ದುಬೈ: ತವರಿನಲ್ಲಿ ನಡೆದ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ರ‍್ಯಾಂಕಿಂಗ್‍ನಲ್ಲಿ 6 ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಜಿಗಿದಿದ್ದಾರೆ.
Advertisement
ಇಂದು ಐಸಿಸಿ ಬಿಡುಗಡೆ ಮಾಡಿರುವ ಆಟಗಾರರ ರ‍್ಯಾಂಕಿಂಗ್‍ನಲ್ಲಿ ಬೌಲರ್‌ಗಳ ಪೈಕಿ ಬುಮ್ರಾ 4ನೇ ಸ್ಥಾನಕ್ಕೇರಿದರೆ, ಭಾರತದ ಸ್ಟಾರ್ ಬ್ಯಾಟ್ಸ್‌ಮ್ಯಾನ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಐಸಿಸಿ ಶ್ರೇಯಾಂಕದಲ್ಲಿ 9ನೇ ಸ್ಥಾನಕ್ಕೆ ಇಳಿದಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಕೊಂಚ ಬೇಸರ ತರಿಸಿದೆ. ಇದನ್ನೂ ಓದಿ: ಈ ಬಾರಿಯ ಐಪಿಎಲ್‍ನಲ್ಲಿ ಕಾಣಸಿಗಲ್ಲ ಈ ಜೋಡಿ ಆಟಗಾರರ ಕಮಾಲ್
Advertisement
Advertisement
ಬೆಂಗಳೂರಿನಲ್ಲಿ ಶ್ರೀಲಂಕಾ ವಿರುದ್ಧದ ಡೇ – ನೈಟ್ 2ನೇ ಟೆಸ್ಟ್‌ನಲ್ಲಿ 8 ವಿಕೆಟ್‍ಗಳನ್ನು ಪಡೆದುಕೊಂಡು ರ‍್ಯಾಂಕಿಂಗ್‍ನಲ್ಲಿ ಬುಮ್ರಾ, ಶಾಹೀನ್ ಅಫ್ರಿದಿ, ಕೈಲ್ ಜೇಮಿಸನ್, ಟಿಮ್ ಸೌಥಿ, ಜೇಮ್ಸ್ ಆಂಡರ್ಸನ್, ನೀಲ್ ವ್ಯಾಗ್ನರ್ ಮತ್ತು ಜೋಶ್ ಹ್ಯಾಜಲ್‍ವುಡ್ ಅವರನ್ನು ಬೌಲರ್‌ಗಳ ಶ್ರೇಯಾಂಕದಲ್ಲಿ ಹಿಂದಿಕ್ಕಿದ್ದಾರೆ. ಇದನ್ನೂ ಓದಿ: IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್
Advertisement
???? Jasprit Bumrah breaks into top 5 ????
???? Jason Holder reclaims top spot ????
???? Dimuth Karunaratne rises ????
Some big movements in the latest @MRFWorldwide ICC Men's Test Player Rankings ????
Details ???? https://t.co/MQENhZlPP8 pic.twitter.com/8OClbDeDtS
— ICC (@ICC) March 16, 2022
ಬ್ಯಾಟ್ಸ್‌ಮ್ಯಾನ್‌ಗಳ ಪೈಕಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, 4 ಸ್ಥಾನಗಳನ್ನು ಕಳೆದುಕೊಂಡರೆ, ರಿಷಬ್ ಪಂತ್ ಟಾಪ್-10 ರೊಳಗೆ ಉಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊಹಾಲಿಯಲ್ಲಿ ನಡೆದ ಆರಂಭಿಕ ಟೆಸ್ಟ್‌ನಲ್ಲಿ ಕೊಹ್ಲಿ 45ರನ್ ಗಳಿಸಿದರೆ, 2ನೇ ಟೆಸ್ಟ್‌ನಲ್ಲಿ 23 ಮತ್ತು 13ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ನವೆಂಬರ್ 2019ರಲ್ಲಿ ಬಾಂಗ್ಲಾದೇಶ ವಿರುದ್ಧ 136 ರನ್ ಗಳಿಸಿದ ನಂತರ ಕೊಹ್ಲಿ ಇನ್ನೂ ಶತಕ ಗಳಿಸಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಇದನ್ನೂ ಓದಿ: ಐಪಿಎಲ್ 2022: ಅಗ್ರ ವಿದೇಶಿ ಆಟಗಾರರು ಲೀಗ್‍ನ ಮೊದಲ ವಾರದಲ್ಲಿ ಲಭ್ಯವಿರಲ್ಲ
ಇನ್ನುಳಿದಂತೆ ಭಾರತದ ನಾಯಕ ರೋಹಿತ್ ಶರ್ಮಾ 6ನೇ ಸ್ಥಾನ ಉಳಿಸಿಕೊಂಡು ಬ್ಯಾಟಿಂಗ್ ಪಟ್ಟಿಯಲ್ಲಿ ಅತ್ಯುತ್ತಮ ಸ್ಥಾನ ಪಡೆದುಕೊಂಡಿದ್ದಾರೆ. ಭರ್ಜರಿ ಫಾರ್ಮ್‍ನಲ್ಲಿರುವ ಶ್ರೇಯಸ್ ಅಯ್ಯರ್ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಅಜೇಯ 92 ಮತ್ತು 67 ರನ್ ಗಳಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಆ ಬಳಿಕ ಇದೀಗ ರ‍್ಯಾಂಕಿಂಗ್‍ನಲ್ಲಿ 40 ರಿಂದ 37ನೇ ಸ್ಥಾನಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ.