– ಗೆಲುವಿನ ಓಟ ಮುಂದುವರಿಸಿದ ಭಾರತ
– ಅರ್ಧ ಶತಕ ಕೈಚೆಲ್ಲಿಕೊಂಡ ಶೆಫಾಲಿ
– ಕೊನೆಗೂ ಎರಡಂಕಿ ರನ್ ದಾಟಿದ ಕೌರ್
ಮೆಲ್ಬರ್ನ್: ಶೆಫಾಲಿ ವರ್ಮಾ ಬ್ಯಾಟಿಂಗ್ ಹಾಗೂ ರಾಧಾ ಯಾದವ್ ಬೌಲಿಂಗ್ ಸಹಾಯದಿಂದ ಭಾರತ ಮಹಿಳಾ ಟಿ20 ವಿಶ್ವಕಪ್‍ನಲ್ಲಿ ಸತತ ನಾಲ್ಕನೇ ಜಯ ದಾಖಲಿಸಿದೆ. ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ 7 ವಿಕೆಟ್‍ಗಳಿಂದ ಗೆದ್ದು ಬೀಗಿದೆ.
ಮೆಲ್ಬರ್ನ್ ನ ಜಂಕ್ಷನ್ ಓವಲ್‍ನಲ್ಲಿ ನಡೆದ ಎ ಗುಂಪಿನ ತನ್ನ ಕೊನೆ ಪಂದ್ಯದಲ್ಲಿ ಭಾರತದ 32 ಎಸೆತಗಳು ಬಾಕಿ ಇರುವಂತೆ ಶ್ರೀಲಂಕಾವನ್ನು ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ಭಾರತಕ್ಕೆ 114 ರನ್‍ಗಳ ಗುರಿ ನೀಡಿತ್ತು. ಭಾರತ ತಂಡ 14.4 ಓವರ್‌ಗಳಲ್ಲಿ 3 ವಿಕೆಟ್‍ಗಳನ್ನು ಕಳೆದುಕೊಂಡು ಗುರಿಯನ್ನು ತಲುಪಿತು.
Advertisement
Two Player of the Match Awards in her cabinet already. What's in store today? ???? #T20WorldCup | #INDvSL pic.twitter.com/oCHvQqyKNC
— ICC (@ICC) February 29, 2020
Advertisement
ಭಾರತದ ಓಪನರ್ ಶೆಫಾಲಿ ವರ್ಮಾ 47 ರನ್ (34 ಎಸೆತ, 7 ಬೌಂಡರಿ, 1 ಸಿಕ್ಸ್) ಗಳಿಸಿದರು. ಅವರು ಈ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಅರ್ಧಶತಕ ಕೈಚೆಲ್ಲಿಕೊಂಡರು. ಕ್ಯಾಪ್ಟನ್ ಹರ್ಮನ್‍ಪ್ರೀತ್ ಕೌರ್ ಕೊನೆಗೂ ಈ ಪಂದ್ಯದಲ್ಲಿ ಎರಡಂಕಿ ರನ್ ದಾಟಿದ್ದಾರೆ. ಆದರೆ 15 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸ್ಮೃತಿ ಮಂದನಾ 17 ರನ್ ಗಳಿಸಿದರು.
Advertisement
ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 9 ವಿಕೆಟ್ ನಷ್ಟದಲ್ಲಿ 113 ರನ್ ಗಳಿಸಿತ್ತು. ಕ್ಯಾಪ್ಟನ್ ಚಮರಿ ಅಟ್ಟಪಟ್ಟ್ 33 ರನ್ (24 ಎಸೆತ, 5 ಬೌಂಡರಿ, 1 ಸಿಕ್ಸ್) ಹಾಗೂ ಕವಿಶಾ ಡೆಲ್ಹಾರಿ 25 ರನ್ (16 ಎಸೆತ, 2 ಬೌಂಡರಿ) ಗಳಿಸಿದರು. ಉಳಿದಂತೆ 6 ಆಟಗಾರರು ಎರಡಂಕಿ ರನ್ ಗಳಿಸುವಲ್ಲಿ ವಿಫಲರಾದರು.
Advertisement
An excellent bowling performance from India to limit Sri Lanka to 113/9 ????
That is 22 runs more than New Zealand defended earlier however…#T20WorldCup | #INDvSL
????????️ https://t.co/pRG3mR1qkU pic.twitter.com/pHwOFvCMQB
— T20 World Cup (@T20WorldCup) February 29, 2020
ರಾಧಾ ಯಾದವ್ ಭಾರತ ಪರ ಅದ್ಭುತ ಬೌಲಿಂಗ್ ಮಾಡಿದರು. ಅವರು 4 ಓವರ್‌ಗಳಲ್ಲಿ 23 ರನ್ ನೀಡಿ, 4 ವಿಕೆಟ್ ಪಡೆದರು. ಉಳಿದಂತೆ ರಾಜೇಶ್ವರಿ 2 ವಿಕೆಟ್ ಪಡೆದರೆ, ಶಿಖಾ ಪಾಂಡೆ, ದೀಪ್ತಿ ಶರ್ಮಾ ಹಾಗೂ ಪೂನಂ ಯಾದವ್ ತಲಾ ಒಂದು ವಿಕೆಟ್ ಕಿತ್ತರು.
ಕೌರ್, ಮಂದನಾ ವೈಫಲ್ಯ:
ಸ್ಮೃತಿ ಮಂದನಾ ಮತ್ತು ನಾಯಕಿ ಹರ್ಮನ್‍ಪ್ರೀತ್ ಬ್ಯಾಟಿಂಗ್ ವೈಫಲ್ಯ ಮುಂದುವರಿಸಿದ್ದಾರೆ. ಸ್ಮೃತಿ 17 ರನ್ ಮತ್ತು ಕೌರ್ 15 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಈ ಟೂರ್ನಿಯಲ್ಲಿ ಇದುವರೆಗೆ ಉತ್ತಮ ಪ್ರದರ್ಶನ ನೀಡುತ್ತಿರುವ ಶೆಫಾಲಿ, ಮತ್ತೆ ಬ್ಯಾಟ್‍ನ ಮ್ಯಾಜಿಕ್ ತೋರಿಸಿದರು. ಅವರು 47 ರನ್ ಗಳಿಸಿದರು. ಆದರೆ ಶೆಫಾಲಿ ಸತತ ಎರಡನೇ ಬಾರಿ ಅರ್ಧಶತಕವನ್ನು ಕಳೆದುಕೊಂಡಿದ್ದಾರೆ.
All eyes on Monday's #AUSvNZ clash as the race for the semi-finals heats up in Group A! ???? #T20WorldCup pic.twitter.com/WYGWYVofCw
— T20 World Cup (@T20WorldCup) February 29, 2020
ಈಗಾಗಲೇ ಸೆಮಿ ತಲುಪಿರುವ ಭಾರತ:
ಈ ಟೂರ್ನಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ, ಎರಡೂ ಪಂದ್ಯಗಳಲ್ಲಿ ಸೋಲು ಕಂಡ ಶ್ರೀಲಂಕಾ ಸೆಮಿಫೈನಲ್‍ನಿಂದ ಹೊರಬಿದ್ದಿದೆ. ಮೊದಲ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು 17 ರನ್, ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 18 ರನ್‍ಗಳಿಂದ ಸೋಲಿಸಿತ್ತು. ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್‍ನ್ನು 3 ರನ್‍ಗಳಿಂದ ಮಣಿಸಿತ್ತು.
ಶೆಫಾಲಿ, ಪೂನಂ ಅದ್ಭುತ ಪ್ರದರ್ಶನ:
ಓಪನರ್ ಸ್ಮೃತಿ ಮಂದಾನಾ ಮತ್ತು ಹರ್ಮನ್‍ಪ್ರೀತ್ ಅವರು ಈವರೆಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲತೆ ತೋರಿದರು. ಅಂತಹ ಪರಿಸ್ಥಿತಿಯಲ್ಲಿ ಈ ಆಟಗಾರರಿಗೆ ಸೆಮಿಫೈನಲ್ ಪಂದ್ಯದ ಮೊದಲು ಶ್ರೀಲಂಕಾ ವಿರುದ್ಧ ಅವಕಾಶವಿತ್ತು. ಓಪನರ್ ಶೆಫಾಲಿ ವರ್ಮಾ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಉತ್ತಮ ಆರಂಭವನ್ನು ಹೊಂದಿದ್ದಾರೆ. ಲೆಗ್ ಸ್ಪಿನ್ನರ್ ಪೂನಂ ಯಾದವ್ ಟೂರ್ನಿಯಲ್ಲಿ ಒಟ್ಟು 9 ವಿಕೆಟ್ ಪಡೆದು ಅಗ್ರಸ್ಥಾನದಲ್ಲಿದ್ದಾರೆ.
4️⃣ games
4️⃣ wins
A perfect group-stage performance from India ????#T20WorldCup | #INDvSL pic.twitter.com/jQWJQxk89L
— T20 World Cup (@T20WorldCup) February 29, 2020