ಲಂಡನ್: ವಿಶ್ವಕಪ್ ಕ್ರಿಕೆಟ್ ಟೂರ್ನಿ ಆರಂಭವಾಗಲು 2 ವಾರಗಳಷ್ಟೇ ಬಾಕಿ ಇದ್ದು, ವಿಶ್ವದಾದ್ಯಂತ ಈಗಾಗಲೇ ಕ್ರಿಕೆಟ್ ಜ್ವರ ಹೆಚ್ಚಾಗುತ್ತಿದೆ. ಇದೇ ಸಂದರ್ಭದಲ್ಲಿ ಐಸಿಸಿ ಸಮಿತಿ 2019ರ ವಿಶ್ವಕಪ್ ವಿಜೇತ ತಂಡ ಗಳಿಸುವ ಪ್ರಶಸ್ತಿ ಮೊತ್ತವನ್ನು ಘೋಷಿಸಿದೆ.
10 ತಂಡಗಳು ಭಾಗವಹಿಸುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಒಟ್ಟು 10 ದಶಲಕ್ಷ ಡಾಲರ್ (ಅಂದಾಜು 70.18 ಕೋಟಿ ರೂ.) ನಗದು ಬಹುಮಾನ ನೀಡಲಾಗುತ್ತದೆ. ವಿಜೇತ ತಂಡಕ್ಕೆ 4 ದಶಲಕ್ಷ ಡಾಲರ್ (ಅಂದಾಜು 28.08 ಕೋಟಿ ರೂ.) ರನ್ನರ್ ಅಪ್ ತಂಡ 2 ಮಿಲಿಯನ್ ಡಾಲರ್ (ಅಂದಾಜು 14.04 ಕೋಟಿ ರೂ.) ಗಳಿಸಲಿದೆ. ಇದುವರೆಗೂ ನಡೆದಿರುವ ವಿಶ್ವಕಪ್ ಟೂರ್ನಿಗಳಿಗಿಂತ ಅತಿ ಹೆಚ್ಚು ಬಹುಮಾನ ಮೊತ್ತ ಇದಾಗಿದೆ. ಸೆಮಿ ಫೈನಲ್ ನಲ್ಲಿ ಸೋತ ತಂಡಗಳಿಗೆ ತಲಾ 8,00,00 ಡಾಲರ್ (ಅಂದಾಜು 11.36 ಕೋಟಿ ರೂ.) ಬಹುಮಾನ ಲಭಿಸಲಿದೆ.
Advertisement
Advertisement
ಕಳೆದ ಬಾರಿಯ ವಿಶ್ವಕಪ್ ನಲ್ಲಿ ಗೆಲುವು ಪಡೆದ ತಂಡಕ್ಕೆ 3,975,000 ಡಾಲರ್ (ಅಂದಾಜು 27.90 ಕೋಟಿ ರೂ.), ರನ್ನರ್ ಅಪ್ ತಂಡಕ್ಕೆ 1,750,000 (ಅಂದಾಜು 12.28 ಕೋಟಿ ರೂ.) ಹಾಗೂ ಸೆಮಿ ಫೈನಲಿನಲ್ಲಿ ಸೋತ ತಂಡಗಳಿಗೆ ತಲಾ 600,000 (ಅಂದಾಜು 6.5 ಕೋಟಿ ರೂ.) ಡಾಲರ್ ನೀಡಲಾಗಿತ್ತು.
Advertisement
14 ತಂಡಗಳು ಲೀಗ್ ಹಂತದಲ್ಲಿ 45 ಪಂದ್ಯಗಳಲ್ಲಿ ಭಾಗವಹಿಸಲಿದೆ. ಮೇ 30 ರಿಂದ ಆರಂಭವಾಗುವ ಟೂರ್ನಿ 11 ವಿವಿಧ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿಯ ಸೆಮಿ ಫೈನಲ್ ಪಂದ್ಯಗಳು ಮ್ಯಾಂಚೆಸ್ಟರ್ ಮತ್ತು ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಜುಲೈ 14 ರಂದು ಲಾಡ್ರ್ಸ್ ಅಂಗಳದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
Advertisement
ಎರಡು ಬಾರಿ ವಿಶ್ವಕಪ್ ಚಾಂಪಿಯನ್ ಆಗಿರುವ ಟೀಂ ಇಂಡಿಯಾ ಈ ಟೂರ್ನಿಯಲ್ಲಿ ಕಪ್ ಗೆಲ್ಲುವ ಫೆವರೀಟ್ ತಂಡವಾಗಿದೆ. ಬಿಸಿಸಿಐ ಸಮಿತಿ ಆಯ್ಕೆ ಮಾಡಿರುವ ಆಟಗಾರರ ಪ್ರದರ್ಶನದ ಮೇಲೆ ಎಲ್ಲರ ಗಮನ ಕೇಂದ್ರಿಕೃತವಾಗಿದೆ.