ಲಂಡನ್: ಆಸ್ಟ್ರೇಲಿಯಾ (Australia) ವಿರುದ್ಧ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ICC World Test Championship Final) ಪಂದ್ಯದಲ್ಲಿ ಕೀಪರ್ ಕೆಎಸ್ ಭರತ್ (KS Bharat) ಹಿಡಿದ ಕ್ಯಾಚ್ ಟೀಂ ಇಂಡಿಯಾದ (Team India) ಅಭಿಮಾನಿಗಳ ಮನಗೆದ್ದಿದೆ.
Advertisement
ಆಸ್ಟ್ರೇಲಿಯಾ ಇನ್ನಿಂಗ್ಸ್‌ನ ಶಾರ್ದೂಲ್ ಠಾಕೂರ್ ಎಸೆದ 22ನೇ ಓವರಿನ 4 ಎಸೆತವನ್ನು ಡೇವಿಡ್ ವಾರ್ನರ್ ಬಲವಾಗಿ ಎಡಗಡೆಗೆ ಹೊಡೆಯಲು ಯತ್ನಿಸಿದರು. ಆದರೆ ಬಾಲ್ ಬ್ಯಾಟ್‌ಗೆ ಸವರಿ ಹಿಂದಕ್ಕೆ ಹೋಯಿತು. ಈ ವೇಳೆ ಭರತ್ ಜಿಗಿದು ಕ್ಯಾಚ್ ಹಿಡಿದರು. ಪರಿಣಾಮ 43 ರನ್(60 ಎಸೆತ, 8 ಬೌಂಡರಿ) ಗಳಿಸಿದ್ದ ಡೇವಿಡ್ ವಾರ್ನರ್ ಔಟಾಗಿ ನಿರಾಸೆಯಿಂದ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದರು.
Advertisement
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಆರಂಭದಲ್ಲೇ ಮೊದಲ ವಿಕೆಟ್ ಕಳೆದುಕೊಂಡರೂ ದಿನದ ಅಂತ್ಯಕ್ಕೆ ಉತ್ತಮ ಮೊತ್ತ ಗಳಿಸಿದೆ. 85 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 327 ರನ್ ಗಳಿಸಿದೆ.
Advertisement
Advertisement
ಉಸ್ಮಾನ್ ಖವಾಜಾ ಸೊನ್ನೆ ಸುತ್ತಿದರೂ ಎರಡನೇ ವಿಕೆಟಿಗೆ ಡೇವಿಡ್ ವಾರ್ನರ್ ಮತ್ತು ಮಾರ್ನಸ್ ಲಾಬು ಶೇನ್ 108 ಎಸೆತಗಳಲ್ಲಿ 69 ರನ್ ಜೊತೆಯಾಟವಾಡಿದರು. ತಂಡದ ಮೊತ್ತ 71 ಆದಾಗ ಡೇವಿಡ್ ವಾರ್ನರ್ ಔಟಾದ ಬೆನ್ನಲ್ಲೇ 26 ರನ್‌ಗಳಿಸಿದ್ದ ಲಾಬು ಶೇನ್ ಔಟಾದರು. ಇದನ್ನೂ ಓದಿ: ಟೆಸ್ಟ್ ಚಾಂಪಿಯನ್‌ಶಿಪ್ – ಡ್ರಾದಲ್ಲಿ ಅಂತ್ಯಗೊಂಡರೆ, ಮಳೆ ಬಂದರೆ ಏನಾಗುತ್ತೆ?
3 ವಿಕೆಟ್ ನಷ್ಟಕ್ಕೆ 76 ರನ್‌ಗಳಿಸಿದ್ದಾಗ ಸ್ವೀವ್ ಸ್ಮಿತ್ ಮತ್ತು ಟ್ರಾವಿಸ್ ಹೇಡ್ ತಂಡಕ್ಕೆ ಆಸರೆಯಾದರು. ಟ್ರಾವಿಸ್ ಹೆಡ್ ಶತಕ ಹೊಡೆದರೆ ಸ್ಮಿತ್ ಶತಕ ಹೊಡೆಯುವತ್ತಾ ಮುನ್ನುಗ್ಗುತ್ತಿದ್ದಾರೆ.
ಅಂತಿಮವಾಗಿ ಅಸ್ಟ್ರೇಲಿಯಾ ಮೊದಲ ದಿನದ ಅಂತ್ಯಕ್ಕೆ 85 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 327 ರನ್ ಹೊಡೆದಿದೆ. ಏಕದಿನ ಪಂದ್ಯದಂತೆ ಬ್ಯಾಟ್ ಬೀಸಿದ ಟ್ರಾವಿಸ್ ಹೆಡ್ ಔಟಾಗದೇ 146 ರನ್ 156 ಎಸೆತ, 22 ಬೌಂಡರಿ, 1 ಸಿಕ್ಸರ್) ಸ್ವೀವ್ ಸ್ಮಿತ್ ಔಟಾಗದೇ 95 ರನ್(227 ಎಸೆತ, 14 ಬೌಂಡರಿ) ಹೊಡೆದಿದ್ದಾರೆ. ಇವರಿಬ್ಬರೂ ಮುರಿಯದ 4ನೇ ವಿಕೆಟಿಗೆ 370 ಎಸೆತಗಳಲ್ಲಿ 251 ರನ್ ಜೊತೆಯಾಟವಾಡಿದ್ದಾರೆ. ಭಾರತದ ಪರ ಶಮಿ, ಸಿರಾಜ್, ಶಾರ್ದೂಲ್ ಠಾಕೂರ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.