ದುಬೈ: ಪಾದಾರ್ಪಣೆ ಪಂದ್ಯದಲ್ಲೇ ಶತಕದ ಸಾಧನೆ ಮಾಡಿ ಭರವಸೆ ಮೂಡಿಸಿರುವ ಟೀಂ ಇಂಡಿಯಾ ಯುವ ಆಟಗಾರ ರಿಷಬ್ ಪಂತ್, ಐಸಿಸಿ ನೀಡುವ ವರ್ಷದ ಉದಯೋನ್ಮುಖ ಆಟಗಾರ ಗೌರವಕ್ಕೆ ಪಾತ್ರರಾಗಿದ್ದಾರೆ. ಅಲ್ಲದೇ ಐಸಿಸಿ ಟೆಸ್ಟ್ ಕ್ರಿಕೆಟ್ ತಂಡದಲ್ಲಿಯೂ ರಿಷಬ್ ಪಂತ್ ಸ್ಥಾನ ಪಡೆದಿದ್ದಾರೆ.
Congratulations to @RishabPant777, the ICC Men’s Emerging Cricketer of the Year 2018! ????????
He became the first Indian wicket-keeper to score a Test century in England, and equalled the record for the most catches taken in a Test, with 11 in Adelaide in December.#ICCAwards ???? pic.twitter.com/s5yQBuwWlv
— ICC (@ICC) January 22, 2019
Advertisement
21 ವರ್ಷದ ರಿಷಬ್ ಪಂತ್ ರನ್ನು ಐಸಿಸಿ ಆಯ್ಕೆ ಸಮಿತಿಯ ಗಮನ ಸೆಳೆಯಲು ಯಶಸ್ವಿಯಾಗಿದ್ದು, ಇಂಗ್ಲೆಂಡ್ ನೆಲದಲ್ಲಿ ಶತಕ ಸಿಡಿಸಿದ ಮೊದಲ ಟೀಂ ಇಂಡಿಯಾ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದರು. ಅಲ್ಲದೇ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 11 ಕ್ಯಾಚ್ ಪಡೆಯುವ ಮೂಲಕ ದಾಖಲೆ ಸರಿಗಟ್ಟಿದ್ದರು. ಆಸೀಸ್ ನೆಲದಲ್ಲಿ ಟೆಸ್ಟ್ ಶತಕ ಸಿಡಿಸಿದ ಟೀಂ ಇಂಡಿಯಾ ಮೊದಲ ವಿಕೆಟ್ ಕೀಪರ್ ಕೂಡ ಆಗಿದ್ದಾರೆ.
Advertisement
Congratulations to the ICC Test Team of the Year 2018!
???????? @Tomlatham2
???????? @IamDimuth
???????? Kane Williamson
???????? @imVkohli (c)
???????? @HenryNicholls27
???????? @RishabPant777
???? @Jaseholder98
???????? @KagisoRabada25
???????? @NathLyon421
???????? @Jaspritbumrah93
???????? @Mohmmadabbas111
➡️ https://t.co/ju3tzAxwc8 pic.twitter.com/0H28spZUmm
— ICC (@ICC) January 22, 2019
Advertisement
ರಿಷಬ್ ಇದುವರೆಗೂ ಆಡಿರುವ 9ನೇ ಟೆಸ್ಟ್ ಪಂದ್ಯಗಳ 15 ಇನ್ನಿಂಗ್ಸ್ ಗಳಲ್ಲಿ 2 ಶತಕ ಹಾಗೂ ಅರ್ಧ ಶತಕಗಳ ನೆರವಿನಿಂದ 696 ರನ್ ಸಿಡಿಸಿದ್ದಾರೆ. ಅಲ್ಲದೇ ಕಳೆದ 8 ಟೆಸ್ಟ್ ಪಂದ್ಯಗಳಲ್ಲಿ 2 ಸ್ಟಪಿಂಗ್ ಹಾಗೂ 40 ಕ್ಯಾಚ್ ಪಡೆದಿದ್ದಾರೆ. ಉಳಿದಂತೆ 3 ಏಕದಿನ ಪಂದ್ಯಗಳಲ್ಲಿ 41 ರನ್, 3 ಕ್ಯಾಚ್ ಹಾಗೂ 8 ಟಿ20 ಪಂದ್ಯಗಳಿಂದ 114 ರನ್ ಸೇರಿದಂತೆ 2 ಕ್ಯಾಚ್ ಪಡೆದು ಮಿಂಚಿದ್ದಾರೆ. ಇದನ್ನು ಓದಿ: ನನ್ನ ಸಂತೋಷಕ್ಕೆ ನೀನು ಕಾರಣ: ಅಭಿಮಾನಿಗಳಿಗೆ ಗೆಳತಿಯನ್ನು ಪರಿಚಯಿಸಿದ ರಿಷಬ್ ಪಂತ್
Advertisement
ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಆಯ್ಕೆ ಆಗಿದ್ದು, ವೇಗಿ ಜಸ್ಪ್ರೀತ್ ಬುಮ್ರಾ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv