ಮುಂಬೈ: 2019 ಐಸಿಸಿ ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಹೊಸ ವಿನ್ಯಾಸದ ಆಟಗಾರರ ಜರ್ಸಿಯನ್ನು ರಿವೀಲ್ ಮಾಡಿದ್ದು, ತಂಡದ ಆಟಗಾರರು ಜೆರ್ಸಿಯನ್ನು ತೊಟ್ಟು ಪೋಸ್ ಕೊಟ್ಟಿದ್ದಾರೆ.
ಜೆರ್ಸಿಯಲ್ಲಿ ಮೂರು ವಿಶೇಷ ಸ್ಟಾರ್ ಗಳನ್ನು ನೀಡಲಾಗಿದ್ದು, ಇವು ಭಾರತ ಗೆದ್ದಿರುವ ವಿಶ್ವಕಪ್‍ಗಳ ಸಂಕೇತಗಳಿದೆ. ಜೆರ್ಸಿಯ ಹಿಂದಿನ ಒಳಭಾಗದಲ್ಲಿ ಮೂರು ವಿಶ್ವಕಪ್ ಬಗ್ಗೆ ಮಾಹಿತಿ ಪ್ರಿಂಟ್ ಮಾಡಲಾಗಿದೆ. ಇದರಲ್ಲಿ ವಿಶ್ವಕಪ್ ಗೆದ್ದ ದಿನಾಂಕ ಹಾಗೂ ಸ್ಕೋರ್ ವಿವರಗಳನ್ನು ನೀಡಲಾಗಿದೆ.
Advertisement
Advertisement
ಜೆರ್ಸಿಯ ಭುಜದ ಭಾಗ ಸ್ಕೈ ಬ್ಲೂ ಬಣ್ಣದಿಂದ ಕೂಡಿದ್ದರೆ, ಎದೆ ಭಾಗ ಡಾರ್ಕ್ ಸ್ಕೈ ಬ್ಲೂ ಬಣ್ಣ ಹೊಂದಿದೆ. ಆದರೆ ಈ ಹಿಂದೆ ಜೆರ್ಸಿ ಮೇಲಿದ್ದ ತ್ರಿವರ್ಣ ಧ್ವಜದ ಚಿಹ್ನೆಯನ್ನು ಕೈ ಬಿಡಲಾಗಿದೆ.
Advertisement
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಧೋನಿ, ರೋಹಿತ್ ಶರ್ಮಾ ಸೇರಿದಂತೆ ಹಲವು ಆಟಗಾರರು ಜೆರ್ಸಿಯನ್ನು ಅನಾವರಣ ಮಾಡಿದ್ದಾರೆ. ವಿಶೇಷವೆಂದರೆ 1983, 2011 ಏಕದಿನ ವಿಶ್ವಕಪ್ ಹಾಗೂ 2007ರ ಟಿ20 ವಿಶ್ವಕಪ್ ವೇಳೆ ಧರಿಸಿದ್ದ ಜೆರ್ಸಿಯ ಎಲ್ಲಾ ಬಣ್ಣಗಳನ್ನು ಈ ಭಾರಿ ವಿನ್ಯಾಸ ಮಾಡಲಾಗಿದೆ. ಇದು ತಂಡಕ್ಕೆ ಪ್ರೇರಣೆ ಆಗಲಿದೆ ಎಂದು ಮಾಜಿ ನಾಯಕ ಧೋನಿ ಪ್ರತಿಕ್ರಿಯೆ ನೀಡಿದ್ದಾರೆ.
Advertisement
ಮೇ 30 ರಿಂದ ಇಂಗ್ಲೆಂಡ್‍ನಲ್ಲಿ ಆರಂಭವಾಗಲಿರುವ ವಿಶ್ವಕಪ್ ಟೂರ್ನಿಯ ಸಿದ್ಧತೆಯಲ್ಲಿ ಟೀಂ ಇಂಡಿಯಾ ಇದ್ದು, ಆಸೀಸ್ ವಿರುದ್ಧ ಏಕದಿನ ಸರಣಿ ತಂಡ ಕಂಬಿನೇಷನ್ ರೂಪಿಸಲು ಸಹಾಯಕವಾಗಲಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.
ಇತ್ತೀಷೆಗಷ್ಟೇ ಮುಕ್ತಾಯವಾದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಸೋತಿದ್ದು, ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ವಿಶ್ವಕಪ್ ಟೂರ್ನಿಗೆ ವಿಶ್ವಾಸ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಭಾರತ ತನ್ನ ವಿಶ್ವಕಪ್ ಜರ್ನಿಯನ್ನು ಜೂನ್ 5 ರಂದು ದಕ್ಷಿಣ ಆಫ್ರಿಕಾವನ್ನು ಎದುರಿಸುವ ಮೂಲಕ ಆರಂಭಿಸಲಿದೆ.
#WelcomeHomeAbhinandan You rule the skies and you rule our hearts. Your courage and dignity will inspire generations to come ???????? #TeamIndia pic.twitter.com/PbG385LUsE
— BCCI (@BCCI) March 1, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv