ಮುಂಬೈ: ಏಕದಿನ ವಿಶ್ವಕಪ್‍ನಲ್ಲಿ (World Cup) ರನ್‍ಗಳ ಮಳೆ ಸುರಿಸುತ್ತಿರುವ ವಿರಾಟ್ ಕೊಹ್ಲಿ ದಾಖಲೆಗಳ ಕುದುರೆಯ ಬೆನ್ನೇರಿದ್ದಾರೆ. ಈ ಬಾರಿ ಈಗಾಗಲೇ 5 ಅರ್ಧಶತಕ ಮತ್ತು 2 ಶತಕ ಬಾರಿಸಿ, ಹಲವು ದಾಖಲೆಗಳನ್ನ ಬದಿಗಿರಿಸಿದ್ದಾರೆ. ಇಂದಿನ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‍ನಲ್ಲೂ ಹಲವು ದಾಖಲೆಗಳನ್ನು ಮುರಿಯಲು ಕೊಹ್ಲಿ ಸಜ್ಜಾಗಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸೆಂಚುರಿ ಸಿಡಿಸಲು ವಿಫಲರಾಗಿದ್ದರು. ಈ ವೇಳೆ ತೆಂಡೂಲ್ಕರ್ (Sachin Tendulkar) ಅವರ ಶತಕಗಳ ದಾಖಲೆಯನ್ನ ಮುರಿಯುತ್ತಾರೆ ಎಂಬ ಅಭಿಮಾನಿಗಳ ನಿರೀಕ್ಷೆಗೆ ತಣ್ಣೀರು ಬಿದ್ದಿತ್ತು. ಪಂದ್ಯದಲ್ಲಿ ಕೊಹ್ಲಿ ಅರ್ಧಶತಕ ಬಾರಿಸಿ ಅಂಗಳ ತೊರೆದಿದ್ದರು. ಇದನ್ನೂ ಓದಿ: India Vs New Zealand – ಕೊಹ್ಲಿ, ಕೇನ್ ವಿಲಿಯಮ್ಸನ್ ವಿಶೇಷ ಸಾಧನೆ
Advertisement
ಇಂದಿನ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದರೆ ಏಕದಿನ ಕ್ರಿಕೆಟ್‍ನಲ್ಲಿ 50 ಶತಕಗಳ ದಾಖಲೆ ನಿರ್ಮಿಸಲಿದ್ದಾರೆ. ಸಚಿನ್ ತವರಲ್ಲೇ ಅವರ ದಾಖಲೆಯನ್ನು ಕೊಹ್ಲಿ ಮುರಿಯಲಿದ್ದಾರೆ.
Advertisement
Advertisement
ಸಚಿನ್ ಶತಕಗಳ ಜೊತೆಗೆ ಅವರ ವಿಶ್ವಕಪ್ ಟೂರ್ನಿ ಒಂದರಲ್ಲಿ ಅತೀ ಹೆಚ್ಚು ರನ್ ಗಳಿಸುವ ಅವಕಾಶ ಕೊಹ್ಲಿಗಿದೆ. 2003ರ ವಿಶ್ವಕಪ್‍ನಲ್ಲಿ ಸಚಿನ್ 673 ರನ್ಗಳಿಸಿದ್ದರು. ಈ ಮೂಲಕ ವಿಶ್ವಕಪ್ ಟೂರ್ನಿಯೊಂದರಲ್ಲಿ ಅತಿಹೆಚ್ಚು ರನ್ ದಾಖಲಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 20 ವರ್ಷ ಕಳೆದರೂ ಈ ದಾಖಲೆ ಇನ್ನೂ ಸಚಿನ್ ಹೆಸರಿನಲ್ಲೇ ಇದೆ.
Advertisement
ಕೊಹ್ಲಿಗೆ ಮಾಸ್ಟರ್ ಬ್ಲಾಸ್ಟರ್‍ನ ಈ ದಾಖಲೆ ಬ್ರೇಕ್ ಮಾಡಲು ಕೇವಲ 80 ರನ್ ಬೇಕಾಗಿದೆ. ಈ ವಿಶ್ವಕಪ್ ಕೊಹ್ಲಿ ಈವರೆಗೂ ಆಡಿರೋ 9 ಪಂದ್ಯಗಳಿಂದ 594 ರನ್ ಕಲೆಹಾಕಿದ್ದಾರೆ. ಆ ಮೂಲಕ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿರೋ ಬ್ಯಾಟ್ಸ್‍ಮನ್‍ಗಳ ಪಟ್ಟಿಯಲ್ಲಿ ನಂಬರ್ ಒನ್ ಪಟ್ಟದಲ್ಲಿದ್ದಾರೆ. ಇದನ್ನೂ ಓದಿ: ಸೆಮಿ ಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಭಾರತ?