4 ಅಂಕಗಳಿಂದ ಕೊಹ್ಲಿಗೆ ತಪ್ಪಿತು ಅಗ್ರಸ್ಥಾನ

Public TV
2 Min Read
king kohli

– ಟಾಪ್ 10ನಲ್ಲಿ ಸ್ಥಾನ ಪಡೆದ ಮಯಾಂಕ್
– ಟಾಪ್10 ಬೌಲರ್‌ಗಳ ಪಟ್ಟಿಯಲ್ಲಿ ಬುಮ್ರಾ, ಅಶ್ವಿನ್

ದುಬೈ: ಐಸಿಸಿ ಟೆಸ್ಟ್ ನೂತನ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದ್ದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಲ್ಕು ಪಾಯಿಂಟ್‍ಗಳಿಂದ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರಸ್ಥಾನವನ್ನು ತಪ್ಪಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಮಯಾಂಕ್ ಅಗರ್ವಾಲ್ ಟಾಪ್ 10 ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯದಲ್ಲಿ 136 ರನ್ ಗಳಿಸಿದ್ದರು. ಈ ಮೂಲಕ 22 ರೇಟಿಂಗ್ ಪಾಯಿಂಟ್ ಪಡೆದಿದ್ದಾರೆ. ಈ ಹಿಂದೆ ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ 931 ಪಾಯಿಂಟ್‍ಗಳಿಂದ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. 928 ಪಾಯಿಂಟ್ ಪಡೆದಿರುವ ವಿರಾಟ್ ಕೊಹ್ಲಿ ಕೇವಲ 3 ಪಾಯಿಂಟ್‍ಗಳ ಅಂತರದಿಂದ ಅಗ್ರಸ್ಥಾನ ತಪ್ಪಿಸಿಕೊಂಡಿದ್ದಾರೆ.

kohli smith

ಅಗ್ರ ಹತ್ತು ಬ್ಯಾಟ್ಸ್‌ಮನ್ ಗಳಲ್ಲಿ ನಾಲ್ಕು ಭಾರತೀಯರು ಸೇರಿದ್ದಾರೆ. ಮಾಯಾಂಕ್ ಅಗರ್ವಾಲ್ ಮೊದಲ ಬಾರಿಗೆ ಮೊದಲ ಹತ್ತು ಸ್ಥಾನಗಳಲ್ಲಿದ್ದಾರೆ. ಅಗರ್ವಾಲ್ 700 ರೇಟಿಂಗ್ ಪಾಯಿಂಟ್‍ಗಳ ಮೂಲಕ ಹತ್ತನೇ ಸ್ಥಾನಕ್ಕೆ ಏರಿದ್ದಾರೆ. ಎರಡನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದರೆ, ಚೇತೇಶ್ವರ ಪೂಜಾರ 791 ಅಂಕಗಳಿಂದ ನಾಲ್ಕನೇ ಸ್ಥಾನ ಮತ್ತು ಅಜಿಂಕ್ಯಾ ರಹಾನೆ 759 ಅಂಕಗಳಿಂದ ಐದನೇ ಸ್ಥಾನಗಳಿಸಿದ್ದಾರೆ.

ಆಸ್ಟ್ರೇಲಿಯಾದ ಮಾರ್ನಸ್ ಲಾಬುಶೇನ್ ಮತ್ತು ನ್ಯೂಜಿಲೆಂಡ್‍ನ ಜಾನ್ ವಾಟ್ಲಿಂಗ್ ಅವರು ತಮ್ಮ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕ ತಲುಪಿದ್ದಾರೆ. ಲಬುಶೇನ್ ಪಾಕಿಸ್ತಾನ ವಿರುದ್ಧ 185 ರನ್ ಗಳಿಸಿದ್ದರು. ಇದರಿಂದಾಗಿ ಅವರು 21 ಸ್ಥಾನಗಳಿಂದ 14ನೇ ಸ್ಥಾನಕ್ಕೆ ಏರಿದ್ದಾರೆ. ಇದೇ ಸಮಯದಲ್ಲಿ, ವಾಟ್ಲಿಂಗ್ ಕೂಡ ಇಂಗ್ಲೆಂಡ್ ವಿರುದ್ಧ 205 ರನ್ ಹೊಡೆದ ನಂತರ 24 ನೇ ಸ್ಥಾನದಿಂದ 12ನೇ ಸ್ಥಾನವನ್ನು ತಲುಪಿದ್ದಾರೆ. ಇಂಗ್ಲೆಂಡ್ ಆಲ್‍ರೌಂಡರ್ ಬೆನ್ ಸ್ಟೋಕ್ಸ್ ಕೂಡ ಮೊದಲ ಬಾರಿಗೆ ಟಾಪ್10ನಲ್ಲಿ ಸ್ಥಾನ ಪಡೆದಿದ್ದಾರೆ. 704 ರೇಟಿಂಗ್ ಪಾಯಿಂಟ್‍ಗಳೊಂದಿಗೆ ಅವರು ಒಂಬತ್ತನೇ ಸ್ಥಾನದಲ್ಲಿದ್ದಾರೆ.

ಬೌಲರ್‌ಗಳ ಟೆಸ್ಟ್ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮ್ಮಿನ್ಸ್ 907 ಪಾಯಿಂಟ್‍ಗಳಿಂದ ಮೊದಲ ಸ್ಥಾನ ಮತ್ತು ದಕ್ಷಿಣ ಆಫ್ರಿಕಾದ ಕಗಿಸೊ ರಬಾಡಾ 839 ಅಂಕಗಳಿಂದ ಎರಡನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ನ್ಯೂಜಿಲೆಂಡ್‍ನ ನೀಲ್ ವೆಗ್ನರ್ ಐದು ಸ್ಥಾನಗಳ ಜಿಗಿದು 816 ಅಂಕಗಳಿಂದ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಟಾಪ್-10 ರಲ್ಲಿ ಕೇವಲ ಇಬ್ಬರು ಭಾರತೀಯರಿದ್ದಾರೆ. ವೇಗಿ ಜಸ್ಪ್ರೀತ್ ಬುಮ್ರಾ 794 ಅಂಕ ಗಳಿಸಿ ಒಂದು ಸ್ಥಾನ ಕಳೆದುಕೊಂಡು ಐದನೇ ಸ್ಥಾನಕ್ಕೆ ಕುಸಿದರೆ, ರವಿಚಂದ್ರನ್ ಅಶ್ವಿನ್ 772 ಅಂಕಗಳಿಂದ ಒಂಬತ್ತನೇ ಸ್ಥಾನದಲ್ಲಿದ್ದಾರೆ.

Jasprit Bumrah

ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ವೇಗಿಗಳಾದ ಇಶಾಂತ್ ಶರ್ಮಾ ಮತ್ತು ಉಮೇಶ್ ಯಾದವ್ ಕೂಡ ಉತ್ತಮ ಶ್ರೇಯಾಂಕದಲ್ಲಿದ್ದಾರೆ. ಈ ಇಬ್ಬರೂ ತಮ್ಮ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್ ಪಾಯಿಂಟ್‍ಗಳನ್ನು ತಲುಪಿದರು. 716 ರೇಟಿಂಗ್ ಪಾಯಿಂಟ್‍ಗಳೊಂದಿಗೆ ಇಶಾಂತ್ 17ನೇ ಸ್ಥಾನದಲ್ಲಿದ್ದಾರೆ. ಜುಲೈ 2011ರಲ್ಲಿ ಇಶಾಂತ್ ಶರ್ಮಾ ಅತ್ಯುತ್ತಮ ಟೆಸ್ಟ್ ಶ್ರೇಯಾಂಕ ಏಳನೇ ಸ್ಥಾನದಲ್ಲಿದ್ದರು. 672 ರೇಟಿಂಗ್ ಪಾಯಿಂಟ್‍ಗಳೊಂದಿಗೆ ಉಮೇಶ್ ಈಗ 21ನೇ ಸ್ಥಾನದಲ್ಲಿದ್ದಾರೆ.

ಜಡೇಜಾಗೆ ಎರಡನೇ ಸ್ಥಾನ:
ಟೀಂ ಇಂಡಿಯಾ ಆಲ್‍ರೌಂಡರ್ ರವೀಂದ್ರ ಜಡೇಜಾ ಬೌಲರ್‍ಗಳ ಶ್ರೇಯಾಂಕದಲ್ಲಿ ಒಂದು ಸ್ಥಾನ ಏರಿಕೆಯಾಗಿ 15ನೇ ಸ್ಥಾನ ಪಡೆದಿದ್ದಾರೆ. ಇದೇ ಸಮಯದಲ್ಲಿ, ಅವರು ಆಲ್‍ರೌಂಡರ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅಗ್ರಸ್ಥಾನದಲ್ಲಿ ವೆಸ್ಟ್ ಇಂಡೀಸ್‍ನ ಜೇಸನ್ ಹೋಲ್ಡರ್ ಇದ್ದಾರೆ. ಅವರು 472 ಅಂಕಗಳನ್ನು ಗಳಿಸಿದ್ದಾರೆ. ಭಾರತದ ಸ್ಪಿನ್ನರ್ ಆರ್.ಅಶ್ವಿನ್ 308 ಅಂಕಗಳಿಂದ ಐದನೇ ಸ್ಥಾನದಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *