ಲಂಡನ್: ಟೀಂ ಇಂಡಿಯಾ, ಪಾಕಿಸ್ತಾನದ ವಿರುದ್ಧ ಭಾನುವಾರ ನಡೆದ ಹೈವೋಲ್ಟೇಜ್ ಕದನದಲ್ಲಿ ಗೆದ್ದು ಸಂಭ್ರಮಿಸಿದ್ದು, ಪಂದ್ಯದಲ್ಲಿ ತಂಡದ ಆಟಗಾರರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.
ಪಂದ್ಯದಲ್ಲಿ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಮೇಲಿನ ತನ್ನ ಮೈಲುಗೈಯನ್ನ ಮುಂದುವರಿಸಿದ್ದು, ಇದುವರೆಗೂ ಆಡಿರುವ 7 ಪಂದ್ಯಗಳಲ್ಲಿ ಗೆಲುವು ಪಡೆದಿದೆ. ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ 89 ರನ್ ಗಳ ಅಂತರದಲ್ಲಿ 3ನೇ ಅತಿ ಹೆಚ್ಚು ಅಂತರದಿಂದ ಗೆಲುವು ಪಡೆದಿದೆ. 2015 ರಲ್ಲಿ ಪಾಕ್ ವಿರುದ್ಧ 76 ರನ್ ಗೆಲುವು ಪಡೆದಿದ್ದು ಇದುವರೆಗಿನ ದಾಖಲೆ ಆಗಿತ್ತು.
Advertisement
Advertisement
ಪಂದ್ಯದಲ್ಲಿ ಟಾಸ್ಟ್ ಗೆದ್ದ ಸರ್ಫರಾಜ್ ಅಹಮದ್ ಮೊದಲ ಬಾರಿಗೆ ಟಾಸ್ ಗೆದ್ದು ಭಾರತದ ವಿರುದ್ಧ ಫಿಲ್ಡೀಂಗ್ ಆಯ್ದುಕೊಂಡ ಕ್ಯಾಪ್ಟನ್ ಆಗಿದ್ದಾರೆ. ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸುವ ಮೂಲಕ ಪಾಕ್ ವಿರುದ್ಧ ಏಕದಿನ ಕ್ರಿಕೆಟ್‍ನಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿದ ಖ್ಯಾತಿ ಪಡೆದರು. 2018ರ ಏಷ್ಯಾ ಕಪ್ ನಲ್ಲಿ ರೋಹಿತ್ ಪಾಕ್ ವಿರುದ್ಧ ಅಜೇಯ 111 ರನ್ ಸಿಡಿಸಿದ್ದರು.
Advertisement
ಭಾರತ 336\5 ರನ್ ಗಳಿಸುವ ಮೂಲಕ ವಿಶ್ವಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ತಂಡವೊಂದು ಗಳಿಸಿದ ಅಧಿಕ ರನ್ ಮೊತ್ತವಾಗಿದೆ. 2006 ರಲ್ಲಿ ಶ್ರೀಲಂಕಾ ಪಾಕ್ ವಿರುದ್ಧ 7 ವಿಕೆಟ್ ನಷ್ಟಕ್ಕೆ 318 ರನ್ ಗಳಿಸಿತ್ತು.
Advertisement
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 222 ಇನ್ನಿಂಗ್ಸ್ ಗಳಲ್ಲಿ ಏಕದಿನ ಕ್ರಿಕೆಟ್ ನಲ್ಲಿ 11 ಸಾವಿರ ರನ್ ಪೂರೈಸಿದರು. ಆ ಮೂಲಕ ವೇಗವಾಗಿ ಈ ಸಾಧನೆ ಮಾಡಿದ ಆಟಗಾರ ಎನಿಸಿಕೊಂಡರು. ಈ ಹಿಂದೆ ಸಚಿನ್ 276 ಇನ್ನಿಂಗ್ಸ್ ಗಳಲ್ಲಿ 11 ಸಾವಿರ ರನ್ ಗಳಿಸಿದ್ದರು.
ರೋಹಿತ್, ಕೆಲ್ ರಾಹುಲ್ ಜೋಡಿ ಅಂತರಾಷ್ಟ್ರಿಯ ಕ್ರಿಕೆಟ್ ನಲ್ಲಿ 72 ರ ಸರಾಸರಿಯಲ್ಲಿ ಸಾವಿರ ರನ್ ಪ್ಲಸ್ ಗಳಿಸಿದ ಸಾಧನೆ ಮಾಡಿತು. ಅಲ್ಲದೇ ಪಂದ್ಯದಲ್ಲಿ ಮೊದಲ ವಿಕೆಟ್ 136 ರನ್ ಜೊತೆಯಾಟ ನೀಡಿ 1996 ರ ವಿಶ್ವಕಪ್ ಟೂರ್ನಿಯಲ್ಲಿ ನವಜೋತ್ ಸಿಂಗ್ ಸಿಧು, ಸಚಿನ್ ಸಿಡಿಸಿದ 91 ರನ್ ಜೊತೆಯಾಟ ದಾಖಲೆ ಮುರಿದರು.
ಪಂದ್ಯದಲ್ಲಿ ಶತಕ ಸಿಡಿಸಿದ ರೋಹಿತ್ ಈ ಬಾರಿಯ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದರು. ಆಸೀಸ್‍ನ ಆರೋನ್ ಫಿಂಚ್ 5 ಇನ್ನಿಂಗ್ಸ್ ಗಳಿಂದ 343 ರನ್ ಗಳಿಸಿದ್ದರೆ ರೋಹಿತ್ ಶರ್ಮಾ 3 ಇನ್ನಿಂಗ್ಸ್ ಗಳಿಂದ 319 ರನ್ ಗಳಿಸಿದ್ದಾರೆ. ಇತ್ತ ಪಂದ್ಯದಲ್ಲಿ ಪಾಕ್ ತಂಡದ ಪರ ಮಿಂಚಿದ ಮೊಹಮ್ಮದ್ ಅಮೀರ್ 3 ವಿಕೆಟ್ ಪಡೆದರು. ಪರಿಣಾಮ ಟೂರ್ನಿಯಲ್ಲಿ ಅತಿ ಹೆಚ್ಚು (13) ವಿಕೆಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಇಷ್ಟೇ ವಿಕೆಟ್ ಪಡೆದಿರುವ ಮಿಚ್ಚೆಲ್ ಸ್ಟಾರ್ಕ್ ರೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.