ಚೆನ್ನೈ: ನೆದರ್‌ಲ್ಯಾಂಡ್(Netherlands) ವಿರುದ್ಧ 93 ರನ್‌ಗಳ ಭರ್ಜರಿ ಜಯವನ್ನು ಸಾಧಿಸುವ ಮೂಲಕ ಅಮೆರಿಕ (USA) ಟಿ20 ವಿಶ್ವಕಪ್‌ನಲ್ಲಿ(ICC Men’s T20 World Cup) ಮೊದಲ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಅಮೆರಿಕ 6 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ನೆದರ್‌ಲ್ಯಾಂಡ್ 15.5 ಓವರ್‌ಗಳಲ್ಲಿ 103 ರನ್‌ಗಳಿಗೆ ಆಲೌಟ್ ಆಯ್ತು.
ನೆದರ್‌ಲ್ಯಾಂಡ್ ಪರ ಬಾಸ್ ಡಿ ಲೀಡೆ 23 ರನ್, ನಾಯಕ ಸ್ಕಾಟ್ ಎಡ್ವರ್ಡ್ಸ್ 20 ರನ್ ಉಳಿದ ಆಟಗಾರರಿಂದ ಉತ್ತಮ ಪ್ರದರ್ಶನ ಬರಲಿಲ್ಲ. ಅಮೆರಿಕ ಪರವಾಗಿ ಹರ್ಮಿತ್ ಸಿಂಗ್ 4 ವಿಕೆಟ್ ಕಿತ್ತರೆ ಶ್ಯಾಡ್ಲಿ ವ್ಯಾನ್ ಶಾಲ್ಕ್‌ವಿಕ್ 3 ವಿಕೆಟ್, ಮೊಹಮ್ಮದ್ ಮೊಹ್ಸಿನ್ 2 ವಿಕೆಟ್ ಪಡೆದರು.
USA register their first-ever win over the Netherlands in T20Is 👏
This is also the third-biggest win (by 93 runs) in the ICC Men’s T20 World Cup history! ✅
Up next ➡️ ICC Men’s #T20WorldCup | #IREvOMA 👉 SAT, FEB 14, 10:30 AM pic.twitter.com/3vIfiLTfhE
— Star Sports (@StarSportsIndia) February 13, 2026
ಮೊದಲ ಬ್ಯಾಟ್ ಬೀಸಿದ ಅಮೆರಿಕ ಪರವಾಗಿ ಸಾಯಿತೇಜ ಮುಕ್ಕಮಲ್ಲ 79 ರನ್(51 ಎಸೆತ, 5 ಬೌಂಡರಿ, 4 ಸಿಕ್ಸ್), ಶುಭಂ ರಂಜನೆ 48 ರನ್(24 ಎಸೆತ, 3 ಬೌಂಡರಿ, 2 ಸಿಕ್ಸ್) ಹೊಡೆದು ತಂಡದ ಮೊತ್ತವನ್ನು 190 ರನ್‌ಗಳ ಗಡಿಯನ್ನು ದಾಟಿಸಿದರು. ಇದನ್ನೂ ಓದಿ: T20 World Cup | ಆರ್‌ಸಿಬಿ ವೇಗಿಯ ಬೆಂಕಿ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾ ಛಿದ್ರ

