ದುಬೈ: ಭಾರತದಿಂದ (India) ತನ್ನ ಟಿ20 ವಿಶ್ವಕಪ್(T20 World Cup) ಪಂದ್ಯಗಳನ್ನು ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (BCB) ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ತಿರಸ್ಕರಿಸಿದೆ.
ಎರಡು ಸಂಸ್ಥೆಗಳ ನಡುವಿನ ವರ್ಚುವಲ್ ಸಭೆಯಲ್ಲಿ ಈ ನಿರ್ಧಾರವನ್ನು ತಿಳಿಸಲಾಗಿದೆ. ಬಾಂಗ್ಲಾದೇಶವು ಟೂರ್ನಿಗಾಗಿ ಭಾರತಕ್ಕೆ ಪ್ರಯಾಣಿಸಬೇಕಾಗುತ್ತದೆ. ಪ್ರಯಾಣಿಸದಿದ್ದರೆ ಅಂಕಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದು ಐಸಿಸಿ ಸ್ಪಷ್ಟಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಚಾರದ ಬಗ್ಗೆ ಐಸಿಸಿಯಾಗಲಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಅಧಿಕೃತವಾಗಿ ತಿಳಿಸಿಲ್ಲ. ಐಸಿಸಿಯ ನಡೆಯ ಬಗ್ಗೆ ಬಾಂಗ್ಲಾ ನಿರ್ಧಾರ ಮುಂದೆ ಪ್ರಕಟವಾಗಲಿದೆ. ಇದನ್ನೂ ಓದಿ: ಬಾಂಗ್ಲಾದಲ್ಲಿ 2026ರ ಐಪಿಎಲ್ ಪ್ರಸಾರ ಬಂದ್ – RCB ಬ್ರ್ಯಾಂಡ್‌ಗೂ ಸಮವಿಲ್ಲ ಕ್ರಿಕೆಟ್‌ನ ಆದಾಯ!
ಬಾಂಗ್ಲಾದೇಶದ ವೇಗಿ ಮುಸ್ತಾಫಿಜುರ್ ರೆಹಮಾನ್ (Mustafizur Rahman) ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಬಿಡುಗಡೆ ಮಾಡಿದ ನಂತರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಬಿಸಿಬಿ ನಡುವಿನ ಸಂಬಂಧ ಹಳಸಿದೆ. ಇದನ್ನೂ ಓದಿ: IPL 2026 | ಬೆಂಗಳೂರಿನಿಂದ ಐಪಿಎಲ್ ಎತ್ತಂಗಡಿ..? – ಟ್ವಿಸ್ಟ್ ಕೊಟ್ಟ ಎಂಸಿಎ ಟ್ವೀಟ್!


