ಮೆಲ್ಬರ್ನ್: ಟೀಂ ಇಂಡಿಯಾದ 360 ಡಿಗ್ರಿ ಖ್ಯಾತಿಯ ಬ್ಯಾಟ್ಸ್‌ಮ್ಯಾನ್ ಸೂರ್ಯಕುಮಾರ್ ಯಾದವ್ (Suryakumar Yadav) ಟೀಂ ಇಂಡಿಯಾದ (Team India) ಪೈಲಟ್ ಸ್ಥಾನದಲ್ಲಿ ಕಾಣಿಸಿಕೊಂಡಿರುವ ಫೋಟೋ ಒಂದನ್ನು ಐಸಿಸಿ (ICC) ಪೋಸ್ಟ್ ಮಾಡಿ ಪಾಕಿಸ್ತಾನ (Pakistan) ವಿರುದ್ಧದ ಮೊದಲ ಪಂದ್ಯದ ಕಾವು ಹೆಚ್ಚಿಸಿದೆ.
Advertisement
ಇಂದು ಟೀಂ ಇಂಡಿಯಾ ಇಂದು ಮೆಲ್ಬರ್ನ್ (Melbourne) ಕ್ರೀಡಾಂಗಣದಲ್ಲಿ ಭಾರತ (India) ಹಾಗೂ ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಪಾಕ್ ವಿರುದ್ಧದ ಸಾಲು, ಸಾಲು ಸೋಲು ಟೀಂ ಇಂಡಿಯಾದ ನಿದ್ದೆ ಕೆಡಿಸಿದೆ. 2021ರ ಟಿ20 ವಿಶ್ವಕಪ್ (T20 World Cup) ಹಾಗೂ 2022ರ ಏಷ್ಯಾಕಪ್‍ನಲ್ಲಿ ಸೋಲುಂಡಿದ್ದ ಭಾರತ, ಪಾಕ್ ವಿರುದ್ಧ ಸೇಡುತೀರಿಸಿಕೊಳ್ಳಲು ಜಾತಕ ಪಕ್ಷಿಯಂತೆ ಕಾಯುತ್ತಿದೆ. ಚುಟುಕು ಸಮರದಲ್ಲಿ ಪಾಕ್ ಮಣಿಸಿ, ಶುಭಾರಂಭ ಮಾಡಲು ಟೀಂ ಇಂಡಿಯಾ ರಣತಂತ್ರವನ್ನೇ ಹೆಣೆದಿದೆ. ಈ ರಣತಂತ್ರದಲ್ಲಿ ಇದೀಗ ಮಹತ್ವದ ಪಾತ್ರ ವಹಿಸಬೇಕಾಗಿರುವುದು ಟೀಂ ಇಂಡಿಯಾದ ಎಕ್ಸ್ ಫ್ಯಾಕ್ಟರ್ ಎನಿಸಿಕೊಂಡಿರುವ ಸೂರ್ಯಕುಮಾರ್ ಯಾದವ್. ಚುಟುಕು ಮಾದರಿ ಕ್ರಿಕೆಟ್‍ನಲ್ಲಿ ತನ್ನ ಬ್ಯಾಟಿಂಗ್ ಮೂಲಕ ಧೂಳೆಬ್ಬಿಸುತ್ತಿರುವ ಸೂರ್ಯ ಪ್ರದರ್ಶನದ ಮೇಲೆ ಭಾರತ ಹೆಚ್ಚು ಅವಲಂಬಿತಗೊಂಡಿದೆ.
Advertisement
Advertisement
ಸೂರ್ಯ ಟಿ20 ಮಾದರಿ ಕ್ರಿಕೆಟ್‍ನಲ್ಲಿ ನಂ.2 ರ್‍ಯಾಂಕಿಂಗ್ ಬ್ಯಾಟ್ಸ್‌ಮ್ಯಾನ್ ಈ ಹಿಂದಿನ ಟಿ20 ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಸೂರ್ಯ ಇದೀಗ ಭಾರತದ ವಿಶ್ವಕಪ್‍ನ ಬೆಳಕು. ಸೂರ್ಯ ತನ್ನ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ವಿಶ್ವಕಪ್‍ನಲ್ಲೂ ಮುಂದುವರಿದಸಿದರೆ ಈ ಬಾರಿ ಟಿ20 ವಿಶ್ವಕಪ್ ಭಾರತ ಜಯಿಸುವುದರಲ್ಲಿ ಅನುಮಾನವಿಲ್ಲ. ಹಾಗಾಗಿ ತಂಡದ ಕೋಚ್, ನಾಯಕ ಸಹಿತ ಅಭಿಮಾನಿಗಳು ಸೂರ್ಯನ ಪ್ರದರ್ಶನದ ಬಗ್ಗೆ ನಿರೀಕ್ಷೆ ಇಟ್ಟಿದ್ದಾರೆ.
Advertisement
Top-Gunning it ????
Will SKY pilot India to victory in #T20WorldCup 2022? pic.twitter.com/wklNQBBJI4
— ICC (@ICC) October 22, 2022
ಈ ಎಲ್ಲವನ್ನು ಗಮನಿಸಿ ಐಸಿಸಿ, ಸೂರ್ಯಕುಮಾರ್ ಯಾದವ್ ಭಾರತದ ಪೈಲಟ್ ಆಗುವರೇ? ಎಂದು ಟ್ವೀಟ್ ಮಾಡಿ ಕಿಚ್ಚು ಹಚ್ಚಿದೆ.
ಇದೀಗ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಕ್ಷಣಗಣನೇ ಆರಂಭವಾಗಿದೆ. ಸೂಪರ್ ಸಂಡೇ ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಪಂದ್ಯ ಆರಂಭವಾಗಲಿದ್ದು, ಅಭಿಮಾನಿಗಳು ಪಂದ್ಯ ವೀಕ್ಷಣೆಗೆ ತುದಿಗಾಲಲ್ಲಿ ನಿಂತಿದ್ದಾರೆ.