ಐಸಿಸಿಯ ಟ್ರೋಲಿಗೆ ‘ಸಿಕ್ಸರ್’ ಸಿಡಿಸಿದ ಸಚಿನ್ – ‘ಸಿಕ್ಸ್’ ಸ್ಟೇಡಿಯಂ ಹೊರಗಡೆ ಬಿತ್ತು!

Public TV
3 Min Read
sachin tendulkar

ಬೆಂಗಳೂರು: ಟ್ವೀಟ್ ಮಾಡಿ ಟ್ರೋಲ್ ಮಾಡಿದ್ದ ಐಸಿಸಿಗೆ ಸಚಿನ್ ತೆಂಡೂಲ್ಕರ್ ಟ್ವಿಟ್ಟರ್ ನಲ್ಲೇ ‘ಸಿಕ್ಸ್’ ಹೊಡೆದಿದ್ದಾರೆ.

ಸಚಿನ್ ಮೇ 11 ರಂದು ತನ್ನ ಬಾಲ್ಯದ ಜೊತೆಗಾರ ವಿನೋದ್ ಕಾಂಬ್ಳಿ ಜೊತೆ ನೆಟ್ ನಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿದ್ದರು. ಲಂಚ್ ವಿರಾಮದಲ್ಲಿ ಕಾಂಬ್ಳಿ ಜೊತೆಗಿನ ಆಟ ಶಿವಾಜಿ ಪಾರ್ಕಿನಲ್ಲಿ ಬಾಲ್ಯದ ದಿನಗಳನ್ನು ನೆನಪಿಸಿತು. ನಾನು ಮತ್ತು ಕಾಂಬ್ಳಿ ಯಾವತ್ತೂ ವಿರುದ್ಧವಾಗಿ ಆಡಿಲ್ಲ ಎನ್ನುವ ವಿಚಾರ ಕೆಲ ಮಂದಿಗೆ ಮಾತ್ರ ತಿಳಿದಿದೆ ಎಂದು ಬರೆದಿದ್ದರು.

ಟ್ವೀಟ್ ಗಮನಿಸಿದ ಐಸಿಸಿ ಮೇ 12 ರಂದು, ನಿಮ್ಮ ಫ್ರಂಟ್ ಫೂಟ್ ಗಮನಿಸಿ ಎಂದು ಬರೆದು ಸಚಿನ್ ಬೌಲಿಂಗ್ ಮಾಡುತ್ತಿರುವ ಫೋಟೋ ಮತ್ತು ಅಂಪೈರ್ ಸ್ವೀವ್ ಬಕ್ನರ್ ನೋಬಾಲ್ ತೋರಿಸುತ್ತಿರುವ ಫೋಟೋವನ್ನು ಅಪ್ಲೋಡ್ ಮಾಡಿ ಕಾಲೆಳೆದಿತ್ತು.

ಈ ಟ್ವೀಟ್‍ಗೆ ಸಚಿನ್ ಏನು ಉತ್ತರ ಕೊಡುತ್ತಾರೆ ಎನ್ನುವ ನಿರೀಕ್ಷೆ ಅಭಿಮಾನಿಗಳಿಗಿತ್ತು. ಬುಧವಾರ ಸಚಿನ್, “ಅಂತೂ ಈ ಬಾರಿ ನಾನು ಬ್ಯಾಟ್ ಮಾಡುತ್ತಿಲ್ಲ, ಬೌಲಿಂಗ್ ಮಾಡುತ್ತಿದ್ದೇನೆ. ಅಂಪೈರ್ ತೀರ್ಮಾನವೇ ಅಂತಿಮ ತೀರ್ಮಾನ “ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಸಚಿನ್ ಅವರು ಈ ಟ್ವೀಟ್‍ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದು, “ಏನ್ ಸಿಕ್ಸ್ ಇದು. ಸ್ಟೇಡಿಯಂನಿಂದ ಹೊರಗಡೆ ಹೋಗಿದೆ” ಎಂದು ಪ್ರಶಂಸಿದ್ದಾರೆ.

ಐಸಿಸಿಯ ಗೂಗ್ಲಿಗೆ ಸಚಿನ್ ಸೂಪರ್ ಆಗಿ ಬ್ಯಾಟ್ ಬೀಸಿದ್ದರೆ ಎಂದು ಒಬ್ಬರು ಪ್ರತಿಕ್ರಿಯಿಸಿದ್ದರೆ, ಒಂದು ವೇಳೆ 1990-2000 ದಶಕದಲ್ಲಿ ಡಿಆರ್‌ಎಸ್  ಸಿಸ್ಟಂ ಇದ್ದರೆ ಸಚಿನ್ 125-135 ಕ್ರಿಕೆಟ್ ಶತಕ ಹೊಡೆಯುತ್ತಿದ್ದರು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

sachin rahul

ಸ್ವೀವ್ ಬಕ್ನರ್ ವರ್ಸಸ್ ಸಚಿನ್:
ಹಲವಾರು ಕ್ರಿಕೆಟ್ ಪಂದ್ಯಗಳಲ್ಲಿ ಸಚಿನ್ ವಿರುದ್ಧವಾಗಿ ವೆಸ್ಟ್ ಇಂಡೀಸಿನ ಸ್ವೀವ್ ಬಕ್ನರ್ ಎಲ್‍ಬಿ ತೀರ್ಪು ನೀಡಿದ್ದರು. ಅಷ್ಟೇ ಅಲ್ಲದೇ ಬಾಲ್ ಬ್ಯಾಟಿಗೆ ತಾಗದೇ ಇದ್ದರೂ ಕೀಪರ್ ಮನವಿ ಸಲ್ಲಿಸಿದ ಕೂಡಲೇ ಔಟ್ ತೀರ್ಪು ನೀಡುತ್ತಿದ್ದರು. ಒಂದು ಎರಡು ಬಾರಿ ತಪ್ಪಾಗಿ ಆಗಿದ್ದರೆ ಕ್ರಿಕೆಟ್ ಅಭಿಮಾನಿಗಳು ಈ ವಿಚಾರವನ್ನು ಮರೆತು ಬಿಡುತ್ತಿದ್ದರು. ಆದರೆ ಪದೇ ಪದೇ ಸ್ವೀವ್ ಬಕ್ನರ್ ಸಚಿನ್ ವಿರುದ್ಧವಾಗಿ ತೀರ್ಪು ನೀಡಿದ್ದರಿಂದ ಸಚಿನ್ ಅಭಿಮಾನಿಗಳು ಬಕ್ನರ್ ಅವರನ್ನು ವಿಲನ್ ರೂಪದಲ್ಲೇ ಈಗಲೂ ನೋಡುತ್ತಿದ್ದಾರೆ. ಸಚಿನ್ ಅಲ್ಲದೇ ಭಾರತದ ಹಲವು ಆಟಗಾರು ಬಕ್ನರ್ ನೀಡಿದ ಕೆಟ್ಟ ತೀರ್ಪಿನಿಂದ ಔಟಾಗಿದ್ದಾರೆ. ಭಾರತ ಬೌಲಿಂಗ್ ನಡೆಸುತ್ತಿದ್ದಾಗ ಬ್ಯಾಟ್ಸ್ ಮನ್ ಗಳು ಎಲ್‍ಬಿ, ಕೀಪರ್ ಕ್ಯಾಚ್ ಆಗಿ ಔಟ್ ಆಗಿದ್ದರೂ ‘ನಾಟೌಟ್‘ ತೀರ್ಪು ನೀಡುತ್ತಿದ್ದರು.

sachin sehwag

ಗಂಗೂಲಿಯಿಂದ ‘ತೀರಾ ಕಳಪೆ’  ರೇಟಿಂಗ್:
2004ರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 705 ರನ್‍ಗಳಿಗೆ ಡಿಕ್ಲೇರ್ ಮಾಡಿಕೊಂಡಿತ್ತು. ಈ ಪಂದ್ಯಲ್ಲಿ ಸಚಿನ್ ಔಟಾಗದೇ 241 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಬಕ್ನರ್ ಆಸ್ಟ್ರೇಲಿಯಾ ಆಟಗಾರರ ಎಲ್‍ಬಿ/ ಕ್ಯಾಚ್ ಔಟ್ ತೀರ್ಪು ನೀಡದ ಪರಿಣಾಮ ಪಂದ್ಯದ ಫಲಿತಾಂಶವೇ ಬದಲಾಗಿ ಅಂತಿಮವಾಗಿ ಡ್ರಾದಲ್ಲಿ ಅಂತ್ಯಗೊಂಡಿತ್ತು.

ಪ್ರತಿ ಪಂದ್ಯದ ಬಳಿಕ ತಂಡದ ನಾಯಕರು ಅಂಪೈರ್ ನಿರ್ವಹಣೆಯ ಬಗ್ಗೆ ತಮ್ಮ ರೇಟಿಂಗ್ ದಾಖಲಿಸುವುದನ್ನು ಐಸಿಸಿ ಕಡ್ಡಾಯ ಮಾಡಿದೆ. ಅತ್ಯುತ್ತಮ, ಉತ್ತಮ, ಸಾಧಾರಣ, ಕಳಪೆ, ತೀರಾ ಕಳಪೆ ಈ ರೇಟಿಂಗ್ ನೀಡಬೇಕಾಗುತ್ತದೆ. ಸಿಡ್ನಿ ಟೆಸ್ಟ್ ಪಂದ್ಯದ ಬಳಿಕ ಸೌರವ್ ಗಂಗೂಲಿ ಬಕ್ನರ್ ಅವರಿಗೆ ‘ತೀರಾ ಕಳಪೆ‘ ರೇಟಿಂಗ್ ನೀಡಿದ್ದರು. ಈ ವಿಚಾರ 15 ವರ್ಷಗಳ ಹಿಂದೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.

sourav ganguly

128 ಟೆಸ್ಟ್‌, 181 ಏಕದಿನ ಪಂದ್ಯಗಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದ ವಿವಾದಿತ ಅಂಪೈರ್ ಸ್ಟೀವ್ ಬಕ್ನರ್ 2009ರಲ್ಲಿ ಅಂಪೈರಿಂಗ್ ವೃತ್ತಿಗೆ ನಿವೃತ್ತಿ ಹೇಳಿದ್ದರು.

Steve Bucknor e1557994898586

Share This Article
Leave a Comment

Leave a Reply

Your email address will not be published. Required fields are marked *