ಸಿಡ್ನಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಆಯೋಜಿಸುವ ಟೂರ್ನಿಗಳ ವೇಳಾಪಟ್ಟಿಯನ್ನು ಬಹು ಎಚ್ಚರಿಕೆಯಿಂದ ಪ್ಲಾನ್ ಮಾಡಲಾಗುತ್ತದೆ. ಆದರೆ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ವೇಳಾಪಟ್ಟಿ ಮಾತ್ರ ಭಿನ್ನವಾಗಿದೆ. ‘ಮಾಡು ಇಲ್ಲವೇ ಮಡಿ’ ಎಂಬತ್ತಿರುವ ಟೂರ್ನಿಯ ನಾಕೌಟ್ ಪಂದ್ಯಗಳಿಗೆ ರಿಸರ್ವ್ ಡೇ ಶೆಡ್ಯೂಲ್ ಮಾಡದಿರುವುದು ಸದ್ಯ ವಿಮರ್ಶೆಗೆ ಕಾರಣವಾಗಿದೆ.
ಈ ಬಾರಿಯ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಗ್ರೂಪ್ ಹಂತದ 2 ಪಂದ್ಯಗಳು ಹಾಗೂ ನಾಕೌಟ್ ಹಂತದ ಪಂದ್ಯ ಆರಂಭವಾಗದೆ ರದ್ದಾಗಿವೆ. ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆಯ ಬೇಕಿದ್ದ ಪಂದ್ಯ ಮಳೆಯ ಕಾರಣ ರದ್ದಾಗಿದ್ದು, ಟೀಂ ಇಂಡಿಯಾ ಗ್ರೂಪ್ ಹಂತದಲ್ಲಿ ಮೊದಲ ಸ್ಥಾನದಲ್ಲಿದ್ದ ಕಾರಣ ನೇರ ಫೈನಲ್ ಪ್ರವೇಶದ ಅವಕಾಶ ಪಡೆಯಿತು. ಇಂಗ್ಲೆಂಡ್ ತಂಡದ ರಿಸರ್ವ್ ಡೇ ಇಲ್ಲದ ಕಾರಣ ಟೂರ್ನಿಯಿಂದ ನಿರ್ಗಮಿಸಿತು.
Advertisement
☔ MATCH ABANDONED ☔
For the first time in their history, India have qualified for the Women’s #T20WorldCup final ???????? pic.twitter.com/88DHzqTbnK
— T20 World Cup (@T20WorldCup) March 5, 2020
Advertisement
ಕಳೆದ ವಿಶ್ವಕಪ್‍ನಲ್ಲಿ ರನ್ನರ್ ಅಪ್ ಆಗಿದ್ದ ಇಂಗ್ಲೆಂಡ್ ಈ ಬಾರಿ ಸೆಮಿಸ್‍ಗೆ ತನ್ನ ಜರ್ನಿಯನ್ನು ಅಂತ್ಯಗೊಳಿಸಿದೆ. ಇದರಿಂದ ಇಂಗ್ಲೆಂಡ್ ತಂಡದ ಕ್ರಿಕೆಟ್ ಪ್ರೇಮಿಗಳು ನಿರಾಸೆ ಅನುಭವಿಸಿದ್ದಾರೆ. ಇದೇ ವಿಚಾರವನ್ನು ಪ್ರಸ್ತಾಪ ಮಾಡಿರುವ ಇಂಗ್ಲೆಂಡ್ ಮಾಜಿ ಆಟಗಾರ ಮೈಕಲ್ ವಾನ್ ಐಸಿಸಿ ವಿರುದ್ಧ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ. ಹಲವರಿಗೆ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಡುವುದು ಜೀವನದ ಕನಸಾಗಿರುತ್ತದೆ. ಇಂತಹ ಸಂದರ್ಭದಲ್ಲಿ ನಾಕೌಟ್ ಪಂದ್ಯದಲ್ಲಿ ಆಡುವುದು ಆಟಗಾರರಿಗೆ ಹೆಮ್ಮೆಯ ಸಂಗತಿ. ಇಂತಹ ಪಂದ್ಯಗಳಿಗೆ ರಿಸರ್ವ್ ಡೇ ಇಲ್ಲ ಎಂದರೇ ಅರ್ಥವಿರುವುದಿಲ್ಲ ಎಂದು ಐಸಿಸಿ ವಿರುದ್ಧ ಕಿಡಿಕಾರಿದ್ದರು.
Advertisement
No reserve days for World Cup semi Finals … What a shambles … !! #T20WorldCup
— Michael Vaughan (@MichaelVaughan) March 5, 2020
Advertisement
ಮೈಕಲ್ ವಾನ್ ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಕೆಲ ನೆಟ್ಟಿಗರು ವಾನ್‍ರನ್ನು ಟ್ರೋಲ್ ಮಾಡಿದ್ದಾರೆ. ಕಳೆದ ವರ್ಷ ನಡೆದಿದ್ದ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ ಬೌಂಡರಿ ನಿಯಮದ ಅನ್ವಯ ಗೆಲುವು ಪಡೆದು ಚಾಂಪಿಯನ್ ಆಗಿತ್ತು. ಅಂದು ಬೌಂಡರಿ ನಿಯಮದೊಂದಿಗೆ ಗೆಲುವು ಪಡೆದಿದ್ದ ನಿಮಗೆ ಇಂದು ತಕ್ಕ ಶಾಸ್ತಿ ಆಗಿದೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು.
ನೆಟ್ಟಿಗರ ಟ್ರೋಲ್‍ಗೆ ಪ್ರತಿಕ್ರಿಯೆ ನೀಡಿರುವ ವಾನ್, ನೀವು ಇದನ್ನು ಕರ್ಮ ಎಂದು ಪರಿಗಣಿಸುವುದಾದರೆ, ಇಂಗ್ಲೆಂಡ್ ತಂಡ ಅಂದು ಪಂದ್ಯದಲ್ಲಿ ತನ್ನ ಕೌಶಲ್ಯಗಳನ್ನು ಪ್ರದರ್ಶನ ಮಾಡಿತ್ತು. ಆದರೆ ಈ ಪಂದ್ಯದಲ್ಲಿ ಯಾವ ಆಟಗಾರ್ತಿಯೂ ತಮ್ಮ ಕೌಶಲ್ಯಗಳನ್ನು ಪ್ರದರ್ಶನ ಮಾಡಲು ಅವಕಾಶವೇ ಲಭಿಸಿಲ್ಲ. ಏನೇ ಆಗಲಿ ಎಲ್ಲರಿಗೂ ಗುಡ್ ಮಾರ್ನಿಂಗ್ ಎಂದು ಸ್ಪಷ್ಟನೆ ನೀಡಿದ್ದಾರೆ.
All you muppets saying it’s karma,do one … At least the England men’s team had to produce skill on the day … to not have a chance to produce skill and it to be taken away by the weather is a shambles … anyway Morning everyone #T20WorldCup
— Michael Vaughan (@MichaelVaughan) March 5, 2020