ನಾಗ್ಪುರ: ಆಸ್ಟ್ರೇಲಿಯಾ (Australia) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (Test Cricket) ಉತ್ತಮ ಪ್ರದರ್ಶನ ನೀಡಿದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ (Ravindra Jadeja) ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ದಂಡದ ಬಿಸಿ ಮುಟ್ಟಿಸಿದೆ.
ಪ್ರಥಮ ಇನ್ನಿಂಗ್ಸ್ನಲ್ಲಿ ಜಡೇಜಾ ಮೊದಲ ಹಂತದ ಐಸಿಸಿ ಕೋಡ್ ಆಫ್ ಕಂಡಕ್ಟ್ (ICC Code of Conduct) ನಿಯಮ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜಡೇಜಾ ಅವರ ಪಂದ್ಯದ ಸಂಭಾವನೆಯಲ್ಲಿ ಶೇ.25 ರಷ್ಟು ದಂಡವನ್ನು ವಿಧಿಸಲಾಗಿದೆ ಎಂದು ಐಸಿಸಿ ತಿಳಿಸಿದೆ. ಇದನ್ನೂ ಓದಿ: ಅಶ್ವಿನ್, ಶಮಿ ಸ್ಪಿನ್ ದಾಳಿಗೆ ಮಕಾಡೆ ಮಲಗಿದ ಕಾಂಗರೂ ಪಡೆ – ಭಾರತಕ್ಕೆ 1-0 ಜಯದ ಮುನ್ನಡೆ
Advertisement
???? JUST IN: India star handed penalty for ICC Code of Conduct charge during first Test against Australia!#WTC23 | #INDvAUS | Details ????
— ICC (@ICC) February 11, 2023
Advertisement
ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯ ಮೊದಲ ದಿನದ ಇನ್ನಿಂಗ್ಸ್‌ನಲ್ಲಿ 46ನೇ ಓವರ್‌ನಲ್ಲಿ ಈ ಘಟನೆ ನಡೆದಿತ್ತು. ಮೊಹಮ್ಮದ್ ಸಿರಾಜ್ ಅವರಿಂದ ವಸ್ತುವೊಂದನ್ನು ಪಡೆದುಕೊಂಡ ರವೀಂದ್ರ ಜಡೇಜಾ ಅವರು, ತಮ್ಮ ತೋರು ಬೆರಳಿಗೆ ಹಚ್ಚಿಕೊಂಡಿದ್ದರು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿತ್ತು. ಇದನ್ನೂ ಓದಿ: ಜಡೇಜಾ, ಅಶ್ವಿನ್ ದಾಳಿಗೆ ಆಸ್ಟ್ರೇಲಿಯಾ ಪಲ್ಟಿ – ಏಕದಿನ ಶೈಲಿಯಲ್ಲಿ ರೋಹಿತ್ ಬ್ಯಾಟಿಂಗ್
Advertisement
Advertisement
ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಟ್ರೇಲಿಯಾ ಮಾಧ್ಯಮಗಳು ರವೀಂದ್ರ ಜಡೇಜಾ ವಿರುದ್ಧ ಬಾಲ್ ಟ್ಯಾಂಪರಿಂಗ್ ಆರೋಪ ಮಾಡಿದ್ದವು. ಮೊದಲನೇ ದಿನದಾಟದ ಅಂತ್ಯಕ್ಕೆ ಮ್ಯಾಚ್ ರೆಫರಿ ಈ ವೀಡಿಯೋವನ್ನು ನಾಯಕ ರೋಹಿತ್ ಶರ್ಮಾ (Rohit Sharma) ಹಾಗೂ ಜಡೇಜಾಗೆ ತೋರಿಸಿ ಸ್ಪಷ್ಟನೆ ಕೇಳಿದ್ದರು. ಬೆರಳಿನಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ನೋವು ನಿವಾರಕ ಕ್ರೀಮ್ ಹಚ್ಚಿಕೊಳ್ಳಲಾಗಿತ್ತು ಎಂದು ರೋಹಿತ್ ಸ್ಪಷ್ಟನೆ ನೀಡಿದ್ದರು. ಇದಾದ ಬಳಿಕ ಜಡೇಜಾಗೆ ಕ್ಲೀನ್ ಚೀಟ್ ನೀಡಲಾಗಿತ್ತು.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗಾವಾಸ್ಕರ್ ಟ್ರೋಫಿ (Border Gavaskar Trophy 2023) ಟೆಸ್ಟ್ ಸರಣಿಯಲ್ಲಿ 132 ರನ್‌ಗಳ ಭರ್ಜರಿ ಜಯ ಸಾಧಿಸಿರುವ ಭಾರತ ತಂಡ 1-0 ಅಂತರದಲ್ಲಿ ಜಯದ ಮುನ್ನಡೆ ಸಾಧಿಸಿದೆ.
ಬಾಲ್ ಟ್ಯಾಂಪರಿಂಗ್ ಅಂದ್ರೆ ಏನು?
ಯಾವುದೇ ಪಂದ್ಯ ನಡೆಯುವ ವೇಳೆ ಚೆನ್ನಾಗಿರುವ ಚೆಂಡನ್ನು ಫೀಲ್ಡಿಂಗ್ ತಂಡದ ಆಟಗಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಐಸಿಸಿ ನಿಯಮಗಳ ವಿರುದ್ಧವಾಗಿ ಯಾವುದಾದಾರೂ ವಸ್ತುಗಳನ್ನು ಬಳಸಿಕೊಂಡು ವಿರೂಪಗೊಳಿಸುವುದು. ಶೈನ್ ಇರುವ ಚೆಂಡನ್ನು ಚೆನ್ನಾಗಿ ಉಜ್ಜುವುದು, ಆ ಮೂಲಕ ಚೆಂಡನ್ನು ಹೆಚ್ಚು ಸ್ವಿಂಗ್ ಆಗುವಂತೆ ಹಾಗೂ ಬ್ಯಾಟ್ಸ್ಮನ್‌ಗೆ ಆಡದಂತೆ ಮಾಡುವುದನ್ನ ಬಾಲ್ ಟ್ಯಾಂಪರಿಂಗ್ ಎಂದು ಕರೆಯುತ್ತಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k