ಲಂಡನ್: ವಿಶ್ವಕಪ್ ಟೂರ್ನಿಯ ನಡುವೆಯೇ ಗಾಯದ ಸಮಸ್ಯೆಯಿಂದ ಹೊರ ಬಂದಿರುವ ಟೀಂ ಇಂಡಿಯಾ ಆರಂಭಿಕ ಆಟಗಾರ ಧವನ್ ಅಭಿಮಾನಿಗಳಿಗೆ ಭಾವೋದ್ವೇಗದ ಸಂದೇಶ ನೀಡಿದ್ದಾರೆ. ಇತ್ತ ಧವನ್ ತಂಡದಿಂದ ಹೊರಗುಳಿದಿರುವುದು ಹಾರ್ಟ್ ಬ್ರೇಕಿಂಗ್ ಎಂದು ಸಚಿನ್ ಹೇಳಿದ್ದಾರೆ.
ಟೂರ್ನಿಯಿಂದ ಧವನ್ ಹೊರ ಬರುತ್ತಿರುವ ಬಗ್ಗೆ ಬಿಸಿಸಿಐ ಬುಧವಾರದಂದು ಅಧಿಕೃತವಾಗಿ ದೃಢಪಡಿಸಿತ್ತು. ಆ ಬಳಿಕ ಸಾಮಾಜಿಕ ಜಾಲತಾಣ ಟ್ವಿಟ್ಟರಿನಲ್ಲಿ ಈ ಕುರಿತು ವಿಡಿಯೋ ಪೋಸ್ಟ್ ಮಾಡಿದ್ದ ಧವನ್ ಭಾವೋದ್ವೇಗಕ್ಕೆ ಒಳಗಾಗಿದ್ದರು.
Advertisement
I feel emotional to announce that I will no longer be a part of #CWC19. Unfortunately, the thumb won’t recover on time. But the show must go on.. I'm grateful for all the love & support from my team mates, cricket lovers & our entire nation. Jai Hind!???? ???????? pic.twitter.com/zx8Ihm3051
— Shikhar Dhawan (@SDhawan25) June 19, 2019
Advertisement
2019ರ ವಿಶ್ವಕಪ್ ಟೂರ್ನಿಯ ಭಾಗವಾಗಿರುವುದಿಲ್ಲ ಎಂದು ನಿಮಗೆ ತಿಳಿಸಲು ಬೇಸರವಾಗುತ್ತಿದ್ದು, ನನ್ನ ಹೆಬ್ಬೆರಳಿನ ಗಾಯ ಸಂಪೂರ್ಣವಾಗಿ ಗುಣವಾಗಿಲ್ಲ. ದೇಶಕ್ಕಾಗಿ ಟೂರ್ನಿಯಲ್ಲಿ ಆಡಬೇಕು ಎಂಬುವುದು ನನ್ನ ಆಸೆಯಾಗಿತ್ತು. ಸದ್ಯ ನಾನು ವಿಶ್ರಾಂತಿ ಪಡೆದು ಮುಂದಿನ ಟೂರ್ನಿಯ ಬಗ್ಗೆ ಯೋಚಿಸಬೇಕಿದೆ. ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲ್ಲಲಿದೆ. ತಂಡವನ್ನು ಬೆಂಬಲಿಸುವ ಅಗತ್ಯವಿದ್ದು, ನಿಮ್ಮ ಪ್ರೀತಿ ಹಾಗೂ ಪ್ರಾರ್ಥನೆಗಳಿಗೆ ಧನ್ಯವಾದ. ಜೈ ಹಿಂದ್ ಎಂದು ಹೇಳಿದ್ದಾರೆ.
Advertisement
ಧವನ್ ಅವರು ತಂಡದಿಂದ ಹೊರಗುಳಿಯುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿನ್, ನೀವು ಉತ್ತಮ ಪ್ರದರ್ಶನ ನೀಡಿದ್ದೀರಿ. ಇಂತಹ ಪ್ರಮುಖ ಟೂರ್ನಿಯ ನಡುವೆಯೇ ಗಾಯದ ಸಮಸ್ಯೆಗೆ ಉಂಟಾಗಿರುವುದು ‘ಹಾರ್ಟ್ ಬ್ರೇಕಿಂಗ್. ಈ ಹಿಂದಿಕ್ಕಿಂತಲೂ ಶಕ್ತಿಯಲ್ಲಿ ಮತ್ತೆ ವಾಪಸ್ ಬರುವ ನಂಬಿಕೆ ನನಗಿದೆ ಎಂದಿದ್ದಾರೆ. ಅಲ್ಲದೇ ಧವನ್ ಸ್ಥಾನದಲ್ಲಿ ಆಯ್ಕೆ ಆಗಿದ್ದ ರಿಷಬ್ ಪಂತ್‍ಗೆ ಶುಭ ಕೋರಿರುವ ಸಚಿನ್, ರಿಬಷ್ ತನ್ನನ್ನು ಸಾಬೀತು ಪಡಿಸಿಕೊಳ್ಳಲು ಇದಕ್ಕಿಂತ ದೊಡ್ಡ ವೇದಿಕೆ ಸಿಗುವುದಿಲ್ಲ ಎಂದಿದ್ದಾರೆ.
Advertisement
Feel for you Shikhar. You were playing well & to be injured in the middle of such an important tournament is heartbreaking. I’m sure you’ll come back stronger than ever.
Rishabh you’ve been playing well & there can’t be a bigger platform to express yourself. Good luck! pic.twitter.com/T7qzKcDfoO
— Sachin Tendulkar (@sachin_rt) June 20, 2019
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಧವನ್ ಎಡಗೈ ಹೆಬ್ಬೆರಳಿಗೆ ಗಾಯವಾಗಿತ್ತು. ಆ ಬಳಿಕ ಮೂರು ವಾರಗಳ ಕಾಲ ಅವರು ಟೂರ್ನಿಗೆ ಅಲಭ್ಯ ಆಗಲಿದ್ದಾರೆ ಎಂದು ಬಿಸಿಸಿಐ ತಿಳಿಸಿತ್ತು. ಆದರೆ ಬುಧವಾರ ಗಾಯದ ತಪಾಸಣೆ ನಡೆಸಿದ ವೈದ್ಯರು ಧವನ್ ಅವರಿಗೆ ಸುದೀರ್ಘ ವಿಶ್ರಾಂತಿ ಅಗತ್ಯವಿರುವುದಾಗಿ ತಿಳಿಸಿದ್ದಾರೆ. ಟೀಂ ಇಂಡಿಯಾ ಶನಿವಾರ ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]