ನ್ಯೂಯಾರ್ಕ್: ಜಸ್‌ಪ್ರೀತ್ ಬುಮ್ರಾ (Jasprit Bumrah) ಅವರ ಮ್ಯಾಜಿಕ್ ಸ್ಪೆಲ್‌ನಿಂದಾಗಿ ಟಿ20 ವಿಶ್ವಕಪ್‌ನಲ್ಲಿ (T20 World Cup) ಭಾರತ ಪಾಕಿಸ್ತಾನದ ವಿರುದ್ಧ ಕೊನೆಯ ಓವರ್‌ನಲ್ಲಿ ರೋಚಕ 6 ರನ್‌ಗಳ ಜಯ ಸಾಧಿಸಿದೆ.
120 ರನ್‌ಗಳ ಸವಾಲನ್ನು ನೀಡಿದಾಗ ಪಾಕಿಸ್ತಾನ (Pakistan) ಸುಲಭವಾಗಿ ಜಯಗಳಿಸಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಬುಮ್ರಾ ಅವರ ಅತ್ಯುತ್ತಮ ಬೌಲಿಂಗ್‌ನಿಂದಾಗಿ ಭಾರತ (India) ರೋಚಕ ಜಯ ಸಾಧಿಸಿದೆ. ಪಾಕ್ ಸೇನೆಯಿಂದ ಅಭ್ಯಾಸ ಪಡೆದು ವಿಶ್ವಕಪ್‌ಗೆ ಆಗಮಿಸಿದ್ದ ಪಾಕಿಸ್ತಾನ ತಂಡ ಈಗ ಸತತ ಎರಡು ಸೋಲಿನಿಂದ ಗುಂಪು ಹಂತದಲ್ಲೇ ಹೊರಕ್ಕೆ ಹೋಗುವ ಸಾಧ್ಯತೆಯಿದೆ.
Advertisement
Advertisement
2 ವಿಕೆಟ್ ಕಳೆದುಕೊಂಡು 72 ರನ್‌ಗಳಿಸಿದ್ದಾಗ ಪಾಕ್ ಸುಭದ್ರ ಸ್ಥಿತಿಯಲ್ಲಿ ಇತ್ತು. ಆದರೆ ಯಾವಾಗ ಫಕರ್ ಜಮಾನ್ ಔಟ್ ಆದರೋ ಅಲ್ಲಿಂದ ಪತನ ಆರಂಭವಾಯಿತು. ಕೊನೆಯ 36 ಎಸೆತಗಳಲ್ಲಿ ಪಾಕ್ ಗೆಲುವಿಗೆ 7 ವಿಕೆಟ್‌ಗಳ ಸಹಾಯದಿಂದ 40 ರನ್ ಬೇಕಿತ್ತು. 15ನೇ ಓವರ್ ಎಸೆದ ಬುಮ್ರಾ 31 ರನ್ (44 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದಿದ್ದ ರಿಜ್ವಾನ್ ಅವರನ್ನು ಬೌಲ್ಡ್ ಮಾಡಿದರು. ಈ ಓವರ್‌ನಲ್ಲಿ ಕೇವಲ 3 ರನ್ ಮಾತ್ರ ಬಂತು.
Advertisement
ಅಕ್ಷರ್ ಪಟೇಲ್ ಎಸೆದ 16ನೇ ಓವರ್‌ನಲ್ಲಿ 2 ರನ್ ಬಂದರೆ, ಹಾರ್ದಿಕ್ (Hardik Pandya) ಎಸೆದ 17ನೇ ಓವರ್‌ನಲ್ಲಿ 5 ರನ್ ಪಾಕಿಗೆ ಬಂತು. ಸಿರಾಜ್ ಎಸೆದ 18ನೇ ಓವರ್‌ನಲ್ಲಿ 9 ರನ್ ಬಂದಾಗ ಕೊನೆಯ 12 ಎಸೆತದಲ್ಲಿ 21 ರನ್ ಬೇಕಿತ್ತು. ಇದನ್ನೂ ಓದಿ: IND vs PAK T20 World Cup: ಪಾಕಿಸ್ತಾನಕ್ಕೆ 120 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ
Advertisement
19ನೇ ಓವರ್ ಎಸೆದ ಬುಮ್ರಾ ಕೇವಲ 3 ರನ್ ನೀಡಿ 1 ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಭಾರತದತ್ತ ತಿರುಗಿಸಿದರು. ಕೊನೆಯ 20ನೇ ಓವರ್‌ನಲ್ಲಿ ಪಾಕಿಸ್ತಾನಕ್ಕೆ 18 ರನ್ ಬೇಕಿತ್ತು.
ಅರ್ಶ್‌ದೀಪ್ ಸಿಂಗ್ ಎಸೆದ ಮೊದಲ ಓವರ್‌ನಲ್ಲಿ ಇಮಾದ್ ವಸೀಂ ಕೀಪರ್‌ಗೆ ಕ್ಯಾಚ್ ನೀಡಿ ಹೊರನಡೆದರು. ನಂತರ ಎರಡು ಎಸೆತದಲ್ಲಿ 2ರನ್ ಬಂತು. 4ನೇ ಮತ್ತು 5ನೇ ಎಸೆತವನ್ನು ನಸೀಮ್ ಶಾ ಬೌಂಡರಿಗೆ ಅಟ್ಟಿ ಪಂದ್ಯಕ್ಕೆ ರೋಚಕ ತಿರುವು ನೀಡಿದರು. ಆದರೆ ಕೊನೆಯ ಎಸೆತದಲ್ಲಿ ಅರ್ಶ್‌ದೀಪ್ 1 ರನ್ ನೀಡಿದ ಪರಿಣಾಮ ಭಾರತ 6 ರನ್‌ಗಳ ರೋಚಕ ಜಯ ಸಾಧಿಸಿತು. ಪಾಕಿಸ್ತಾನ ಅಂತಿಮವಾಗಿ 7 ವಿಕೆಟ್ ನಷ್ಟಕ್ಕೆ 113 ರನ್ ಮಾತ್ರ ಗಳಿಸಿತು.
ಬುಮ್ರಾ 14 ರನ್ ನೀಡಿ 3 ವಿಕೆಟ್ ಪಡೆದರೆ ಪಾಂಡ್ಯ 24 ರನ್ ನೀಡಿ 2 ವಿಕೆಟ್ ಪಡೆದರು. ಅತ್ಯುತ್ತಮ ಪ್ರದರ್ಶನ ನೀಡಿದ ಬುಮ್ರಾ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ನಾಯಕ ಬಾಬರ್ ಅಜಂ, ಉಸ್ಮನ್ ಖಾನ್, ಫಖರ್ ಜಮಾನ್ ತಲಾ 13 ರನ್ ಹೊಡೆದರೆ ಇಮಾದ್ ವಾಸೀಂ 15 ರನ್ ಹೊಡೆದು ಔಟಾದರು.
Boom Boom Breakthrough! 🤩👏🏻#JaspritBumrah gets the first wicket as Pakistan skipper #BabarAzam is caught! 💪🏻#INDvPAK | LIVE NOW | #T20WorldCupOnStar pic.twitter.com/F69Lkfoofj
— Star Sports (@StarSportsIndia) June 9, 2024
ಎ ಗುಂಪಿನಲ್ಲಿ ಆಡಿದ 2 ಪಂದ್ಯಗಳಲ್ಲಿ ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ 4 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ. ಅಮೆರಿಕ 4 ಅಂಕ ಪಡೆದು ಎರಡನೇ ಸ್ಥಾನದಲ್ಲಿದ್ದರೆ ಕೆನಡಾ 2 ಅಂಕ ಪಡೆದು ಮೂರನೇ ಸ್ಥಾನಲ್ಲಿದೆ. ಎರಡು ಪಂದ್ಯ ಸೋತಿರುವ ಪಾಕಿಸ್ತಾನ ಮತ್ತು ಐರ್ಲೆಂಡ್ ಕ್ರಮವಾಗಿ 4 ಮತ್ತು 5ನೇ ಸ್ಥಾನಲ್ಲಿದೆ. ಎರಡು ಪಂದ್ಯಗಳನ್ನು ಸೋತಿರುವ ಮಾಜಿ ಚಾಂಪಿಯನ್ ಪಾಕಿಸ್ತಾನ ಗುಂಪು ಹಂತದಲ್ಲೇ ಹೊರಕ್ಕೆ ಹೋಗುವ ಸಾಧ್ಯತೆಯಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ 19 ಓವರ್‌ಗಳಿಗೆ 119 ರನ್‌ಗಳಿಸಿ ಆಲೌಟ್ ಆಗಿತ್ತು.