ಲಂಡನ್: ಟೀಂ ಇಂಡಿಯಾ ಆಲೌಂಡರ್ ಆಟಗಾರ ವಿಜಯ್ ಶಂಕರ್ ಅಫ್ಘಾನಿಸ್ತಾನದ ಎದುರಿನ ಪಂದ್ಯಕ್ಕಾಗಿ ತರಬೇತಿ ಪಡೆಯುತ್ತಿದ್ದ ವೇಳೆ ಗಾಯಗೊಂಡಿದ್ದಾರೆ.
ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ವಿಜಯ್ ಶಂಕರ್ ಗಾಯಗೊಂಡಿರುವುದು ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಗಾಯದ ಸಮಸ್ಯೆಯಿಂದ ವಿಜಯ್ ಶಂಕರ್ ತರಬೇತಿಯನ್ನು ಅರ್ಧಕ್ಕೆ ನಿಲ್ಲಿಸಿ ಮೈದಾನದಿಂದ ಹೊರ ನಡೆದಿದ್ದಾರೆ.
Advertisement
Jasprit Bumrah: We don’t obviously want to injure the batsman but sometimes when you play in the nets, nobody tells the batsman not to hit. They hit as well. So it was not the aim. It was unfortunate that he (Vijay Shankar) got hit but he’s okay. He’s fine. pic.twitter.com/hPZ9u5Mkpo
— ANI (@ANI) June 20, 2019
Advertisement
ತರಬೇತಿಯ ವೇಳೆ ವೇಗಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ವಿಜಯ್ ಶಂಕರ್ ಅವರ ಕಾಲಿನ ಬೆರಳಿಗೆ ಚೆಂಡು ಬಡಿದಿದೆ. ಪರಿಣಾಮ ನೋವಿನಿಂದ ಶಂಕರ್ ತೆರಳಿದ್ದಾರೆ. ಸದ್ಯ ವಿಜಯ್ ಶಂಕರ್ ಅವರ ಗಾಯದ ಸಮಸ್ಯೆ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ಮೂಲಗಳ ಪ್ರಕಾರ ವಿಜಯ್ ಶಂಕರ್ ಅವರ ಗಾಯದ ಬಗ್ಗೆ ಹೆಚ್ಚಿನ ಆತಂಕ ಪಡುವಂತಿಲ್ಲ ಎಂಬ ಮಾಹಿತಿ ಲಭಿಸಿದೆ.
Advertisement
Advertisement
ಧವನ್ ಅವರು ತಂಡದಿಂದ ಹೊರಗುಳಿದ ಪರಿಣಾಮ ರಾಹುಲ್ ಬ್ಯಾಟಿಂಗ್ ಬಡ್ತಿ ನೀಡಿ ಆರಂಭಿಕರಾಗಿ ಕಣಕ್ಕೆ ಇಳಿಸಲಾಗಿತ್ತು. ರಾಹುಲ್ ಅವರ ನಂ.4 ಸ್ಥಾನದಲ್ಲಿ ವಿಜಯ್ ಶಂಕರ್ ಅವರಿಗೆ ಸ್ಥಾನ ನೀಡಲಾಗಿತ್ತು. ಇತ್ತ ಟೀಂ ಇಂಡಿಯಾ ಪ್ರಮುಖ ವೇಗಿ ಭುವನೇಶ್ವರ್ ಅವರು ಕೂಡ ಗಾಯದ ಸಮಸ್ಯೆಗೆ ಸಿಲುಕಿದ್ದು, 8 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದಾರೆ. ಅಫ್ಘಾನಿಸ್ತಾನ ಪಂದ್ಯ ಸೇರಿದಂತೆ ಜೂನ್ 30 ರಂದು ನಡೆಲಿರುವ ಇಂಗ್ಲೆಂಡ್ ವಿರುದ್ಧ ಪಂದ್ಯಕ್ಕೂ ಭುವನ್ ಅಲಭ್ಯರಾಗಿದ್ದಾರೆ.
ಧವನ್ ಪ್ರಕರಣದಂತೆಯೇ ಭುವನೇಶ್ವರ್ ಮೇಲೆ ವಿಶ್ವಾಸ ಹೊಂದಿರುವ ಬಿಸಿಸಿಐ ಸಮಿತಿ ಭುವಿ ಚೇತರಿಸಿಕೊಳ್ಳಲಿದ್ದಾರೆ ಎಂದಿದೆ. ಇತ್ತ ಭುವನೇಶ್ವರ್ ಅವರು ಕೂಡ ಕಠಿಣ ಅಭ್ಯಾಸದಿಂದ ದೂರ ಉಳಿದಿದ್ದಾರೆ. ಒಂದೊಮ್ಮೆ ಭುವನೇಶ್ವರ್ ಕೂಡ ಸರಣಿಯಿಂದ ಹೊರಗುಳಿದರೆ ಯುವ ವೇಗಿ ಖಲೀಲ್ ಅಹ್ಮದ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಆದರೆ ಅನುಭವಿ ಆಟಗಾರರ ಪರ ಬಿಸಿಸಿಐ ಒಲವು ತೋರಿದರೆ ಇಶಾಂತ್ ಶರ್ಮಾ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]