ಮುಂಬೈ: 2028ರ ಒಲಿಂಪಿಕ್ಸ್ ಲಾಸ್ ಏಂಜಲೀಸ್‍ನಲ್ಲಿ ನಡೆಯಲಿದ್ದು 120 ವರ್ಷಗಳ ಬಳಿಕ ಒಲಿಂಪಿಕ್ಸ್‌ನಲ್ಲಿ (Olympics) ಕ್ರಿಕೆಟ್ (Cricket) ಸೇರ್ಪಡೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ICC) ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಮಂಡಳಿ (IOC) ಜೊತೆ ಚರ್ಚಿಸಿದೆ.
Advertisement
ಒಲಿಂಪಿಕ್ಸ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ತಲಾ ಆರು ತಂಡಗಳ ಟಿ20 ಪಂದ್ಯಾವಳಿಗೆ ಐಸಿಸಿ ಪ್ರಸ್ತಾಪವನ್ನಿಟ್ಟಿದೆ. ಆದರೆ ಈ ಬಗ್ಗೆ ಐಒಸಿ ಅಕ್ಟೋಬರ್‌ನಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದೆ. ಇದನ್ನೂ ಓದಿ: ಸ್ಟೇಡಿಯಂನಿಂದ ಮೈದಾನಕ್ಕೆ ಬಂದು ರೋಹಿತ್‍ರನ್ನು ತಬ್ಬಿಕೊಂಡ ಬಾಲಕ
Advertisement
Advertisement
ಒಲಿಂಪಿಕ್ಸ್‌ನ ಇತಿಹಾಸದಲ್ಲಿ 1900ನೇ ಇಸವಿಯಲ್ಲಿ ಪ್ಯಾರಿಸ್‍ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಒಮ್ಮೆ ಕ್ರಿಕೆಟ್ ಆಡಿಸಲಾಗಿತ್ತು. ಈ ಟೂರ್ನಿಯಲ್ಲಿ ಎರಡು ತಂಡಗಳು ಸ್ಪರ್ಧಿಸಿದ್ದವು. ಫ್ರಾನ್ಸ್ ಹಾಗೂ ಗ್ರೇಟ್ ಬ್ರಿಟನ್ ತಂಡಗಳು ಸ್ಪರ್ಧಿಸಿದ್ದವು. ಇದರಲ್ಲಿ ಗ್ರೇಟ್ ಬ್ರಿಟನ್ ಗೆದ್ದು ಚಿನ್ನದ ಪದಕ ಗೆದ್ದುಕೊಂಡಿದ್ದರೆ ಫ್ರಾನ್ಸ್ ಬೆಳ್ಳಿ ಪದಕ ಗೆದ್ದುಕೊಂಡಿತ್ತು. ಆ ಬಳಿಕ ಕ್ರಿಕೆಟ್‍ನ್ನು ಒಲಿಂಪಿಕ್ಸ್ ಕ್ರೀಡೆಯಿಂದ ತೆಗೆದು ಹಾಕಲಾಗಿತ್ತು. ಇದನ್ನೂ ಓದಿ: Will You Marry Me – ಆರೆಂಜ್ ಆರ್ಮಿ ಒಡತಿ ಕಾವ್ಯ ಮಾರನ್‍ಗೆ ಮದುವೆ ಪ್ರಸ್ತಾಪವಿಟ್ಟ ಪ್ರೇಕ್ಷಕ
Advertisement
ಐಸಿಸಿ ಪ್ರಸ್ತಾಪ:
2028ರ ಒಲಿಂಪಿಕ್ಸ್ ಟೂರ್ನಿಯಲ್ಲಿ ಪುರುಷರ ಹಾಗೂ ಮಹಿಳೆಯರ ತಲಾ ಆರು ತಂಡಗಳ ಟಿ20 ಮಾದರಿಯಲ್ಲಿ ಟೂರ್ನಿ ನಡೆಸಲು ಸಲಹೆ ನೀಡಿತ್ತು. ಆರು ತಂಡಗಳು ತಲಾ ಮೂರು ತಂಡಗಳ ಎರಡು ಗುಂಪುಗಳಲ್ಲಿ ಮೊದಲಿಗೆ ಸೆಣೆಸಾಡಿ ಎರಡು ಗುಂಪುಗಳ ತಲಾ ಎರಡು ಅಗ್ರ ತಂಡಗಳು ಸೆಮಿಫೈನಲ್‍ಗೆ ಪ್ರವೇಶ ಪಡೆಯುವಂತೆ, ಇಲ್ಲಿ ಗೆದ್ದ ಎರಡು ತಂಡಗಳು ಫೈನಲ್‍ಗೆ ಪ್ರವೇಶಿಸಿ ಚಿನ್ನದ ಪದಕಕ್ಕಾಗಿ ಸೆಣೆಸಾಟ ನಡೆಸುವಂತೆ ಪ್ರಸ್ತಾಪದಲ್ಲಿ ತಿಳಿಸಿತ್ತು. ಆದರೆ ಈ ಪ್ರಸ್ತಾಪಕ್ಕೆ ಐಒಸಿ ಒಪ್ಪಿಗೆ ಸೂಚಿಸಿಲ್ಲ. ಅಕ್ಟೋಬರ್‌ನಲ್ಲಿ ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಕ್ರಿಕೆಟ್ ಜೊತೆ ಬೇಸ್‍ಬಾಲ್, ಕರಾಟೆ, ಫ್ಲ್ಯಾಗ್ ಫುಟ್‍ಬಾಲ್, ಲ್ಯಾಕ್ರೋಸ್, ಬ್ರೇಕ್ ಡ್ಯಾನ್ಸ್, ಕಿಕ್‍ಬಾಕ್ಸಿಂಗ್, ಸ್ಕ್ವಾಷ್ ಮತ್ತು ಮೋಟಾರ್ ಸ್ಪೋಟ್ಸ್ ಒಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸಬೇಕೆಂದು ಮನವಿ ಸಲ್ಲಿಸಲಾಗಿತ್ತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k