ಐಸಿಸಿ 2024ರ ವರ್ಷದ ಟೆಸ್ಟ್ ಕ್ರಿಕೆಟಿಗ (ICC Test Cricketer) ಪ್ರಶಸ್ತಿಯನ್ನು ಭಾರತದ (Team India) ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಪಡೆದುಕೊಂಡಿದ್ದಾರೆ.
2024ರಲ್ಲಿ ಅವರ ಅದ್ಭುತ ಪ್ರದರ್ಶನ ಹಾಗೂ ಆಸ್ಟ್ರೇಲಿಯಾ ಪ್ರವಾಸದಲ್ಲಿನ ಸ್ಥಿರತೆ, 71 ವಿಕೆಟ್‌ಗಳ ಸಾಧನೆಯಿಂದಾಗಿ ಈ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ. ಬುಮ್ರಾ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಮೊದಲ ವೇಗದ ಬೌಲರ್ ಆಗಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ.
Advertisement
BCCI POSTER FOR TEST CRICKETER OF THE YEAR – JASPRIT BUMRAH. 🐐 pic.twitter.com/npvI9KqL2x
— Mufaddal Vohra (@mufaddal_vohra) January 27, 2025
Advertisement
ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಬುಮ್ರಾ ಸ್ಥಿರ ಪ್ರದರ್ಶನ ನೀಡಿದ್ದರು. ಇಡೀ ಸರಣಿಯಲ್ಲಿ ಬುಮ್ರಾ ತಮ್ಮ ಕರಾರುವಕ್ಕಾದ ದಾಳಿಯಿಂದ ಆಸೀಸ್ ಆಟಗಾರರನ್ನು ಕಟ್ಟಿಹಾಕಿದ್ದರು. 9 ಇನ್ನಿಂಗ್ಸ್‌ಗಳಲ್ಲಿ ಒಟ್ಟು 32 ವಿಕೆಟ್ ಕಬಳಿಸುವ ಮೂಲಕ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು. ಬುಮ್ರಾ ಅವರ ಬೆಂಕಿ ಚೆಂಡಿನ ದಾಳಿಯಿಂದಾಗಿ ಟೀಂ ಇಂಡಿಯಾ ಇಡೀ ಸರಣಿಯಲ್ಲಿ ವೈಟ್ ವಾಶ್ ಮುಖಭಂಗದಿಂದ ತಪ್ಪಿಸಿಕೊಂಡಿತ್ತು. ಅಲ್ಲದೇ 2024ರ ಟಿ20 ಟಿಶ್ವಕಪ್ ಟೂರ್ನಿಯಲ್ಲಿ ಬುಮ್ರಾ 13 ವಿಕೆಟ್ ಕಿತ್ತರೂ ಸರಣಿ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದರು.
Advertisement
Advertisement
ಬುಮ್ರಾ 2024 ರಲ್ಲಿ ಒಟ್ಟು 13 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ ಅವರು 14.92 ಸರಾಸರಿಯಲ್ಲಿ 71 ವಿಕೆಟ್ ಪಡೆದಿದ್ದರು. ಈ ಮೂಲಕ ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಟೆಸ್ಟ್ ಇತಿಹಾಸದಲ್ಲಿ ಒಂದು ವರ್ಷದಲ್ಲಿ 70+ ವಿಕೆಟ್‌ಗಳನ್ನು ಪಡೆದ 17 ಬೌಲರ್‌ಗಳ ಪೈಕಿ ಬುಮ್ರಾ ಮಾತ್ರ ಕಡಿಮೆ ಸರಾಸರಿ ಹೊಂದಿರುವ ಬೌಲರ್ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಕ್ಯಾಲೆಂಡರ್ ವರ್ಷದಲ್ಲಿ 70+ ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತದ ನಾಲ್ಕನೇ ಬೌಲರ್ ಎಂಬ ಹೆಗ್ಗಳಿಕೆಗೂ ಬುಮ್ರಾ ಪಾತ್ರರಾಗಿದ್ದರು.
ವರ್ಷದ ಐಸಿಸಿ ಟೆಸ್ಟ್ ಕ್ರಿಕೆಟಿಗರಾಗಿ ಆಯ್ಕೆಯಾದ ಬಗ್ಗೆ ಪ್ರತಿಕ್ರಿಯಿಸಿರುವ ಬುಮ್ರಾ, ನಾನು ಯಾವಾಗಲೂ ಟೆಸ್ಟ್ ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ. ಕಳೆದ ವರ್ಷ ನನಗೆ ತುಂಬಾ ವಿಶೇಷವಾಗಿತ್ತು. ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ವೈಜಾಗ್‌ನಲ್ಲಿ ಒಲಿ ಪೋಪ್ ನಾನು ಪಡೆದ ವಿಕೆಟ್ ಅತ್ಯಂತ ವಿಶೇಷವಾಗಿತ್ತು. ಆ ವಿಕೆಟ್‌ನಿಂದಾಗಿ ಪಂದ್ಯದ ಗತಿಯೇ ಬದಲಾಗಿತ್ತು. ಈ ಪ್ರಶಸ್ತಿಯಿಂದ ತುಂಬಾ ಸಂತೋಷವಾಗಿದೆ ಎಂದಿದ್ದಾರೆ.