ರಿಜ್ವಾನ್‌, ಶಫೀಕ್ ಶತಕದಾಟ – ಲಂಕಾ ವಿರುದ್ಧ ಪಾಕ್‌ಗೆ ವಿಶ್ವದಾಖಲೆಯ ಜಯ

Public TV
2 Min Read
Mohammad Rizwan Abdullah Shafique

ಹೈದರಾಬಾದ್‌: ವಿಶ್ವಕಪ್‌ ಟೂರ್ನಿಯಲ್ಲಿ (World Cup Cricket) ವಿಶ್ವದಾಖಲೆಯ (World Record) ರನ್‌ ಚೇಸ್‌ ಮಾಡಿದ ಪಾಕಿಸ್ತಾನ (Pakistan) ಶ್ರೀಲಂಕಾ(Srilanka) ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.

ಗೆಲ್ಲಲು 345 ರನ್‌ಗಳ ಕಠಿಣ ಸವಾಲು ಪಡೆದ ಪಾಕಿಸ್ತಾನ ಮೊಹಮ್ಮದ್‌ ರಿಜ್ವಾನ್‌ (Mohammad Rizwan) ಅಜೇಯ ಶತಕ ಮತ್ತು ಅಬ್ದುಲ್ಲಾ ಶಫೀಕ್ ಅವರ ಶತಕದ ಆಟದಿಂದ 48.2 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 345 ರನ್‌ ಚಚ್ಚುವ ಮೂಲಕ ಸತತ ಎರಡನೇ ಜಯ ಸಾಧಿಸಿತು.

7.2 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ 37 ರನ್‌ ಗಳಿಸಿ ಸಂಕಷ್ಟದಲ್ಲಿದ್ದಾಗ ಅಬ್ದುಲ್ಲಾ ಶಫಿಕ್‌ ಮತ್ತು ರಿಜ್ವಾನ್‌ ಮೂರನೇ ವಿಕೆಟಿಗೆ 156 ಎಸೆತಗಳಲ್ಲಿ 176 ಜೊತೆಯಾಟವಾಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು.

ಅಬ್ದುಲ್ಲಾ ಶಫಿಕ್‌ 113 ರನ್‌(103 ಎಸೆತ, 10 ಬೌಂಡರಿ, 3 ಸಿಕ್ಸರ್)‌ ಹೊಡೆದು ಔಟಾದರೆ ಸೌದ್‌ ಶಕೀಲ್‌ 31 ರನ್‌ ಕೊನೆಯಲ್ಲಿ ಇಫ್ತಿಕಾರ್‌ ಅಹ್ಮದ್‌ ಔಟಾಗದೇ 22 ರನ್‌ (10 ಎಸೆತ, 4 ಬೌಂಡರಿ) ಹೊಡೆದರು. ಔಟಾಗದೇ 131 ರನ್‌ (121 ಎಸೆತ, 8 ಬೌಂಡರಿ, 3 ಸಿಕ್ಸರ್)‌ ಹೊಡೆದ ಮೊಹ್ಮದ್‌ ರಿಜ್ವಾನ್‌ ಅವರಿಗೆ ಪಂದ್ಯಶ್ರೇಷ್ಠ ಗೌರವ ಸಿಕ್ಕಿತು.  ಇದನ್ನೂ ಓದಿ: ಶತಕ ಸಿಡಿಸಿ ಎರಡು ದಾಖಲೆ ಬರೆದ ಮಲಾನ್‌ – ಇಂಗ್ಲೆಂಡ್‌ಗೆ 137ರನ್‌ಗಳ ಭರ್ಜರಿ ಜಯ

ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ಲಂಕಾ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ ಪಾತುಮ್‌ ನಿಸ್ಸಾಂಕ 51 ರನ್‌ (61 ಎಸೆತ, 7 ಬೌಂಡರಿ, 1 ಸಿಕ್ಸರ್‌), ಕುಶಲ್‌ ಪಿರೇರಾ 122 ರನ್‌ (77 ಎಸೆತ, 14 ಬೌಂಡರಿ, 6 ಸಿಕ್ಸರ್) ಕುಸಾಲ್‌ ಮೆಂಡಿಸ್‌ 108 ರನ್‌ (89 ಎಸೆತ, 11 ಬೌಂಡರಿ, 2 ಸಿಕ್ಸರ್)‌ ಹೊಡೆದ ಪರಿಣಾಮ ತಂಡದ ಮೊತ್ತ 9 ವಿಕೆಟ್‌ ನಷ್ಟಕ್ಕೆ 344 ರನ್‌ ಗಳಿಸಿತು. ಅದರಲ್ಲೂ ಮೆಂಡಿಸ್‌ 40 ಎಸೆತಗಳಲ್ಲಿ ಅರ್ಧಶತಕ ಹೊಡೆದರೆ 67 ಎಸೆತಗಳಲ್ಲಿ ಶತಕ ಚಚ್ಚಿದ್ದರು.

ವಿಶ್ವದಾಖಲೆ ಚೇಸಿಂಗ್‌:
ಈ ಹಿಂದೆ 2011ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಐರ್ಲೆಂಡ್‌ 7 ವಿಕೆಟ್‌ ನಷ್ಟಕ್ಕೆ 329 ರನ್‌ ಹೊಡೆದಿದ್ದೇ ಇದೂವರೆಗಿನ ದಾಖಲೆಯ ರನ್‌ ಚೇಸ್‌ ಆಗಿತ್ತು. 2019 ರಲ್ಲಿ ವಿಂಡೀಸ್‌ ವಿರುದ್ಧ ಬಾಂಗ್ಲಾದೇಶ 322 ರನ್‌ ಹೊಡೆದು ಜಯಗಳಿಸಿತ್ತು.

 

Web Stories

Share This Article