ವೆಲ್ಲಿಂಗ್ಟನ್: ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಪ್ರಸ್ತುತ ನಡೆಯುತ್ತಿರುವ ಮಹಿಳಾ ವಿಶ್ವಕಪ್‍ನಲ್ಲಿ ಬೃಹತ್ ದಾಖಲೆ ಬರೆದಿದ್ದಾರೆ.
ಹ್ಯಾಮಿಲ್ಟನ್‍ನ ಸೆಡನ್ ಪಾರ್ಕ್‍ನಲ್ಲಿ ನಡೆದ ಪಂದ್ಯಾವಳಿಯ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮಿಥಾಲಿ ಈಗ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ನಾಯಕಿಯಾಗಿ 23 ಪಂದ್ಯಗಳಲ್ಲಿ ತಮ್ಮ ತಂಡವನ್ನು ಮುನ್ನಡೆಸಿದ್ದಾರೆ. ಈ ದಾಖಲೆಯಿಂದಾಗಿ ಅವರು, ಆಸ್ಟ್ರೇಲಿಯಾದ ಮಹಿಳಾ ತಂಡದ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್ ದಾಖಲೆಯನ್ನು ಹಿಂದಿಕ್ಕಿದರು. ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದೊಂದಿಗೆ ಮಿಥಾಲಿ ವಿಶ್ವಕಪ್‍ನಲ್ಲಿ 24ನೇ ಬಾರಿಗೆ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಇದನ್ನೂ ಓದಿ: ಭೂದಾಖಲೆಗಳನ್ನು ‘ರೈತನ ಮನೆ ಬಾಗಿಲಿಗೆ’ ತಲುಪಿಸುವುದು ಒಂದು ಅತ್ಯುತ್ತಮ ಸೇವೆ: ಆರ್.ಅಶೋಕ್
Advertisement
#WIvIND #CWC22 #TeamIndia #INDvWI
WICKET! Harmanpreet Kaur’s exhilarating innings comes to an end. What a super knock from the India’s vice-captain. https://t.co/EXXIxFdmwA
— Express Sports (@IExpressSports) March 12, 2022
Advertisement
ವೆಸ್ಟ್ ಇಂಡೀಸ್ ವಿರುದ್ಧದ ಗೆಲುವಿನೊಂದಿಗೆ ಮಿಥಾಲಿ ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದಾರೆ. ಭಾರತ ಇದುವರೆಗೆ ನಡೆದ ಪಂದ್ಯಾವಳಿಯಲ್ಲಿ ಒಂದು ಪಂದ್ಯವನ್ನು ಕಳೆದುಕೊಂಡು ಒಂದು ಪಂದ್ಯವನ್ನು ಗೆದ್ದಿದೆ. ಇದನ್ನೂ ಓದಿ: ಮಂಕಡ್‌ಗೆ ಸಮ್ಮತಿ – ಬಾಲ್ ಎಸೆಯುವ ಮುನ್ನ ನಾನ್‍ಸ್ಟ್ರೈಕ್ ಬಿಟ್ಟರೆ ಉಳಿಗಾಲವಿಲ್ಲ
Advertisement
ಭಾರತವು ಈವರೆಗೆ ಆಡಿದ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಆದರೆ ತನ್ನ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 62 ರನ್‍ಗಳಿಂದ ಭಾರೀ ಅಂತರದಲ್ಲಿ ಸೋಲನುಭವಿಸಿತು. ನ್ಯೂಜಿಲೆಂಡ್ 50 ಓವರ್‍ಗಳಲ್ಲಿ 9 ವಿಕೆಟ್‍ಗೆ 260 ರನ್ ಗಳಿಸಿ ಭಾರತಕ್ಕೆ 261 ರನ್‍ಗಳ ಗುರಿಯನ್ನು ನೀಡಿತ್ತು. ಆಮಿ ಸ್ಯಾಟರ್ಥ್‍ವೈಟ್ 84 ಎಸೆತಗಳಲ್ಲಿ 75 ರನ್ ಗಳಿಸಿ ತಮ್ಮ ತಂಡದ ಪರ ಗರಿಷ್ಠ ರನ್‍ಗಳನ್ನು ಗಳಿಸಿದ್ದರು. ನಂತರದಲ್ಲಿ ಅಮೆಲಿಯಾ ಕೆರ್ 64 ಎಸೆತಗಳಲ್ಲಿ 50 ರನ್ ಗಳಿಸಿದ್ದರು.
Advertisement
India Women vs West Indies Women: @M_Raj03 breaks record for most matches captained in ICC Women’s @cricketworldcup
READ: https://t.co/Jn89vLqeWP #MithaliRaj #CWC22 #INDWvWIW #INDWvsWIW pic.twitter.com/FuMdcgmMHI
— TOI Sports (@toisports) March 12, 2022
ಭಾರತದ ಬೌಲಿಂಗ್ ವಿಭಾಗದ ಪರ ಪೂಜಾ ವಸ್ತ್ರಕರ್ ನಾಲ್ಕು ವಿಕೆಟ್ ಪಡೆದು ಉತ್ತಮ ಫಾರ್ಮ್ ನಲ್ಲಿದ್ದಾರೆ. ಇದೇ ವೇಳೆ ರಾಜೇಶ್ವರಿ ಗಾಯಕ್ವಾಡ್ ಕೂಡ ಎರಡು ವಿಕೆಟ್ ಪಡೆದಿದ್ದರು. 261 ರನ್‍ಗಳ ಗುರಿ ಬೆನ್ನತ್ತಿದ ಭಾರತ 46.4 ಓವರ್‍ಗಳಲ್ಲಿ 198 ರನ್‍ಗಳಿಗೆ ಆಲೌಟಾಯಿತು. ಹ್ಯಾಮಿಲ್ಟನ್‍ನ ಸೆಡನ್ ಪಾರ್ಕ್‍ನಲ್ಲಿ ಹರ್ಮನ್‍ಪ್ರೀತ್ ಕೌರ್ ಅವರು 63 ಎಸೆತಗಳಲ್ಲಿ 71 ರನ್ ಗಳಿಸಿದ ಹೊರತಾಗಿಯೂ ಭಾರತವು ಗೆಲುವನ್ನು ಸಾಧಿಸಲು ವಿಫಲವಾಯಿತು. ಇದೇ ವೇಳೆ ಮಿಥಾಲಿ 56 ಎಸೆತಗಳಲ್ಲಿ 31 ರನ್ ಗಳಿಸಲು ಯಶಸ್ವಿಯಾಗಿದ್ದರು.