ಮಿಚೆಲ್‌ ಶತಕದ ಅಬ್ಬರ – ಭಾರತ ಗೆಲುವಿಗೆ 274 ರನ್‌ ಗುರಿ

Public TV
2 Min Read
Daryl Mitchell

ಧರ್ಮಶಾಲಾ: ಇಲ್ಲಿನ ಹೆಚ್‌ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್‌ 2023 (World Cup 2023) ಟೂರ್ನಿಯಲ್ಲಿ ಭಾರತಕ್ಕೆ ನ್ಯೂಜಿಲೆಂಡ್‌ 274 ರನ್‌ಗಳ ಗುರಿ ನೀಡಿದೆ.

Daryl Mitchell and Rachin Ravindra

ಟಾಸ್‌ ಗೆದ್ದ ಭಾರತ ತಂಡ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡು ನ್ಯೂಜಿಲೆಂಡ್‌ (India vs NewZealand) ಅನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. 50 ಓವರ್‌ಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡು ನ್ಯೂಜಿಲೆಂಡ್‌ 273 ರನ್‌ ಗಳಿಸಿತು. ಇದನ್ನೂ ಓದಿ: ಇಶಾನ್‌ಗೆ ಜೇನುಹುಳು ಕಂಟಕ, ಸೂರ್ಯನಿಗೆ ಮೊಣಕೈ ಗಾಯ – ಪಂದ್ಯ ಆರಂಭಕ್ಕೂ ಮುನ್ನವೇ ಭಾರತಕ್ಕೆ ತ್ರಿಬಲ್‌ ಶಾಕ್‌

ನ್ಯೂಜಿಲೆಂಡ್‌ ಬ್ಯಾಟಿಂಗ್‌ನಲ್ಲಿ ಶುಭಾರಂಭ ನೀಡುವಲ್ಲಿ ಎಡವಿತು. ಆರಂಭಿಕರಾಗಿ ಕಣಕ್ಕಿಳಿದ ಡೆವೊನ್ ಕಾನ್ವೇ ಶೂನ್ಯಕ್ಕೆ ಔಟ್‌ ಆಗಿ ನಿರ್ಗಮಿಸಿದರು. ವಿಲ್ ಯಂಗ್ ಕೇವಲ 17 ರನ್‌ಗಳಿಸಿ ಮಹಮ್ಮದ್‌ ಶಮಿ ಬೌಲಿಂಗ್‌ಗೆ ಕ್ಲೀನ್‌ ಬೌಲ್ಡ್‌ ಆದರು.

Mohammed Shami

ನಂತರ ಬಂದ ರಚಿನ್ ರವೀಂದ್ರ ಹಾಗೂ ಡೇರಿಲ್ ಮಿಚೆಲ್ ಉತ್ತಮ ಜೊತೆಯಾಟ ಆಡಿದರು. ಈ ಇಬ್ಬರೂ ಬ್ಯಾಟರ್‌ಗಳು 152 ಬಾಲ್‌ಗಳಿಗೆ 159 ರನ್‌ ಜೊತೆಯಾಟವಾಡಿ ಸವಾಲಿನ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ರಚಿನ್ ರವೀಂದ್ರ 87 ಬಾಲ್‌ಗಳಿಗೆ 75 ರನ್‌ (4 ಫೋರ್‌, 1 ಸಿಕ್ಸರ್‌) ಗಳಿಸಿದರು. ಡೇರಿಲ್ ಮಿಚೆಲ್ ಶತಕ ಸಿಡಿಸಿ ಮಿಂಚಿದರು. 127 ಬಾಲ್‌ಗಳಿಗೆ 130 ರನ್‌ ಬಾರಿಸಿ (9 ಫೋರ್‌, 5 ಸಿಕ್ಸರ್‌) ಭಾರತದ ಬೌಲರ್‌ಗಳನ್ನು ಕಾಡಿದರು. ಇದನ್ನೂ ಓದಿ: ಕ್ಲಾಸೆನ್‌ ಅಬ್ಬರದ ಶತಕ – ಇಂಗ್ಲೆಂಡ್‌ ವಿರುದ್ಧ ಆಫ್ರಿಕಾಗೆ 229 ರನ್‌ ಭರ್ಜರಿ ಜಯ

IND vs NZ

ನಂತರ ಬಂದ ಯಾವೊಬ್ಬ ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಟಾಮ್ ಲ್ಯಾಥಮ್ (5), ಗ್ಲೆನ್ ಫಿಲಿಪ್ಸ್ (23), ಮಾರ್ಕ್ ಚಾಪ್ಮನ್ (6), ಮಾರ್ಕ್ ಚಾಪ್ಮನ್ (1), ಮ್ಯಾಟ್ ಹೆನ್ರಿ (0), ಲಾಕಿ ಫರ್ಗುಸನ್ (1) ರನ್‌ ಗಳಿಸಲಷ್ಟೇ ಶಕ್ತರಾದರು.

ಭಾರತದ ಪರ ಮಹಮ್ಮದ್‌ ಶಮಿ 5 ವಿಕೆಟ್‌ ಕಬಳಿಸಿ ಮಿಂಚಿದರು. ಜಸ್ಪ್ರಿತ್‌ ಬೂಮ್ರಾ 1, ಮಹಮ್ಮದ್‌ ಸಿರಾಜ್‌ 1, ಕುಲದೀಪ್‌ ಯಾದವ್‌ 2 ಕಿಕೆಟ್‌ ಕಿತ್ತರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article