ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ, ಮಾಜಿ ಕೋಚ್ ಆಗಿರುವ ಅನಿಲ್ ಕುಂಬ್ಳೆ ತಮ್ಮ ಕನಸಿನ ವಿಶ್ವಕಪ್ ಟೀಂ ಇಂಡಿಯಾ ಘೋಷಣೆ ಮಾಡಿದ್ದು, ಆಡುವ 15 ಆಟಗಾರರ ಪಟ್ಟಿಯಲ್ಲಿ ಕೆಲ ಮುಖ್ಯ ಆಟಗಾರರಿಗೆ ಸ್ಥಾನ ನೀಡಿದ್ದಾರೆ.
ಕುಂಬ್ಳೆ ತಮ್ಮ ತಂಡದಲ್ಲಿ ಆಯ್ಕೆ ಮಾಡಿರುವ ಆಟಗಾರರಿಗೆ ಕೆಲ ಕಾರಣಗಳನ್ನು ನೀಡಿದ್ದು, ರೋಹಿತ್ ಶರ್ಮಾ, ಧವನ್ ಅವರಿಗೆ ಆರಂಭಿಕರ ಸ್ಥಾನ ನೀಡಿದ್ದಾರೆ. ನಂ.3 ಆಟಗಾರರಾಗಿ ಕೊಹ್ಲಿಗೆ ಅವಕಾಶ ನೀಡಿದ್ದರೆ, ಅಚ್ಚರಿ ಎಂಬಂತೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅವರಿಗೆ 4ನೇ ಕ್ರಮಾಂಕವನ್ನು ನೀಡಿದ್ದಾರೆ.
Advertisement
Advertisement
ಅಂಬಟಿ ರಾಯುಡು ನಂ.4 ರೇಸ್ ನಲ್ಲಿದ್ದರೂ ಕೂಡ ಕೆಲ ಪಂದ್ಯಗಳಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದ್ದಾರೆ. ಉಳಿದಂತೆ 5ನೇ ಸ್ಥಾನದಲ್ಲಿ ಕೇಧಾರ್ ಜಾಧವ್‍ಗೆ ಅವರನ್ನು ಆಡಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಹಾರ್ದಿಕ್ ಪಾಂಡ್ಯ, ಭುವನಶ್ವರ್ ಕುಮಾರ್ ಅವರಿಗೆ ಅಲೌಂಡರ್ ಸ್ಥಾನ ನೀಡಿದ್ದಾರೆ. ಉಳಿದಂತೆ ಬೌಲಿಂಗ್ ನಲ್ಲಿ ಕುಲ್ದೀಪ್ ಯಾದವ್, ಚಹಲ್, ಶಮಿ, ಬುಮ್ರಾ, ಜೋಡಿ ಅತ್ಯುತ್ತಮ ಎಂದಿದ್ದಾರೆ.
Advertisement
ತಂಡದಲ್ಲಿ ಅವಕಾಶ ಪಡೆದಿರುವ ಆಟಗಾರರ ಪಟ್ಟಿಯಲ್ಲಿ ಉಮೇಶ್ ಯಾದವ್ ಬದಲಾಗಿ ಖಲೀಲ್ ಅಹ್ಮದ್‍ರನ್ನು ಆಯ್ಕೆ ಮಾಡಿದ್ದು, ರಿಷಬ್ ಪಂತ್, ವಿಜಯ್ ಶಂಕರ್ ಕೂಡ 15 ಆಟಗಾರರ ಪಟ್ಟಿಯಲ್ಲಿದ್ದಾರೆ. ಕುಂಬ್ಳೆರ ಈ ತಂಡ ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡ ಎಂದೇ ಹೇಳಬಹುದಾಗಿದ್ದು, ವಿಶ್ವಕಪ್ ವೇಳೆ ಆಗ್ರ ಕ್ರಮಾಂಕ ವಿಫಲವಾದರೆ ಧೋನಿ 4ನೇ ಕ್ರಮಾಂಕದಲ್ಲಿ ಉತ್ತಮವಾಗಿ ನಿಭಾಯಿಸಿ 80% ರಷ್ಟು ಗೆಲುವು ಖಚಿತ ಎಂಬ ಲೆಕ್ಕಾಚಾರ ಮುಂದಿಟ್ಟಿದ್ದಾರೆ.
Advertisement
ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv