ನವದೆಹಲಿ: ಭಾರತದ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಭಾನುವಾರ 6 ಏಕದಿನ ವಿಶ್ವಕಪ್‍ಗಳಲ್ಲಿ ಆಡಿದ ಮೂರನೇ ಮಹಿಳಾ ಕ್ರಿಕೆಟಿಗರಾಗಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಸ್ತುತ ನ್ಯೂಜಿಲ್ಯಾಂಡ್‍ನ ಮೌಂಟ್ ಮೌಂಗನುಯಿಯಲ್ಲಿ ನಡೆಯುತ್ತಿರುವ ಮಹಿಳಾ ವಿಶ್ವಕಪ್‍ನಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಮೈದಾನಕ್ಕಿಳಿದಾಗ ಅವರು ಈ ಸಾಧನೆ ಮಾಡಿದ್ದಾರೆ.
Advertisement
ಮಿಥಾಲಿ ಅವರು ಸಚಿನ್ ತೆಂಡೂಲ್ಕರ್ ಮತ್ತು ಜಾವೇದ್ ಮಿಯಾಂದಾದ್ ನಂತರ ಆರು ಏಕದಿನ ವಿಶ್ವಕಪ್‍ಗಳಲ್ಲಿ ಆಡಿದ ಮೂರನೇ ಮಹಿಳಾ ಕ್ರಿಕೆಟಿಗರಾಗಿದ್ದಾರೆ. ಇದರೊಂದಿಗೆ ಆರು ಏಕದಿನ ವಿಶ್ವಕಪ್‍ಗಳಲ್ಲಿ ಆಡಿದ ಮೊದಲ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
Advertisement
ಮಿಥಾಲಿ ಅವರು 2000ನೇ ಇಸವಿಯ ಏಕದಿನ ವಿಶ್ವಕಪ್ ಮೂಲಕ ಪಾದಾರ್ಪಣೆ ಮಾಡಿದರು. 2005, 2009, 2013, 2017, ಮತ್ತು 2022ನೇ ವಿಶ್ವಕಪ್‍ಗಳಲ್ಲಿ ಭಾರತ ತಂಡದ ಪರ ಆಡಿ ಈ ಸಾಧನೆ ಮಾಡಿದ್ದಾರೆ. ಇದರ ಮಧ್ಯೆ ನ್ಯೂಜಿಲ್ಯಾಂಡ್‍ನ ದೆಬ್ಬೀ ಹಾಕ್ಲೆ ಹಾಗೂ ಇಂಗ್ಲೆಂಡ್‍ನ ಚಾರ್ಲೋಟ್ ಎಡ್ವಡ್ರ್ಸ್ ಅವರ ದಾಖಲೆಯನ್ನು ಸಹ ಅವರು ಮುರಿದಿದ್ದಾರೆ.
Advertisement
Advertisement
ಭಾರತದ ಕ್ರಿಕೆಟ್ ದೇವರಾದ ಸಚಿನ ತಂಡೂಲ್ಕರ್ ಅವರು, ಈ ಹಿಂದೆ 1992, 1996, 1999, 2003, 2007, ಮತ್ತು 2011ರ ವಿಶ್ವಕಪ್‍ನಲ್ಲಿ ಆಡಿ ಈ ಸಾಧನೆ ಮಾಡಿದ್ದರು.