 ಕ್ಷೇತ್ರಗಳಿಂದ ನನಗೆ ಆಹ್ವಾನ, ರಾಜ್ಯ ರಾಜಕಾರಣದಲ್ಲಿ ಆಸಕ್ತಿ ಇಲ್ಲ: ಡಿ.ಕೆ.ಸುರೇಶ್