ದುಬೈ: ಐಸಿಸಿ ಏಕದಿನ ಕ್ರಿಕೆಟ್ ರ‍್ಯಾಂಕಿಂಗ್ (ICC ODI Rankings) ಪಟ್ಟಿಯಲ್ಲಿ ಟೀಂ ಇಂಡಿಯಾ (Team India) ಕ್ರಿಕೆಟಿಗ ಶುಭಮನ್ ಗಿಲ್ (Shubman Gill), ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅವರನ್ನ ಹಿಂದಿಕ್ಕಿದ್ದಾರೆ. ಆದರೆ ಪಾಕ್ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ನಂ.1 ಸ್ಥಾನದಲ್ಲೇ ಮುಂದುವರಿದಿದ್ದಾರೆ.
Advertisement
ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ (Gujarat Taitans) ತಂಡದಲ್ಲಿ ಆಡುತ್ತಿರುವ ಶುಭಮನ್ ಗಿಲ್ ಏಕದಿನ ಕ್ರಿಕೆಟ್, ಟಿ20 ಹಾಗೂ ಟೆಸ್ಟ್ ಕ್ರಿಕೆಟ್ ಫಾರ್ಮ್ಯಾಟ್‌ಗಳಲ್ಲಿ ಉತ್ತಮ ಫಾರ್ಮ್ ಕಂಡುಕೊಂಡಿದ್ದಾರೆ. ಬುಧವಾರ ಪ್ರಕಟವಾದ ಐಸಿಸಿ ಏಕದಿನ ರ‍್ಯಾಂಕಿಂಗ್ ಪಟ್ಟಿಯಲ್ಲಿ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಅವರನ್ನ ಹಿಂದಿಕ್ಕಿದ್ದಾರೆ. 738 ಅಂಕ ಗಳಿಸಿರುವ ಗಿಲ್ 4ನೇ ಸ್ಥಾನದಲ್ಲಿದ್ದರೆ, 719 ಅಂಕಗಳನ್ನ ಗಳಿಸಿರುವ ಕಿಂಗ್ ಕೊಹ್ಲಿ 6ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: 3rd T20I: ಶತಕ ಸಿಡಿಸಿ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದ ಗಿಲ್
Advertisement
Advertisement
ಟಾಪ್-10ನಲ್ಲಿ ಮೂವರು ಭಾರತೀಯರು: ಬುಧವಾರ ಐಸಿಸಿ ಬಿಡುಗಡೆ ಮಾಡಿದ ಏಕದಿನ ಕ್ರಿಕೆಟಿಗರ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೂವರು ಭಾರತೀಯರು ಸ್ಥಾನ ಪಡೆದುಕೊಂಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ 887 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ 777 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಇಮಾಮ್ ಉಲ್ ಹಕ್ (740 ಅಂಕ), ಶುಭಮನ್ ಗಿಲ್ (738 ಅಂಕ), ಡೇವಿಡ್ ವಾರ್ನರ್ (726 ಅಂಕ), ವಿರಾಟ್ ಕೊಹ್ಲಿ (719 ಅಂಕ), ಕ್ವಿಂಟನ್ ಡಿ ಕಾಕ್ (718 ಅಂಕ), ರೋಹಿತ್ ಶರ್ಮಾ (707 ಅಂಕ), ಸ್ಟೀವ್ ಸ್ಮಿತ್ (707 ಅಂಕ), ಹಾಗೂ ಫಖರ್ ಜಮಾನ್ (699 ಅಂಕ) ಕ್ರಮವಾಗಿ 3 ರಿಂದ 10ನೇ ಸ್ಥಾನಗಳಲ್ಲಿದ್ದಾರೆ. ಇದನ್ನೂ ಓದಿ: ಕೊನೆಯಲ್ಲಿ ಸಿಕ್ಸರ್, ಬೌಂಡರಿ – ಚೆನ್ನೈಗೆ ಗುನ್ನ ಕೊಟ್ಟ ಗುಜರಾತ್; ಹಾಲಿ ಚಾಂಪಿಯನ್ಸ್‌ಗೆ ರೋಚಕ ಜಯ
Advertisement
ಈ ವರ್ಷದ ಆರಂಭದಿಂದ ನಡೆದ ಸರಣಿಗಳಲ್ಲೂ ಶುಭಮನ್ ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್‌ನಲ್ಲಿ ಭರ್ಜರಿ ದ್ವಿಶತಕ ಸಿಡಿಸಿದ ಗಿಲ್, ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಅಜೇಯ 126 ರನ್ ಚಚ್ಚಿ ದಾಖಲೆ ಬರೆದಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲೂ ಶತಕ ಸಿಡಿಸಿದ್ದರು. ಇದೀಗ 16ನೇ ಆವೃತ್ತಿ ಐಪಿಎಲ್‌ನ ಆರಂಭಿಕ ಪಂದ್ಯದಲ್ಲೇ ಭರ್ಜರಿ ಅರ್ಧ ಶತಕ ಸಿಡಿಸಿ ಮಿಂಚಿದ್ದಾರೆ.