ಮುಂಬೈ: ಏಕದಿನ ವಿಶ್ವಕಪ್ (ICC World Cup 2023) ಟೂರ್ನಿಯ ಅರ್ಹತಾ ಸುತ್ತಿನ ಬಳಿಕ ವಿಶ್ವಕಪ್ ಆಡುವ 10 ತಂಡಗಳನ್ನ ಫೈನಲ್ ಮಾಡಿದ್ದು, BCCI ಟೀಂ ಇಂಡಿಯಾದ ಪರಿಷ್ಕೃತ ವೇಳಾಪಟ್ಟಿಯನ್ನ ಪ್ರಕಟಿಸಿದೆ.
ವಿಶ್ವಕಪ್ ಟೂರ್ನಿಗೆ 8 ತಂಡಗಳು ನೇರ ಪ್ರವೇಶ ಪಡೆದುಕೊಂಡಿದ್ದರಿಂದ ಉಳಿದ ಎರಡು ತಂಡಗಳ ಆಯ್ಕೆಗೆ ಹಣಾಹಣಿ ನಡೆದಿತ್ತು. ಅದರಂತೆ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನ ಬಳಿಕ ಶ್ರೀಲಂಕಾ (SriLanka) ಹಾಗೂ ನೆದರ್ಲೆಂಡ್ (Netherlands) ತಂಡಗಳು ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿವೆ. ಹಾಗಾಗಿ ಬಿಸಿಸಿಐ (BCCI) ಪರಿಷ್ಕೃತ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ.
Advertisement
Advertisement
ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ಟೂರ್ನಿ ನಡೆಯಲಿದೆ. ದೇಶದ 10 ನಗರಗಳಲ್ಲಿ ಟೂರ್ನಿ ನಡೆಯಲಿದ್ದು, ಟೂರ್ನಿಯ ಉದ್ಘಾಟನಾ ಮ್ಯಾಚ್ ಹಾಗೂ ಫೈನಲ್ ಪಂದ್ಯವು ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ಆಯೋಜನೆಗೊಳ್ಳಲಿದೆ.
Advertisement
ನವೆಂಬರ್ 2 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆತಿಥೇಯ ಭಾರತ, ಶ್ರೀಲಂಕಾ ತಂಡವನ್ನ ಎದುರಿಸಲಿದ್ದು, ನವೆಂಬರ್ 11 ರಂದು ಬೆಂಗಳೂರಿನ ನಡೆಯಲಿರುವ ಗ್ರೂಪ್ ಲೀಗ್ ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ ನೆದರ್ಲೆಂಡ್ ತಂಡದ ಎದುರು ಕಣಕ್ಕಿಳಿಯಲಿದೆ. 1983ರಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್ ಟೂರ್ನಿ ಗೆದ್ದುಕೊಂಡಿದ್ದ ಟೀಂ ಇಂಡಿಯಾ 2011ರಲ್ಲಿ ಎಂ.ಎಸ್ ಧೋನಿ ನಾಯಕತ್ವದಲ್ಲಿ ಕೊನೆಯದ್ದಾಗಿ ವಿಶ್ವಚಾಂಪಿಯನ್ ಆಗಿತ್ತು. ಆದ್ರೆ ಇದೇ ಮೊದಲಬಾರಿಗೆ ಟೀಂ ಇಂಡಿಯಾ ಪೂರ್ಣ ಆತಿಥ್ಯದೊಂದಿಗೆ ವಿಶ್ವಕಪ್ ಟೂರ್ನಿ ಆಯೋಜಿಸಿದ್ದು, ದಶಕಗಳ ಬಳಿಕ ಪ್ರಶಸ್ತಿ ಗೆಲ್ಲುವ ಉತ್ಸಾಹದಲ್ಲಿದೆ.
Advertisement
ಗುರುವಾರ ಸ್ಕಾಟ್‌ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ನೆದರ್ಲೆಂಡ್ 4 ವಿಕೆಟ್‌ಗಳ ಜಯ ಸಾಧಿಸಿತು. ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ್ದ ನೆದರ್ಲೆಂಡ್ 42.5 ಓವರ್‌ಗಳಲ್ಲೇ 278 ರನ್‌ಗಳಿಸಿ ಜಯ ಸಾಧಿಸಿತು. ಈ ಮೂಲಕ ನೆದರ್ಲೆಂಡ್ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದುಕೊಂಡರೆ, ವಿಶ್ವಕಪ್ ಟೂರ್ನಿ ಪ್ರವೇಶಿಸಿ ಇತಿಹಾಸ ಸೃಷ್ಟಿಸುವ ಕನಸುಕಂಡಿದ್ದ ಸ್ಕಾಟ್‌ಲೆಂಡ್ ಸೋತು ನಿರಾಸೆ ಅನುಭವಿಸಿದೆ.
ಟೀಂ ಇಂಡಿಯಾ ವಿಶ್ವಕಪ್ ಪರಿಷ್ಕೃತ ವೇಳಾಪಟ್ಟಿ:
ಭಾರತ vs ಆಸ್ಟ್ರೇಲಿಯಾ, ಅಕ್ಟೋಬರ್ 8, ಚೆನ್ನೈ
ಭಾರತ vs ಅಫ್ಘಾನಿಸ್ತಾನ, ಅಕ್ಟೋಬರ್ 11, ದೆಹಲಿ
ಭಾರತ vs ಪಾಕಿಸ್ತಾನ, ಅಕ್ಟೋಬರ್ 15, ಅಹಮದಾಬಾದ್
ಭಾರತ vs ಬಾಂಗ್ಲಾದೇಶ, ಅಕ್ಟೋಬರ್ 19, ಪುಣೆ
ಭಾರತ vs ನ್ಯೂಜಿಲೆಂಡ್, ಅಕ್ಟೋಬರ್ 22, ಧರ್ಮಶಾಲಾ
ಭಾರತ vs ಇಂಗ್ಲೆಂಡ್, ಅಕ್ಟೋಬರ್ 29, ಲಕ್ನೋ
ಭಾರತ vs ಶ್ರೀಲಂಕಾ, ನವೆಂಬರ್ 2, ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ, ನವೆಂಬರ್ 5, ಕೋಲ್ಕತ್ತಾ
ಭಾರತ vs ನೆದರ್ಲೆಂಡ್, ನವೆಂಬರ್ 11, ಬೆಂಗಳೂರು