Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: T20 World Cup | 20 ತಂಡಗಳ ನಾಯಕರ ಬಲ ಹೇಗಿದೆ? ಆತಿಥ್ಯ ವಹಿಸಲಿರುವ ಕ್ರೀಡಾಂಗಣಗಳು ಯಾವುವು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | T20 World Cup | 20 ತಂಡಗಳ ನಾಯಕರ ಬಲ ಹೇಗಿದೆ? ಆತಿಥ್ಯ ವಹಿಸಲಿರುವ ಕ್ರೀಡಾಂಗಣಗಳು ಯಾವುವು?

Cricket

T20 World Cup | 20 ತಂಡಗಳ ನಾಯಕರ ಬಲ ಹೇಗಿದೆ? ಆತಿಥ್ಯ ವಹಿಸಲಿರುವ ಕ್ರೀಡಾಂಗಣಗಳು ಯಾವುವು?

Public TV
Last updated: February 7, 2026 8:09 am
Public TV
Share
4 Min Read
T20 World Cup 1
SHARE

– ವಿದೇಶಿ ತಂಡಗಳಲ್ಲೂ ಭಾರತೀಯರದ್ದೇ ಹವಾ

ಮುಂಬೈ/ಕೊಲಂಬೊ: ಕ್ರಿಕೆಟ್ ಪ್ರೇಮಿಗಳಿಗೆ ವರ್ಲ್ಡ್ ಕಪ್ (T20 World Cup 2026) ಹಬ್ಬ ಇಂದಿನಿಂದ ಶುರುವಾಗ್ತಿದೆ. ಇಂದು ಮೊದಲ ದಿನವೇ ಮೂರು ಪಂದ್ಯಗಳು ನಡೆಯಲಿದ್ದು, ಒಟ್ಟು 6 ತಂಡಗಳು ಕಾದಾಟ ನಡೆಸಲಿವೆ.

ಹೌದು. ಈ ಬಾರಿ ವಿಶ್ವ ಹಲವು ವಿಶೇಷತೆಗಳಿಂದ ಕೂಡಿದೆ. ಮೊದಲ ದಿನವೇ ಭಾರತ ಮತ್ತು ಶ್ರೀಲಂಕಾದಲ್ಲಿ ಒಟ್ಟು ಮೂರು ಪಂದ್ಯಗಳು ನಡೆಯಲಿದ್ದು, 6 ತಂಡಗಳು ಹಣಾಹಣಿ ನಡೆಸಲಿವೆ. ಬೆಳಗ್ಗೆ 11 ಗಂಟೆಗೆ ಪಾಕಿಸ್ತಾನ vs ನೆದರ್ಲೆಂಡ್‌, ಮಧ್ಯಾಹ್ನ 3 ಗಂಟೆಗೆ ವೆಸ್ಟ್‌ ಇಂಡೀಸ್‌ vs ಸ್ಕಾಟ್‌ಲೆಂಡ್‌ ಹಾಗೂ ರಾತ್ರಿ 7 ಗಂಟೆಗೆ ಭಾರತ vs ಯುಎಸ್‌ಎ ನಡುವೆ ಪಂದ್ಯ ನಡೆಯಲಿದೆ. ಆದ್ರೆ ಈ ಬಾರಿ ವಿಶ್ವಕಪ್ ಭಾರತೀಯ ಆಟಗಾರರಿಂದಲೇ ತುಂಬಿರಲಿದೆ. ಟೀಂ ಇಂಡಿಯಾ ಮಾತ್ರವಲ್ಲದೇ ಬಿಟ್ಟು ಸುಮಾರು 40 ಭಾರತೀಯ ಆಟಗಾರರು ವಿವಿಧ ವಿದೇಶಿ ತಂಡಗಳಲ್ಲಿ ಆಡುತ್ತಿದ್ದಾರೆ ಅನ್ನೋದೇ ವಿಶೇಷ.

usa cricket 3

20 ತಂಡಗಳಲ್ಲಿ 40 ಭಾರತೀಯ ಆಟಗಾರರ ಹವಾ
ಭಾರತದಲ್ಲಿ ಕ್ರಿಕೆಟ್ ಪ್ರೇಮಿಗಳು (Cricket Lovers) ಮಾತ್ರವಲ್ಲ ಕ್ರಿಕೆಟ್ ಆಟಗಾರರ ಸಂಖ್ಯೆ ಕೂಡ ಹೆಚ್ಚಿದೆ. ಬರೀ ಭಾರತದಲ್ಲಿ ಮಾತ್ರವಲ್ಲ ಭಾರತದಿಂದ ಬೇರೆ ದೇಶಕ್ಕೆ ವಲಸೆ ಹೋಗಿರುವ ಭಾರತೀಯರು ಕೂಡ ಕ್ರಿಕೆಟ್ ನಲ್ಲಿ ಆಸಕ್ತಿ ಹೊಂದಿದ್ದು, ವಿದೇಶಿ ಟೀಂನಲ್ಲಿ ಸ್ಥಾನ ಪಡೆದು ಸಕ್ಸಸ್ ಆಗಿದ್ದಾರೆ. ಯುಎಸ್ಎ (USA Cricket Team), ಕೆನಡಾ ಮತ್ತು ಯುಎಇ ತಂಡಗಳಿಂದ 23 ಭಾರತೀಯ ಆಟಗಾರರು ಮೈದಾನಕ್ಕಿಳಿಯಲಿದ್ದಾರೆ. ಮುಂಬೈ ಮೂಲದ ಅಮೆರಿಕನ್ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ವಿರುದ್ಧ ಸೆಣೆಸಲಿದ್ದಾರೆ. ಐಸಿಸಿ ಟಿ20 ವಿಶ್ವಕಪ್ 2026 ಗಾಗಿ ಕೆನಡಾದ ತಂಡವು ಒಟ್ಟು 11 ಭಾರತೀಯ ಆಟಗಾರರನ್ನ ಆಯ್ಕೆ ಮಾಡಿಕೊಂಡಿದೆ. ಯುಎಸ್ಎ ತಂಡದಲ್ಲಿ 9 ಭಾರತೀಯರಿದ್ದಾರೆ. ಓಮನ್ ತಂಡದಲ್ಲಿ 7 ಭಾರತೀಯರಿದ್ದಾರೆ. ಯುಎಇ ತಂಡದಲ್ಲಿ ಭಾರತೀಯ ಮೂಲದ 7 ಆಟಗಾರರಿದ್ದಾರೆ. ಎಲ್ಲಾ ವಿದೇಶಿ ತಂಡಗಳು ಸೇರಿದಂತೆ, ಸುಮಾರು 40 ಭಾರತೀಯ ಕ್ರಿಕೆಟಿಗರು ಈ ವಿಶ್ವಕಪ್ನಲ್ಲಿ ವಿವಿಧ ತಂಡಗಳಿಗಾಗಿ ಆಡಲಿದ್ದಾರೆ.

Narendra Modi Stadium

ನಾಯಕರ ಬಲಾಬಲಗಳು ಹೇಗಿವೆ?
2026 ರ ಟಿ20 ವಿಶ್ವಕಪ್: ಸೂರ್ಯಕುಮಾರ್ ಯಾದವ್ ರಿಂದ ಹ್ಯಾರಿ ಬ್ರೂಕ್ ಗೆ, ಪಂದ್ಯಾವಳಿಯಲ್ಲಿ ಭಾಗವಹಿಸುವ 20 ತಂಡಗಳ ನಾಯಕರು ಫೆಬ್ರವರಿ 7 ರಂದು ಭಾರತ ಮತ್ತು ಶ್ರೀಲಂಕಾದಲ್ಲಿ 10 ನೇ ಆವೃತ್ತಿಯ ಟಿ20 ವಿಶ್ವಕಪ್ ಆರಂಭವಾಗಲಿದೆ. ಪಾಕಿಸ್ತಾನವು ಭಾರತೀಯ ಕಾಲಮಾನ ಬೆಳಿಗ್ಗೆ 11 ಗಂಟೆಗೆ ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ಸೆಣಸಲಿದೆ. ವೆಸ್ಟ್ ಇಂಡೀಸ್ ಸ್ಕಾಟ್ಲೆಂಡ್ ಅನ್ನು ಎದುರಿಸಲಿದೆ ಮತ್ತು ಆತಿಥೇಯ ಭಾರತವು ಕ್ರಮವಾಗಿ ಮಧ್ಯಾಹ್ನ 3 ಗಂಟೆಗೆ ಮತ್ತು ಸಂಜೆ 7 ಗಂಟೆಗೆ ನಡೆಯುವ ಇತರ ಎರಡು ಪಂದ್ಯಗಳಲ್ಲಿ ಯುಎಸ್ಎ ವಿರುದ್ಧ ಸೆಣಸಲಿದೆ.

ಪಂದ್ಯಾವಳಿಯಲ್ಲಿ 20 ತಂಡಗಳು ಭಾಗವಹಿಸುತ್ತಿದ್ದು, ಅವುಗಳನ್ನು ತಲಾ ಐದು ತಂಡಗಳ ನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ 8 ಗೆ ಪ್ರವೇಶಿಸುತ್ತವೆ, ಅಲ್ಲಿ ತಂಡಗಳನ್ನು ಮತ್ತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ 2024 ರ ಆವೃತ್ತಿಯನ್ನು ಗೆದ್ದಿರುವ ಭಾರತ ಹಾಲಿ ಚಾಂಪಿಯನ್ ಆಗಿದ್ದು, ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಮೊದಲ ತಂಡವಾಗಲು ಎದುರು ನೋಡುತ್ತಿದೆ.

ICC T20 World Cup

ಇಟಲಿ ಇತಿಹಾಸದಲ್ಲಿ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಆಡುತ್ತಿದ್ದರೆ, ಉಗಾಂಡಾ, ಪಪುವಾ ನ್ಯೂಗಿನಿಯಾ ಮತ್ತು ಬಾಂಗ್ಲಾದೇಶ ಹಿಂದಿನ ಆವೃತ್ತಿಯಿಂದ ಹೊರಗುಳಿದ 3 ತಂಡಗಳಾಗಿವೆ. ಇಟಲಿಯನ್ನು ಹೊರತುಪಡಿಸಿ, ಜಿಂಬಾಬ್ವೆ ಮತ್ತು ಯುಎಇ ಹಿಂದಿನ ಆವೃತ್ತಿಯಲ್ಲಿ ಆಡದ ಆದರೆ ಮುಂಬರುವ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ಇತರ ಎರಡು ತಂಡಗಳಾಗಿವೆ.

ಅತ್ಯಂತ ಹಿರಿಯ ಮತ್ತು ಕಿರಿಯ ನಾಯಕ ಯಾರು?
ಇಟಲಿಯ ವೇಯ್ನ್ ಮ್ಯಾಡ್ಸೆನ್ ಟಿ20 ವಿಶ್ವಕಪ್ 2026 ರಲ್ಲಿ ಅತ್ಯಂತ ಹಿರಿಯ ನಾಯಕ ಎನಿಸಿಕೊಂಡಿದ್ದಾರೆ. 42ನೇ ವಯಸ್ಸಿನಲ್ಲಿ ವಿಶ್ವಕಪ್‌ ತಂಡವನ್ನ ಮುನ್ನಡೆಸಲಿದ್ದಾರೆ. ಕೆನಡಾದ ದಿಲ್‌ಪ್ರೀತ್ ಬಜ್ವಾ ಈ ಗುಂಪಿನಲ್ಲಿ ಅತ್ಯಂತ ಕಿರಿಯ ಆಟಗಾರ ಆಗಿದ್ದಾರೆ. ಅವರು ಕೇವಲ 22 ವರ್ಷ ವಯಸ್ಸಿನವರಾಗಿದ್ದು, ಗುಂಪು ಹಂತದಲ್ಲಿ ದಕ್ಷಿಣ ಆಫ್ರಿಕಾ, ಯುಎಇ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಕೆನಡಾವನ್ನ ಮುನ್ನಡೆಸಲಿದ್ದಾರೆ.

Suryakumar Yadav 1

ಎಲ್ಲಾ 20 ತಂಡಗಳ ನಾಯಕರ ಪಟ್ಟಿ ಹೇಗಿದೆ?

ಗುಂಪು ಎ
ಭಾರತ – ಸೂರ್ಯಕುಮಾರ್ ಯಾದವ್
ಯುಎಸ್ಎ – ಮೊನಾಂಕ್ ಪಟೇಲ್
ನಮೀಬಿಯಾ – ಗೆರ್ಹಾರ್ಡ್ ಎರಾಸ್ಮಸ್
ನೆದರ್ಲ್ಯಾಂಡ್ಸ್ – ಸ್ಕಾಟ್ ಎಡ್ವರ್ಡ್ಸ್
ಪಾಕಿಸ್ತಾನ – ಸಲ್ಮಾನ್ ಅಲಿ ಅಘಾ

ಗುಂಪು ಬಿ
ಆಸ್ಟ್ರೇಲಿಯಾ – ಮಿಚೆಲ್ ಮಾರ್ಷ್
ಶ್ರೀಲಂಕಾ – ದಸೂನ್ ಶನಕ
ಜಿಂಬಾಬ್ವೆ – ಸಿಕಂದರ್ ರಜಾ
ಐರ್ಲೆಂಡ್ – ಪಾಲ್ ಸ್ಟಿರ್ಲಿಂಗ್
ಓಮನ್ – ಜತಿಂದರ್ ಸಿಂಗ್

ಗುಂಪು ಸಿ
ಇಂಗ್ಲೆಂಡ್ – ಹ್ಯಾರಿ ಬ್ರೂಕ್
ವೆಸ್ಟ್ ಇಂಡೀಸ್ – ಶೈ ಹೋಪ್
ಇಟಲಿ – ವೇಯ್ನ್ ಮ್ಯಾಡ್ಸೆನ್
ನೇಪಾಳ – ರೋಹಿತ್ ಪೌಡೆಲ್
ಸ್ಕಾಟ್ಲೆಂಡ್ – ರಿಚಿ ಬೆರಿಂಗ್ಟನ್

ಗುಂಪು ಡಿ
ದಕ್ಷಿಣ ಆಫ್ರಿಕಾ – ಐಡೆನ್ ಮಾರ್ಕ್ರಮ್
ನ್ಯೂಜಿಲೆಂಡ್ – ಮಿಚೆಲ್ ಸ್ಯಾಂಟ್ನರ್
ಅಫ್ಘಾನಿಸ್ತಾನ – ರಶೀದ್ ಖಾನ್
ಕೆನಡಾ – ದಿಲ್ಪ್ರೀತ್ ಬಜ್ವಾ
ಯುಎಇ – ಮೊಹಮ್ಮದ್ ವಸೀಮ್

ಈವರೆಗಿನ ಟಿ20 ವಿಶ್ವಕಪ್‌ ವಿಜೇತರು ಯಾರು:
2007:
ಚಾಂಪಿಯನ್‌: ಭಾರತ
ರನ್ನರ್‌-ಅಪ್‌: ಪಾಕಿಸ್ತಾನ

