– ಡಕ್ವರ್ಥ್ ಲೂಯಿಸ್ ನಿಯಮದಿಂದ ಬಾಂಗ್ಲಾಗೆ ಗೆಲುವು
– ಬಾಂಗ್ಲಾಗೆ ಮೊದಲ ಅಂಡರ್ 19 ವಿಶ್ವಕಪ್
– ರವಿ ಬಿಷ್ಣೋಯ್, ಜೈಸ್ವಾಲ್ ಹೋರಾಟ ವ್ಯರ್ಥ
ಪೋಷೆಫ್‍ಸ್ಟ್ರೋಮ್: ನಾಯಕ ಅಕ್ಬರ್ ಅಲಿ, ಪರ್ವೇಜ್ ಹುಸೇನ್ ಎಮೊನ್ ತಾಳ್ಮೆಯ ಬ್ಯಾಟಿಂಗ್ ಹಾಗೂ ಅಭಿಷೇಕ್ ದಾಸ್ ಉತ್ತಮ ಬೌಲಿಂಗ್‍ನಿಂದ ಬಾಂಗ್ಲಾದೇಶವು ಭಾರತ ವಿರುದ್ಧ ಡಕ್ ವರ್ಥ್ ಲೂಯಿಸ್ ನಿಯಮದಿಂದ ಮೂರು ವಿಕೆಟ್‌ಗಳಿಂದ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಅಂಡರ್ 19 ವಿಶ್ವಕಪ್ ಟೂರ್ನಿಯ ಭಾಗವಾಗಿ ಪೋಷೆಫ್‍ಸ್ಟ್ರೋಮ್‍ಯಲ್ಲಿ ಭಾನುವಾರ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಫೈನಲ್ ಪಂದ್ಯಕ್ಕೆ ಕೊನೆಯಲ್ಲಿ ಮಳೆಯ ಅಡ್ಡಿ ಉಂಟಾಯಿತು. ಭಾರತ 177 ರನ್ ಗಳಿಗೆ ಆಲೌಟ್ ಆಗಿದ್ದರೆ, ಬಾಂಗ್ಲಾ ತಂಡಕ್ಕೆ 46 ಓವರ್‌ಗಳಲ್ಲಿ 170 ರನ್ ಗಳ ಪರಿಷ್ಕೃತ ಗುರಿಯನ್ನು ನೀಡಲಾಯಿತು. ಬಾಂಗ್ಲಾ 42.1 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಗುರಿಯನ್ನು ಮುಟ್ಟಿತು. ಈ ಮೂಲಕ ಚೊಚ್ಚಲ ಅಂಡರ್ 19 ವಿಶ್ವಕಪ್ ಗೆದ್ದುಗೊಂಡಿದೆ.
Advertisement
Incredible scenes as Bangladesh celebrate their first ever U19 World Cup title!!#U19CWC | #INDvBAN | #FutureStars pic.twitter.com/OI2PXU7Eqw
— ICC Cricket World Cup (@cricketworldcup) February 9, 2020
Advertisement
ಬಾಂಗ್ಲಾದೇಶದ ಪರ ಪರ್ವೇಜ್ ಹುಸೇನ್ ಎಮೊನ್ 47 ರನ್ (79 ಎಸೆತ, 7 ಬೌಂಡರಿ), ಅಕ್ಬರ್ ಅಲಿ ಔಟಾಗದೆ 43 ರನ್ (77 ಎಸೆತ, 4 ಬೌಂಡರಿ, ಒಂದು ಸಿಕ್ಸ್) ಹಾಗೂ ತನ್ಜೀದ್ ಹಸನ್ 17 ರನ್ (25 ಎಸೆತ, 2 ಬೌಂಡರಿ, 1 ಸಿಕ್ಸ್) ಗಳಿಸಿದರು.
Advertisement
ಭಾರತದ ಯುವ ಪಡೆ ನೀಡಿದ್ದ 178 ಗುರಿ ಬೆನ್ನಟ್ಟಿದ ಬಾಂಗ್ಲಾದೇಶವು ಆರಂಭದಲ್ಲಿ ಭರ್ಜರಿ ರನ್ ದಾಖಲಿಸಿತು. ಪರ್ವೇಜ್ ಹುಸೇನ್ ಎಮೊನ್ ಹಾಗೂ ತನ್ಜೀದ್ ಹಸನ್ ಮೊದಲೇರಡು ಓವರಿನಲ್ಲಿ ಮೂರು ಬೌಂಡರಿ ಚಚ್ಚಿ ಅಂಡರ್ 19 ವಿಶ್ವಕಪ್‍ನಲ್ಲಿ ಚೊಚ್ಚಲ ಗೆಲುವು ದಾಖಲಿಸುವ ಭರವಸೆ ಮೂಡಿಸಿತ್ತು. ಈ ಜೋಡಿಯನ್ನು ಸ್ಪಿನ್ನರ್ ರವಿ ಬಿಷ್ಣೋಯಿ ಮುರಿದರು. ಪರ್ವೇಜ್ ಹಾಗೂ ತನ್ಜೀದ್ ಮೊದಲ ವಿಕೆಟ್‍ಗೆ 50 ರನ್ ಜೊತೆಯಾಟದ ಕೊಡುಗೆ ನೀಡಿತು. ಆದರೆ ಬಳಿಕ ಬಂದ ಬ್ಯಾಟ್ಸ್‍ಮನ್‍ಗಳು ಬಹುಬೇಗ ರವಿ ಬಿಷ್ಣೋಯಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಕಡೆಗೆ ಪರೇಡ್ ನಡೆಸಿದರು.
Advertisement
EPIC scenes after Bangladesh secure their historic #U19CWC win!
Follow LIVE here ????https://t.co/4hTEdJn0qb pic.twitter.com/W6J0Pzh9H4
— ICC Cricket World Cup (@cricketworldcup) February 9, 2020
ಇನ್ನಿಂಗ್ಸ್ ನ 13ನೇ ಓವರಿನಲ್ಲಿ ಗಾಯಗೊಂಡ ಪರ್ವೇಜ್ ಹುಸೇನ್ ಎಮೊನ್ ನಿವೃತ್ತರಾದರು. ನಾಲ್ಕನೇ ವಿಕೆಟ್‍ಗೆ 65 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದ್ದ ಬಾಂಗ್ಲಾಗೆ ಅಕ್ಬರ್ ಅಲಿ ಆಸೆಯಾದರು. ವಿಕೆಟ್ ಕಾಯ್ದುಕೊಂಡು ಬ್ಯಾಟಿಂಗ್ ಮುಂದುವರಿಸಿದ ಅವರಿಗೆ ಶಮಿಮ್ ಹುಸೇನ್ 7 ರನ್ ಹಾಗೂ ಅಭಿಷೇಕ್ ದಾಸ್ 5 ರನ್ ವಿಫಲರಾದರು.
ಆರನೇ ವಿಕೆಟ್ ಪತನದ ಬಳಿಕ ನಿವೃತ್ತಿಯಲ್ಲಿದ್ದ ಪರ್ವೇಜ್ ಹುಸೇನ್ ಎಮೊನ್ ಮೈದಾನಕ್ಕಿಳಿದು ಅಕ್ಬರ್ ಅಲಿ ಸಾಥ್ ನೀಡಿದರು. ಕೊನೆವರೆಗೂ ಹೋರಾಡಿದ ಅಕ್ಬರ್ ಅಲಿ ತಂಡದ ಗೆಲುವಿಗೆ ಪಾತ್ರರಾದರು. ಇತರೇ ರೂಪದಲ್ಲಿ 33 ರನ್ ( ಬೈ 8, ಲೆಗ್ ಬೈ4, ನೋಬಾಲ್ 2, ವೈಡ್ 19) ಬಿಟ್ಟು ಕೊಟ್ಟಿದ್ದು ದುಬಾರಿ ಆಯ್ತು.
