ದುಬೈ: ಏಷ್ಯಾ ಕಪ್‌ನಲ್ಲಿ (Asia Cup) ಸಿಕ್ಸ್, ಬೌಂಡರಿ ಸಿಡಿಸಿ ಸದ್ದು ಮಾಡಿದ ಅಭಿಷೇಕ್ ಶರ್ಮಾ (Abhishek Sharma) ಐಸಿಸಿ ಟಿ20 (ICC T20) ರ‍್ಯಾಕ್ ಪಟ್ಟಿಯಲ್ಲಿ ವಿಶ್ವದಾಖಲೆ (World Record) ಮಾಡಿದ್ದಾರೆ.
25 ವರ್ಷದ ಅಭಿಷೇಕ್ ಶರ್ಮಾ ಮೊದಲ ಸ್ಥಾನ ಪಡೆದಿದ್ದು ಅಲ್ಲದೇ 926 ರೇಟಿಂಗ್ ಪಾಯಿಂಟ್ ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಇಲ್ಲಿಯವರೆಗೆ 2020 ರಲ್ಲಿ ಇಂಗ್ಲೆಂಡಿನ ಡೇವಿಡ್ ಮಲಾನ್ 919 ರೇಟಿಂಗ್ ಪಾಯಿಂಟ್ ಪಡೆದಿದ್ದು ಇದೂವರೆಗಿನ ದಾಖಲೆಯಾಗಿತ್ತು. ಆದರೆ ಏಷ್ಯಾ ಕಪ್‌ನ 7 ಪಂದ್ಯಗಳಿಂದ 314 ರನ್ ಸಿಡಿಸಿದ್ದರಿಂದ ವಿಶ್ವದಾಖಲೆ ನಿರ್ಮಾಣವಾಗಿದೆ. ಇದನ್ನೂ ಓದಿ: ಬಿಸಿಸಿಐ ಮುಂದೆ ಮಂಡಿಯೂರಿದ ಪಾಕ್ ಸಚಿವ – ಕದ್ದೊಯ್ದಿದ್ದ ಏಷ್ಯಾ ಕಪ್ ವಾಪಸ್
ವಿರಾಟ್ ಕೊಹ್ಲಿ ಈ ಹಿಂದೆ 909 ರೇಟಿಂಗ್ ಪಾಯಿಂಟ್ ಪಡೆದಿದ್ದರು. ಇದು ಈವರೆಗಿನ ಭಾರತೀಯ ಬ್ಯಾಟರ್‌ನ ಅತ್ಯುತ್ತಮ ರೇಟಿಂಗ್ ಪಾಯಿಂಟ್ ಆಗಿತ್ತು. ಆದರೆ ಈಗ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಅಭಿಷೇಕ್ ಶರ್ಮಾ ಮುರಿದಿದ್ದಾರೆ.
ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಶರ್ಮಾ 31 ಎಸೆತಗಳಲ್ಲಿ 61 ರನ್ (8 ಬೌಂಡರಿ, 2 ಸಿಕ್ಸ್) ಸಿಡಿಸಿದ್ದರು. ಈ ಸ್ಫೋಟಕ ಆಟದಿಂದಾಗಿ ಅಭಿಷೇಕ್ ಶರ್ಮಾ ಅವರ ರೇಟಿಂಗ್ ಪಾಯಿಂಟ್ ರಾಕೆಟ್‌ನಂತೆ ಮೇಲಕ್ಕೆ ಹೋಗಿದೆ.
ಅಂಕಪಟ್ಟಿಯಲ್ಲಿ ಫಿಲ್ ಸಾಲ್ಟ್ 2ನೇ ರ‍್ಯಾಕ್ ಪಡೆದರೆ ತಿಲಕ್ ವರ್ಮಾ ಮೂರನೇ ಸ್ಥಾನ ಪಡೆದಿದ್ದಾರೆ. 2 ಸ್ಥಾನ ಕುಸಿದಿದ್ದರಿಂದ ಸೂರ್ಯಕುಮಾರ್ ಯಾದವ್ 8ನೇ ಸ್ಥಾನಕ್ಕೆ ಜಾರಿದ್ದಾರೆ.