ಮ್ಯಾಂಚೆಸ್ಟರ್: ವಿಶ್ವಕಪ್ ಕ್ರಿಕೆಟ್‍ನಲ್ಲಿ ವಿಂಡೀಸ್‍ಗೆ ಭಾರತ 269 ರನ್‍ಗಳ ಗುರಿಯನ್ನು ನೀಡಿದೆ.
ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್‍ಗಳ ವೈಫಲ್ಯದ ನಡುವೆಯೂ ಕೊಹ್ಲಿ, ಧೋನಿ ಅರ್ಧಶತಕ, ಪಾಂಡ್ಯ, ರಾಹುಲ್ ಉತ್ತಮ ಆಟದಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 268 ರನ್ ಗಳಿಸಿತು. ಇದನ್ನೂ ಓದಿ: ಸಚಿನ್, ಲಾರಾ ಹಿಂದಿಕ್ಕಿ ಕೊಹ್ಲಿ ವಿಶ್ವದಾಖಲೆ
Advertisement
38.2 ಓವರ್‌ಗಳಲ್ಲಿ 180 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಾಗ ಭಾರತ 250 ರನ್‍ಗಳ ಗಡಿಯನ್ನು ದಾಟುವುದು ಅನುಮಾನವಾಗಿತ್ತು. ಆದರೆ ಪಾಂಡ್ಯ ಮತ್ತು ಧೋನಿ ಗಟ್ಟಿ ನಿಂತು ಆಡಿದ ಪರಿಣಾಮ ಭಾರತ ಉತ್ತಮ ಮೊತ್ತವನ್ನು ಪೇರಿಸಿದೆ.
Advertisement
Advertisement
1 ಸಿಕ್ಸರ್, 1 ಬೌಂಡರಿ ಹೊಡೆದು ಉತ್ತಮವಾಗಿ ಆಡುತ್ತಿದ್ದ ರೋಹಿತ್ ಶರ್ಮಾ 18 ರನ್ ಗಳಿಸಿ ಔಟಾದರು. ಮೂರನೇ ಅಂಪೈರ್ ಈ ಔಟ್ ತೀರ್ಪು ನೀಡಿದ್ದು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ: 3ನೇ ಅಂಪೈರ್ ಬೇಡ, 4ನೇ ಅಂಪೈರ್ ಬೇಕು – ಐಸಿಸಿ ವಿರುದ್ಧ ನೆಟ್ಟಿಗರು ಕಿಡಿ
Advertisement
ಎರಡನೇ ವಿಕೆಟಿಗೆ ರಾಹುಲ್ ಮತ್ತು ಕೊಹ್ಲಿ 69 ರನ್ ಜೊತೆಯಾಟವಾಡಿದರು. ರಾಹುಲ್ 48 ರನ್(64 ಎಸೆತ, 4 ಬೌಂಡರಿ) ಹೊಡೆದರೆ ಕೊಹ್ಲಿ 72 ರನ್( 82 ಎಸೆತ, 8 ಬೌಂಡರಿ) ಹೊಡೆದು ಔಟಾದರು.
50 for MS Dhoni!
It's his first #CWC19 half-century and 72nd in ODI cricket! #WIvIND #TeamIndia pic.twitter.com/wsBhWpnV7f
— ICC Cricket World Cup (@cricketworldcup) June 27, 2019
ನಂತರ ಬಂದ ವಿಜಯ್ ಶಂಕರ್ ಮತ್ತು ಕೇದಾರ್ ಜಾಧವ್ ಕ್ರಮವಾಗಿ 14, 7 ರನ್ ಗಳಿಸಿ ಪೆವಿಲಿಯನ್‍ಗೆ ನಡೆದರು. ಕೊನೆಯಲ್ಲಿ ಧೋನಿ ಮತ್ತು ಪಾಂಡ್ಯ ಬಿರುಸಿನ ಬ್ಯಾಟಿಂಗ್ ನಡೆಸಿ 6ನೇ ವಿಕೆಟಿಗೆ 60 ಎಸೆತಗಳಲ್ಲಿ 70 ರನ್ ಜೊತೆಯಾಟವಾಡಿದರು. ಪಾಂಡ್ಯ 46 ರನ್(38 ಎಸೆತ, 5 ಬೌಂಡರಿ) ಹೊಡೆದರೆ ಧೋನಿ 56 ರನ್(61 ಎಸೆತ,3 ಬೌಂಡರಿ, 2 ಸಿಕ್ಸರ್) ಸಿಡಿಸಿದರು. 50ನೇ ಓವರ್‍ನಲ್ಲಿ ಧೋನಿ 2 ಸಿಕ್ಸರ್, ಒಂದು ಬೌಂಡರಿ ಸಿಡಿಸಿ ರನ್ ಏರಿಸಿದರು.
ರೋಚ್ ಮೂರು ವಿಕೆಟ್ ಪಡೆದರೆ, ಕೊಟ್ರೆಲ್ ಮತ್ತು ಹೋಲ್ಡರ್ ತಲಾ 2 ವಿಕೆಟ್ ಪಡೆದರು.
A disciplined bowling performance from West Indies restricts India to 268/7. #ViratKohli top-scored with a 82-ball 72, while Kemar Roach (3/36) was the ⭐ with the ball. #WIvIND | #CWC19#MenInMaroon#TeamIndia pic.twitter.com/2AVEqRvwo3
— ICC Cricket World Cup (@cricketworldcup) June 27, 2019