ಲಂಡನ್: ಐಸಿಸಿ ತನ್ನ ಕ್ರಿಕೆಟ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದ್ದು, ಇನ್ನು ಮುಂದೇ ಸ್ಲೋ ಓವರ್ ಮಾಡಿದ ತಪ್ಪಿಗೆ ತಂಡದ ನಾಯಕರ ಅಮಾನತು ಇಲ್ಲ ಎಂದು ಹೇಳಿದೆ.
ಮುಂದಿನ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಹಿನ್ನೆಲೆಯಲ್ಲಿ ಈ ಬದಲಾವಣೆಯನ್ನು ಮಾಡಿದ್ದು, ಹಲವು ಹಿರಿಯ ಅನುಭವಿ ಆಟಗಾರರು ಹಾಗೂ ತಜ್ಞರು ನೀಡಿರುವ ಸಲಹೆಗಳನ್ನು ಸ್ವೀಕರಿಸಿ ಈ ನಿರ್ಧಾರ ಮಾಡಲಾಗಿದೆ.
Advertisement
Advertisement
ಆಗಸ್ಟ್ 1 ರಿಂದ 2019 ರಿಂದ 2021ರ ಅವಧಿಯಲ್ಲಿ ವಿಶ್ವ ಕ್ರಿಕೆಟ್ ಟೆಸ್ಟ್ ಟೂರ್ನಿ ನಡೆಯಲಿದೆ. ಹಳೆಯ ನಿಯಮದ ಅನ್ವಯ ಪಂದ್ಯದ ವೇಳೆ ನಾಯಕ ಸ್ಲೋ ಓವರ್ ರೇಟಿಂಗ್ ದಾಖಲಾದರೆ ತಂಡದ ನಾಯಕನಿಗೆ, ಆಟಗಾರರಿಗೆ ದಂಡ ವಿಧಿಸಲಾಗುತ್ತಿತ್ತು. ಆದರೆ 2ನೇ ಪಂದ್ಯದಲ್ಲೂ ಇದು ಮುಂದುವರಿದರೆ ನಾಯಕನಿಗೆ 1 ಪಂದ್ಯ ನಿಷೇಧ ಹೇರಲಾಗುತಿತ್ತು.
Advertisement
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯದ ಕೊನೆಯಲ್ಲಿ ನಿಗದಿತ ಓವರ್ ರೇಟ್‍ಗಿಂತಲೂ ಹಿಂದಿದ್ದರೆ ಪ್ರತಿ ಓವರಿಗೆ 2 ಕಾಂಪಿಟೇಷನ್ ಅಂಕಗಳನ್ನು ಕಡಿತ ಮಾಡಲಾಗುತ್ತಿತ್ತು. ಆದರೆ ಮುಂದಿನ ಅವಧಿಯಲ್ಲಿ ಈ ನಿಯಮ ಅನ್ವಯ ಆಗುವುದಿಲ್ಲ ಎಂದು ಐಸಿಸಿ ತಿಳಿಸಿದೆ. ಲಂಡನ್ ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಜಿಂಬಾಬ್ವೆ ಕ್ರಿಕೆಟ್ ಸಮಿತಿಯನ್ನು ತಕ್ಷಣದಿಂದ ಅಮಾನತು ಮಾಡಿದೆ.