ಬೆಂಗಳೂರು: ಟಿ-20 ವಿಶ್ವಕಪ್ ಕ್ರಿಕೆಟ್ (T-20 World Cup) ಪಂದ್ಯಾವಳಿಯಲ್ಲಿ ಪಾಕಿಸ್ತಾನ ((Pakistan) )ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ದೇಶದ ಜನತೆಗೆ ಭಾರತ ದೀಪಾವಳಿಯ ಉಡುಗೊರೆ ನೀಡಿದೆ. ಇನ್ನೂ ಈ ಹೈವೋಲ್ಟೆಜ್ ಪಂದ್ಯವನ್ನು ವೀಕ್ಷಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹಾಗೂ ಹೊಂಬಾಳೆ ಫಿಲ್ಮ್ಸ್ (Hombale Films) ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
A perfect way to start the T20 World Cup…Deepawali begins 🙂
What a cracking innings by @imVkohli.
Congratulations to the entire team. #ICCT20WorldCup2022
— Amit Shah (@AmitShah) October 23, 2022
Advertisement
ಈ ಸಂಬಂಧ ಟ್ವೀಟ್ ಮಾಡಿರುವ ಅಮಿತ್ ಶಾ ಅವರು, ಟಿ-20 ವಿಶ್ವಕಪ್ ಪಂದ್ಯಕ್ಕೆ ಉತ್ತಮ ಶುಭಾರಂಭ. ದೀಪಾವಳಿ (Deepavali) ಶುರುವಾಗಿದೆ. ವಿರಾಟ್ ಕೊಹ್ಲಿ ಅವರಿಂದ ಎಂತಹ ರೋಚಕ ಆಟ.. 2022ರ ಟಿ-20 ವಿಶ್ವಕಪ್ ಪಂದ್ಯವಾಡುತ್ತಿರುವ ಭಾರತ ತಂಡಕ್ಕೆ (Team India) ಧನ್ಯವಾದಗಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂಡೋ-ಪಾಕ್ ಕದನ – ಭಾರತಕ್ಕೆ 160 ರನ್‌ಗಳ ಗುರಿ
Advertisement
Lights and Virat will guide you home ????
Best and Virat wishes for Deepavali ????
Cometh the hour Cometh the man
???? #KingKohli
— Hombale Films (@hombalefilms) October 23, 2022
Advertisement
ಮತ್ತೊಂದೆಡೆ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಸ್ಮ್, ದೀಪ ಹಚ್ಚಿ ನಿಮ್ಮ ಮನೆಗೆ ಹೋಗಲು ವಿರಾಟ್ ಮಾರ್ಗದರ್ಶನ ನೀಡಿದ್ದಾರೆ. ವಿರಾಟ್ ಅವರಿಂದ ದೀಪಾವಳಿಯ ಬೆಸ್ಟ್ ವಿಶ್. ಪ್ರತಿಯೊಬ್ಬ ಮನುಷ್ಯನಿಗೂ ಸಮಯ ಬರುತ್ತದೆ ಎಂದು ಟ್ವೀಟ್ ಮಾಡಿದೆ. ಇದನ್ನೂ ಓದಿ: ಕೊಹ್ಲಿ, ಪಾಂಡ್ಯ ಪಂಚ್‍ಗೆ ಪಾಕ್ ಪಂಚರ್ – ಶುಭಾರಂಭ ಕಂಡ ಭಾರತ
Advertisement
ಟಿ-20 ವಿಶ್ವಕಪ್ ಆರಂಭವಾಗಿದ್ದು, ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದ್ದ ಪಾಕ್ ತಂಡ ಟೀಂ ಇಂಡಿಯಾಕ್ಕೆ 160 ರನ್‍ಗಳ ಗುರಿ ನೀಡಿತ್ತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾಕ್ಕೂ ಆರಂಭಿಕ ಆಘಾತ ಎದುರಾಗಿತ್ತು. ಆದರೆ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ಆಲ್‍ರೌಂಡರ್ ಆಟದಿಂದ ಭರ್ಜರಿ ಗೆಲವು ಸಾಧಿಸಿದೆ. ಈ ಪಂದ್ಯದಲ್ಲಿ 53 ಎಸೆತಗಳನ್ನು ಎದುರಿಸಿದ ಕೊಹ್ಲಿ 6 ಬೌಂಡರಿ, 4 ಸಿಕ್ಸರ್‌ನೊಂದಿಗೆ 82 ರನ್ ಸಿಡಿಸಿ ಟೀಂ ಇಂಡಿಯಾಗೆ ಆಸರೆಯಾದರು.