ಅಹಮದಾಬಾದ್: ಭಾರತ ಈಗ ನವರಾತ್ರಿ ಸಂಭ್ರಮಕ್ಕೆ ಅಣಿಯಾಗುತ್ತಿದೆ. ಬದ್ಧವೈರಿ ಪಾಕಿಸ್ತಾನ ತಂಡವನ್ನು ಟೀಂ ಇಂಡಿಯಾ ಶನಿವಾರ (ಅ.14) ವಿಶ್ವಕಪ್ ಸಮರದಲ್ಲಿ ಹುರಿದು ಮುಕ್ಕಿದರೆ ದೇಶದೆಲ್ಲೆಡೆ ಸಂಭ್ರಮ ಇಮ್ಮಡಿಗೊಳ್ಳಲಿದೆ. ಜೊತೆಗೆ ಅಭಿಮಾನಿಗಳಿಗೆ ನವರಾತ್ರಿಗೆ ಗೆಲುವಿನ ಉಡುಗೊರೆಯೂ ಸಿಗಲಿದೆ. ಈ ಪಂದ್ಯಕ್ಕಾಗಿ ಕೇವಲ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ, ಇಡೀ ಕ್ರಿಕೆಟ್ ಜಗತ್ತೇ ಕಾಯುತ್ತಿದೆ.
All in readiness for #INDvPAK ????????????#TeamIndia | #CWC23 | #MeninBlue pic.twitter.com/sSvHS3xESB
— BCCI (@BCCI) October 13, 2023
Advertisement
ಶನಿವಾರ ಮಧ್ಯಾಹ್ನ 2 ಗಂಟೆಗೆ ಪಂದ್ಯ ಆರಂಭವಾಗಲಿದೆ. 1.32 ಲಕ್ಷ ಆಸನಗಳ ಸಾಮರ್ಥ್ಯ ಹೊಂದಿರುವ ವಿಶ್ವದ ಅತಿದೊಡ್ಡ ಕ್ರೀಡಾಂಗಣದಲ್ಲಿ ಬದ್ಧ ವೈರಿಯನ್ನು ಬಗ್ಗು ಬಡಿದು ಭಾರತ ಸಂಭ್ರಮಿಸಲಿ ಅನ್ನೋದು 140 ಕೋಟಿ ಭಾರತೀಯರ ಪ್ರಾರ್ಥನೆ. ಅಭಿಮಾನಿಗಳ ಬೆಂಬಲವೂ ರೋಹಿತ್ ಶರ್ಮಾ ಪಡೆಯ ಬೆನ್ನಿಗೆ ಇರಲಿದೆ. ಇದನ್ನೂ ಓದಿ: ಭಾರತ, ಹಿಂದೂ ಧರ್ಮ ಅವಹೇಳನ – ಗಡಿಪಾರಾದ ಬಳಿಕ ಕ್ಷಮೆ ಕೇಳಿದ ಪಾಕ್ ನಿರೂಪಕಿ
Advertisement
1992 ರಿಂದ 2019ರ ವರೆಗೂ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ 7 ಪಂದ್ಯಗಳನ್ನಾಡಿರುವ ಭಾರತ, 7 ಬಾರಿಯೂ ವಿಜಯದ ಮಾಲೆ ಹಾಕಿಕೊಂಡಿದೆ. ಈ ವಿಶ್ವಕಪ್‌ನಲ್ಲಿ ಆಡುತ್ತಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ಬಲಾಬಲವನ್ನು ನೋಡಿದಾಗ, ಈ ಸಲವೂ ಭಾರತವೇ ಗೆಲ್ಲುವ ಫೇವರಿಟ್ ಆಗಿದೆ. ಭಾರತ 8ನೇ ಜಯಕ್ಕೆ ಹಪಹಪಿಸುತ್ತಿದ್ದರೆ, ಮೊದಲ ಜಯ ಸಾಧಿಸಿ ಇತಿಹಾಸ ಸೃಷ್ಟಿಸುವ ತವಕದಲ್ಲಿದೆ. ಇದನ್ನೂ ಓದಿ: 7-0 ದಾಖಲೆ ಬಗ್ಗೆ ಚಿಂತೆಯಿಲ್ಲ, ಈ ಬಾರಿ ಮುರಿಯುತ್ತೇವೆ: ಅಜಂ ವಿಶ್ವಾಸ