The scenes in this picture ???? #U19CWC | #INDvBAN | #FutureStars pic.twitter.com/WZd4KGShol
— ICC Cricket World Cup (@cricketworldcup) February 9, 2020
ರವಿ ಬಿಷ್ಣೋಯಿ ಕಮಾಲ್:
ಭಾರತ ಯುವ ತಂಡದ ಸ್ಪಿನ್ನರ್ ರವಿ ಬಿಷ್ಣೋಯಿ ಆರಂಭದಿಂದಲೇ ಬಾಂಗ್ಲಾದೇಶಕ್ಕೆ ಆಘಾತ ನೀಡಿದರು. ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಪರ್ವೇಜ್ ಹುಸೇನ್ ಎಮೊನ್ ಹಾಗೂ ತನ್ಜೀದ್ ಹಸನ್ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. ಅಷ್ಟೇ ಅಲ್ಲದೆ ನಂತರ ಓವರ್‍ಗಳಲ್ಲಿ ವಿಕೆಟ್ ಕೀಳುತ್ತ ಪಂದ್ಯಕ್ಕೆ ಟರ್ನಿಂಗ್ ಪಾಯಿಂಟ್ ಕೊಟ್ಟರು. 10 ಓವರ್ ಬೌಲಿಂಗ್ ಮಾಡಿದ ಬಿಷ್ಣೋಯಿ 30 ರನ್ ನೀಡಿ, 4 ವಿಕೆಟ್ ಪಡೆದರು. ಉಳಿದಂತೆ ಸುಶಾಂತ್ ಮಿಶ್ರಾ,
ಇದಕ್ಕೂ ಮೊದಲು ಭಾರತ ಪರ ಯಶಸ್ವಿ ಜೈಸ್ವಾಲ್ 88 ರನ್ (121 ಎಸೆತ, 8 ಬೌಂಡಿರಿ, ಒಂದು ಸಿಕ್ಸ್), ತಿಲಕ್ ವರ್ಮಾ 38 ರನ್ (65 ಎಸೆತ, 3 ಬೌಂಡರಿ) ಹಾಗೂ ಧ್ರುವ ಜುರೇಲ್ 22 ರನ್ (38 ಎಸೆತ, 1 ಬೌಂಡರಿ) ಗಳಿಸಿದ್ದರು.
Ravi Bishnoi finishes his spell with figures of 10-3-30-4 ???? ????
They are the joint fourth-best figures recorded in an U19 World Cup final.#U19CWC | #INDvBAN | #FutureStars pic.twitter.com/djSnlZNtwa
— ICC Cricket World Cup (@cricketworldcup) February 9, 2020
ಭಾರತದ ಅಂಡರ್ 19 ತಂಡವು 2000ರಲ್ಲಿ ಮೊದಲ ಬಾರಿಗೆ ಚಾಂಪಿಯನ್ ಆಗಿತ್ತು. ಇದರ ನಂತರ 2006ರಲ್ಲಿ ರನ್ನರ್ ಅಪ್, 2008 ಹಾಗೂ 2012ರಲ್ಲಿ ಗೆಲುವು ದಾಖಲಿಸಿತ್ತು. ಆದರೆ 2016ರಲ್ಲಿ ರನ್ನರ್ ಅಪ್ ಆಗಿ 2018ರಲ್ಲಿ ಜಯ ಸಾಧಿಸಿತ್ತು. ಬಾಂಗ್ಲಾದೇಶ ಮೊದಲ ಬಾರಿಗೆ ಅಂಡರ್ 19 ವಿಶ್ವಕಪ್ ಫೈನಲ್ ತಲುಪಿತು. ಬಾಂಗ್ಲಾ ದೇಶವು ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ ತಂಡವನ್ನು 6 ವಿಕೆಟ್‍ಗಳಿಂದ ಸೋಲಿಸಿತ್ತು.
Yashasvi Jaiswal's #U19CWC with the bat:
Runs: 4️⃣0️⃣0️⃣
Fifites: 4️⃣
Hundreds: 1️⃣
Average: 1️⃣3️⃣3️⃣.3️⃣3️⃣
???? ???? #INDvBAN | #FutureStars pic.twitter.com/IJPZw6rtbr
— ICC Cricket World Cup (@cricketworldcup) February 9, 2020