ಲಂಡನ್: ವಿಶ್ವ ಟೆಸ್ಟ್‌ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ (ICC World Test Championship) ಆಸ್ಟ್ರೇಲಿಯಾ (Australia) ವಿರುದ್ಧ ಭಾರತ (Team India) ಆರಂಭಿಕ ಹಿನ್ನಡೆ ಅನುಭವಿಸಿದೆ. ಎರಡನೇ ದಿನ ಆಸ್ಟ್ರೇಲಿಯಾ 469 ರನ್‌ಗಳಿಗೆ ಆಲೌಟ್ ಆಗಿದ್ದರೆ ಭಾರತ 38 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 151 ರನ್‌ಗಳಿಸಿ 318 ರನ್‌ಗಳ ಹಿನ್ನಡೆಯಲ್ಲಿದೆ.
ತನ್ನ ಸರದಿ ಆರಂಭಿಸಿದ ಭಾರತ 30 ರನ್‌ಗಳಿಸುವಷ್ಟರಲ್ಲೇ ಆರಂಭಿಕ ಇಬ್ಬರೂ ಆಟಗಾರರನ್ನು ಕಳೆದುಕೊಂಡಿತು. ನಾಯಕ ರೋಹಿತ್ ಶರ್ಮಾ 15, ಶುಭಮನ್ ಗಿಲ್ 13 ರನ್ ಗಳಿಸಿ ಔಟಾದರು. ನಂತರ ಬಂದ ಚೇತೇಶ್ವರ ಪೂಜಾರ 14 ರನ್, ವಿರಾಟ್ ಕೊಹ್ಲಿ 14 ರನ್ ಗಳಿಸಿ ಔಟಾದರೆ ರವೀಂದ್ರ ಜಡೇಜಾ 48 ರನ್ (51 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆದರು.
Advertisement
Advertisement
ಎರಡನೇ ದಿನದ ಅಂತ್ಯಕ್ಕೆ ಭಾರತ 5 ವಿಕೆಟ್ ನಷ್ಟಕ್ಕೆ 151 ರನ್‌ಗಳಿಸಿದೆ. ಅಜಿಂಕ್ಯಾ ರಹಾನೆ ಔಟಾಗದೇ 29 ರನ್, ಶ್ರೀಕಾರ್ ಭರತ್ ಔಟಾಗದೇ 5 ರನ್ ಗಳಿಸಿದ್ದಾರೆ. ಮಿಚೆಲ್ ಸ್ಟ್ರಾಕ್, ಪ್ಯಾಟ್ ಕಮ್ಮಿನ್ಸ್, ಸ್ಕಾಟ್ ಬೊಲಾಂಡ್, ಕ್ಯಾಮರೂನ್ ಗ್ರೀನ್, ನಥನ್ ಲಿಯಾನ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ಗ್ಯಾಂಗ್‍ಸ್ಟರ್ ಅತೀಕ್ ಭೂಮಿಯಲ್ಲಿ ಬಡವರಿಗೆ ಮನೆ ನಿರ್ಮಾಣ – ಶೀಘ್ರವೇ ಹಂಚಲಿದ್ದಾರೆ ಯೋಗಿ
Advertisement
Advertisement
ಮೊದಲ ದಿನ ದಿನ 3 ವಿಕೆಟ್ ನಷ್ಟಕ್ಕೆ 327 ರನ್‌ಗಳಿಸಿದ್ದ ಆಸ್ಟ್ರೇಲಿಯಾ ಇಂದು 142 ರನ್ ಸೇರಿಸಿ ಅಂತಿಮವಾಗಿ 469 ರನ್‌ಗಳಿಗೆ ಆಲೌಟ್ ಆಯ್ತು.
91 ರನ್‌ಗಳಿಸಿದ್ದ ಸ್ಮಿತ್ ಇಂದು 121 ರನ್ (268 ಎಸೆತ, 19 ಬೌಂಡರಿ) ಗಳಿಸಿ ಔಟಾದರೆ 146 ರನ್ ಗಳಿಸಿದ್ದ ಟ್ರಾವಿಸ್ ಹೆಡ್ 163 ರನ್ (174 ಎಸೆತ, 25 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು. ಅಲೆಕ್ಸ್ ಕ್ಯಾರಿ 48 ರನ್ (69 ಎಸೆತ, 7 ಬೌಂಡರಿ, 1 ಸಿಕ್ಸರ್) ಹೊಡೆದರು.
ಸಿರಾಜ್ 4 ವಿಕೆಟ್ ಪಡೆದರೆ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ತಲಾ 2 ವಿಕೆಟ್ ಕಿತ್ತರು. ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.