Advertisement
Advertisement
ಭಾರತ ತಂಡದಲ್ಲಿರುವ ಬ್ಯಾಟರ್‌ಗಳೆಲ್ಲರೂ ಕ್ರಿಕೆಟ್ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಬೌಲರ್‌ಗಳೂ ಒಬ್ಬರಿಗಿಂತ ಒಬ್ಬರು ದೊಡ್ಡ ರೆಕಾರ್ಡ್ ಮಾಡಿದವರಿದ್ದಾರೆ. ಈ ಪಂದ್ಯದಲ್ಲಿ ಲಯ, ಸಾಮರ್ಥ್ಯ, ಪ್ರತಿಭೆ ಇವೆಲ್ಲಕ್ಕಿಂತ ಮಿಗಿಲಾಗಿ ಯಾರು ಭಾವನೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಾರೋ ಅವರಿಗೆ ವಿಜಯಲಕ್ಷ್ಮಿ ಒಲಿಯುತ್ತಾಳೆ. ಹೀಗಾಗಿ ರೋಹಿತ್ ಪಡೆಗಿರುವ ಅತಿದೊಡ್ಡ ಸವಾಲು ಭಾವನೆಗಳ ಬಂಧನಕ್ಕೆ ಒಳಗಾಗದಿರುವುದು.
ಅಫ್ಘಾನಿಸ್ತಾನ ವಿರುದ್ಧ ಸಿಡಿಲಬ್ಬರದ ಆಟವಾಡಿದ್ದ ರೋಹಿತ್, ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಮೇಲೆ ತಂಡ ಹೆಚ್ಚು ನಿರೀಕ್ಷೆ ಇಟ್ಟಿದ್ದು, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ ಸಹ ನಿರ್ಣಾಯಕ ಪಾತ್ರ ವಹಿಸಬೇಕಾಗುತ್ತದೆ. ಇದನ್ನೂ ಓದಿ: ಇಂಡೋ-ಪಾಕ್ ಕದನ: 10 ಸೆಕೆಂಡ್ ಜಾಹೀರಾತಿನ ಬೆಲೆ ಕೇಳಿದ್ರೆ ಎದೆ ಬಡಿತ ಹೆಚ್ಚಿಸುತ್ತೆ..!
ಅಹಮದಾಬಾದ್‌ನ ಇತ್ತೀಚಿನ ದಾಖಲೆಯನ್ನು ಪರಿಗಣಿಸಿ, ವೇಗದ ಬೌಲರ್‌ಗಳಿಗೆ ಹೆಚ್ಚು ನೆರವು ಸಿಗಲಿದೆ ಎನ್ನುವ ನಂಬಿಕೆಯೊಂದಿಗೆ ಭಾರತ ಕಣಕ್ಕಿಳಿದರೆ ಮೊಹಮದ್ ಶಮಿಗೆ ಅವಕಾಶ ಸಿಗಬಹುದು. ಶಮಿ ಐಪಿಎಲ್‌ನಲ್ಲಿ ಗುಜರಾತ್ ತಂಡದಲ್ಲಿ ಆಡುವ ಕಾರಣ, ಇಲ್ಲಿನ ಪಿಚ್ ಬಗ್ಗೆ ಅವರಿಗೆ ಹೆಚ್ಚಿನ ಮಾಹಿತಿ ಇರಲಿದೆ. ಒಂದು ವೇಳೆ ದೊಡ್ಡ ಬೌಂಡರಿಗಳು ಎನ್ನುವ ಅಂಶವನ್ನು ತಲೆಯಲ್ಲಿಟ್ಟುಕೊಂಡು ಆಡುವ ಹನ್ನೊಂದನ್ನು ನಿರ್ಧರಿಸಿದರೆ ಆಗ ಆರ್.ಅಶ್ವಿನ್‌ರನ್ನು ಆಡಿಸಬಹುದು ಎಂದು ಹೇಳಲಾಗಿದೆ.
Web Stories