ಕೇಪ್‌ಟೌನ್: ಚೊಚ್ಚಲ ಆವೃತ್ತಿಯ ಐಸಿಸಿ ಅಂಡರ್-19 ಮಹಿಳಾ ಟಿ20 ವಿಶ್ವಕಪ್ (ICC WMN U19) ಆರಂಭಿಕ ಪಂದ್ಯದಲ್ಲೇ ಭಾರತದ ವನಿತೆಯರ (India Women Under-19s )ತಂಡ ಭರ್ಜರಿ ಜಯದೊಂದಿಗೆ ಶುಭಾರಂಭ ಕಂಡಿದೆ.
ದಕ್ಷಿಣ ಆಫ್ರಿಕಾ (South Africa Womens Team) ವಿರುದ್ಧ ನಡೆದ ಮೊದಲ ಪಂದ್ಯದಲ್ಲೇ ಶೆಫಾಲಿ ವರ್ಮ (Shafali Verma) ನಾಯಕತ್ವದ ಟೀಂ ಇಂಡಿಯಾ (Team India Womens) 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇದನ್ನೂ ಓದಿ: 18 ತಿಂಗಳ ಬಳಿಕ ರಾಷ್ಟ್ರೀಯ ತಂಡದ ಕರೆ ಪಡೆದ ಪೃಥ್ವಿ ಶಾ – ಕೊಹ್ಲಿ, ರೋಹಿತ್‍ಗಿಲ್ಲ ಟಿ20 ತಂಡದಲ್ಲಿ ಸ್ಥಾನ
- Advertisement 2-
Vice-captain Shweta Sehrawat scored a superb 
* off just 57 deliveries and bagged the Player of the Match Award ????????#TeamIndia off to a winning start in the #U19T20WorldCup with a
-wicket victory against South Africa ????????????????
Scorecard ????https://t.co/sA6ECj9P1O… pic.twitter.com/iCSDHYLYji
— BCCI Women (@BCCIWomen) January 14, 2023
- Advertisement 3-
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ವನಿತೆಯರ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತ್ತು. 167 ರನ್‌ಗಳ ಗುರಿ ಬೆನ್ನತ್ತಿದ ಭಾರತದ ವನಿತೆಯರು ಸ್ಫೋಟಕ ಬ್ಯಾಟಿಂಗ್‌ನೊಂದಿಗೆ 16.3 ಓವರ್‌ಗಳಲ್ಲೇ 190 ರನ್ ಚಚ್ಚಿ ಜಯ ಸಾಧಿಸಿದರು. ಇದನ್ನೂ ಓದಿ: ಆಡಿದ 18 ಟಿ-20 ಪಂದ್ಯಗಳಲ್ಲೇ ನಂ.1 ಪಟ್ಟಕ್ಕೇರಿದ 16ರ ಶೆಫಾಲಿ
- Advertisement 4-
ಆರಂಭಿಕರಾಗಿ ಕಣಕ್ಕಿಳಿದ ಟೀಂ ಇಂಡಿಯಾ ಉಪನಾಯಕಿ ಶ್ವೇತಾ ಶೆರಾವತ್ (Shweta Sehrawat) 57 ಎಸೆತಗಳಲ್ಲಿ 20 ಬೌಂಡರಿಯೊಂದಿಗೆ 92 ರನ್ ಗಳಿಸಿ ಅಜೇಯರಾಗುಳಿದರು. ಇನ್ನೂ ನಾಯಕಿ ಶೆಫಾಲಿ ವರ್ಮ (Shafali Verma) ಕೇವಲ 16 ಎಸೆತಗಳಲ್ಲಿ 1 ಸಿಕ್ಸ್, 9 ಬೌಂಡರಿಗಳೊಂದಿಗೆ ಸ್ಫೋಟಕ 45 ರನ್ ಬಾರಿಸಿದರು. ಜಿ. ತ್ರಿಶಾ 15 ರನ್, ಸೌಮ್ಯ ತಿವಾರಿ 10 ರನ್ ಗಳಿದ್ರೆ ಸೋನಿಯಾ ಮೆಂದಿಯಾ 1 ರನ್ ಗಳಿಸಿ ಗೆಲುವು ತಂದುಕೊಟ್ಟರು.
ಶೆಫಾಲಿ ಆಲ್‌ರೌಂಡ್ ಆಟ: ಸ್ಫೋಟಕ ಬ್ಯಾಟಿಂಗ್ ಮಾಡಿದ ಶೆಫಾಲಿ ವರ್ಮ (Shafali Verma) ಬೌಲಿಂಗ್‌ನಲ್ಲೂ 2 ವಿಕೆಟ್ ಕಬಳಿಸಿದರು. ಸೋನಮ್ ಯಾದವ್ ಹಾಗೂ ಪ್ರಸವಿ ಚೋಪ್ರಾ ತಲಾ ಒಂದು ವಿಕೆಟ್ ಪಡೆದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k