ಎಡ್ಜ್ ಬಾಸ್ಟನ್: ಮಹಿಳೆಯರ ವಿಶ್ವಕಪ್ 2ನೇ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡದ ವಿರುದ್ಧ 7 ವಿಕೆಟ್ ಅಂತರದ ಜಯಗಳಿಸಿದೆ. ಭಾರತದ ಪರವಾಗಿ ಸ್ಮೃತಿ ಮಂಧನ ಶತಕ ಗಳಿಸಿ ಗೆಲುವಿನ ರೂವಾರಿ ಎನಿಸಿದರು. ಐಸಿಸಿ ಮಹಿಳಾ ವಿಶ್ವಕಪ್ 2ನೇ ಪಂದ್ಯದಲ್ಲೂ ಸೊಗಸಾದ ಆಟದ ಮೂಲಕ ಎಲ್ಲರ ಗಮನ ಸೆಳೆದರು. ಈ ಪಂದ್ಯದಲ್ಲಿ 2 ಸಿಕ್ಸರ್ ಹಾಗೂ 13 ಬೌಂಡರಿಗಳ ನೆರವಿನಿಂದ 106 ರನ್ ಗಳಿಸಿದರು. ಈ ಮೂಲಕ ಸ್ಮೃತಿ ತಮ್ಮ ಜೀವನದ 2ನೇ ಶತಕ ಬಾರಿಸಿದರು.
ಟಾಸ್ ಗೆದ್ದ ಮಿಥಾಲಿ ರಾಜ್ ನಾಯಕತ್ವದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿತು.
Advertisement
Toss time! @BCCIWomen have won the toss and elected to field first against @windieswomen! #WIvIND #WWC17 pic.twitter.com/IJMJ6oNNnh
— ICC Cricket World Cup (@cricketworldcup) June 29, 2017
Advertisement
ವಿಂಡೀಸ್ ಪರವಾಗಿ ಮ್ಯಾಥ್ಯೂಸ್ 43, ಡೇಲಿ 33, ಫ್ಲೆಚರ್ 36, ಟೇಲರ್ 16, ನೇಷನ್ 12, ಮೊಹಮ್ಮದ್ 11, ವಾಲ್ಟರ್ಸ್ 9, ಡಾಟಿನ್ 7, ಅಗಿಲೇರಿಯಾ 6, ನೈಟ್ 5 ರನ್ ಗಳಿಸಿದರು.
Advertisement
ಟೀಂ ಇಂಡಿಯಾ ಪರವಾಗಿ ದೀಪ್ತಿ ಶರ್ಮಾ, ಹರ್ಮನ್ ಪ್ರೀತ್ ಕೌರ್ ಹಾಗೂ ಪೂನಂ ಯಾದವ್ ತಲಾ 2 ಹಾಗೂ ಏಕ್ತಾ ಬಿಷ್ಟ್ 1 ವಿಕೆಟ್ ಪಡೆದರು.
Advertisement
She fell just short of an 8th consecutive ODI 50, but #MithaliRaj was in good form nonetheless!
Watch: https://t.co/9WFjpJRnfy#WIvIND pic.twitter.com/8HXyo9A33T
— ICC Cricket World Cup (@cricketworldcup) June 29, 2017
184 ರನ್ ಟಾರ್ಗೆಟ್ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದ ಭಾರತ ಆರಂಭದಲ್ಲೇ ಆಘಾತ ಅನುಭವಿಸಬೇಕಾಯಿತು. ಟೀಂ ರನ್ ಶುಭಾರಂಭ ಮಾಡುವಷ್ಟರಲ್ಲೇ ಶೂನ್ಯಕ್ಕೆ ಪೂನಂ ರಾವತ್ ಔಟಾದರು.
ಇದಾದ ನಂತರ ಬ್ಯಾಟಿಂಗ್ ಮಾಡಲು ಆಗಮಿಸಿದ ದೀಪ್ತಿ ಶರ್ಮಾ ಕೇವಲ 6 ರನ್ ಗಳಿಸಿ ಔಟಾದರು. ಆದರೆ ನಂತರ ಆಗಮಿಸಿದ ನಾಯಕಿ ಮಿಥಾಲಿ ರಾಜ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನ ಜೊತೆಗೆ ಉತ್ತಮ ಜೊತೆಯಾಟ ನೀಡಿದರು. ಸ್ಮೃತಿ ಮಂಧನ ಇಂಗ್ಲೆಂಡ್ ವಿರುದ್ಧದ ಆರಂಭಿಕ ಪಂದ್ಯದಲ್ಲೂ ಅರ್ಧ ಶತಕ ಗಳಿಸಿದ್ದರು.
The @BCCIWomen edge closer to victory in Taunton, despite just losing #MithaliRaj.#WIvIND #WWC17 pic.twitter.com/HMXl46CtDj
— ICC Cricket World Cup (@cricketworldcup) June 29, 2017
WICKET! #MithaliRaj is out four shy of her half-century, caught at mid-off off Matthews! 141/4.https://t.co/znXrjygOCJ#WIvIND #WWC17 pic.twitter.com/GkisJWLdX2
— ICC Cricket World Cup (@cricketworldcup) June 29, 2017
She's hit her second 50 in two games!
Watch @mandhana_smriti's latest half-century ➡️ https://t.co/HlO9OkOfng#WIvIND #WWC17 pic.twitter.com/ffre8Q7vtI
— ICC Cricket World Cup (@cricketworldcup) June 29, 2017