2009:
ಚಾಂಪಿಯನ್‌: ಪಾಕಿಸ್ತಾನ
ರನ್ನರ್‌-ಅಪ್‌: ಶ್ರೀಲಂಕಾ

2010:
ಚಾಂಪಿಯನ್‌: ಇಂಗ್ಲೆಂಡ್‌
ರನ್ನರ್‌-ಅಪ್‌: ಆಸ್ಟ್ರೇಲಿಯಾ

2012:
ಚಾಂಪಿಯನ್‌: ವೆಸ್ಟ್‌ಇಂಡೀಸ್
ರನ್ನರ್‌-ಅಪ್‌: ಶ್ರೀಲಂಕಾ

2014:
ಚಾಂಪಿಯನ್‌: ಶ್ರೀಲಂಕಾ
ರನ್ನರ್‌-ಅಪ್‌: ಭಾರತ

2016:
ಚಾಂಪಿಯನ್‌: ವೆಸ್ಟ್‌ಇಂಡೀಸ್‌
ರನ್ನರ್‌-ಅಪ್‌: ಇಂಗ್ಲೆಂಡ್‌

2021:
ಚಾಂಪಿಯನ್‌: ಆಸ್ಟ್ರೇಲಿಯಾ
ರನ್ನರ್‌-ಅಪ್‌: ನ್ಯೂಜಿಲೆಂಡ್‌

2022:
ಚಾಂಪಿಯನ್‌: ಇಂಗ್ಲೆಂಡ್‌
ರನ್ನರ್‌-ಅಪ್‌: ಪಾಕಿಸ್ತಾನ

2024:
ಚಾಂಪಿಯನ್‌: ಭಾರತ
ರನ್ನರ್‌-ಅಪ್‌: ದಕ್ಷಿಣ ಆಫ್ರಿಕಾ

India Srilanka

ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಕ್ರೀಡಾಂಗಣಗಳು
* ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್‌
* ಚೆಪಾಕ್ ಕ್ರೀಡಾಂಗಣ, ಚೆನ್ನೈ
* ಅರುಣ್ ಜೇಟ್ಲಿ ಕ್ರೀಡಾಂಗಣ, ನವದೆಹಲಿ
* ಈಡನ್‌ ಗಾರ್ಡನ್ಸ್‌, ಕೋಲ್ಕತಾ
* ಆಸನ ಸಾಮರ್ಥ್ಯ: 68000
* ವಾಂಖೇಡೆ ಕ್ರೀಡಾಂಗಣ, ಮುಂಬೈ

ಶ್ರೀಲಂಕಾದ ಕ್ರೀಡಾಂಗಣಗಳು
* ಆರ್‌.ಪ್ರೇಮದಾಸ ಕ್ರೀಡಾಂಗಣ(ಆರ್‌ಪಿಎಸ್‌), ಕೊಲಂಬೊ
* ಸಿಂಹಳೀಸ್‌ ಸ್ಪೋರ್ಟ್ಸ್‌ ಕ್ಲಬ್‌(ಎಸ್‌ಎಸ್‌ಸಿ), ಕೊಲಂಬೊ
* ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರೀಡಾಂಗಣ, ಕ್ಯಾಂಡಿ

TAGGED:IndiansSuryakumar YadavT20 CaptainsT20 World Cup 2026Team indiaಟಿ20 ವಿಶ್ವಕಪ್ಟೀಂ ಇಂಡಿಯಾಪಾಕಿಸ್ತಾನಸೂರ್ಯಕುಮಾರ್ ಯಾದವ್
Share This Article
Facebook Whatsapp Whatsapp Telegram

Cinema news

rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories
trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema

You Might Also Like

Nikhil Kumaraswamy
Bengaluru City

ನಾಳೆ ʻಜೆಡಿಎಸ್ ಬೆಳ್ಳಿ ಹಬ್ಬʼ ಸಮಾವೇಶ – 1 ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ

Public TV
By Public TV
7 minutes ago
West Bengala Election bjp manifesto Rs 3000 aid for women unemployed youth Uniform Civil Code in 6 months crackdown on infiltration Amit Shah Sankalp Patra 7th Pay Commission
Latest

ಮಹಿಳೆಯರಿಗೆ, ನಿರೋದ್ಯೋಗಿ ಯುವಕರಿಗೆ ತಿಂಗಳಿಗೆ 3 ಸಾವಿರ – ಬಂಗಾಳ ಗೆಲ್ಲಲು ಬಿಜೆಪಿಯಿಂದ 15 ಭರವಸೆ

Public TV
By Public TV
52 minutes ago
Srinanda
Chikkamagaluru

ದತ್ತಪೀಠದ ತಪ್ಪಲಿನಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶವವಾಗಿ ಪತ್ತೆ

Public TV
By Public TV
1 hour ago
Red Corner Notice Mangaluru
Crime

ವಿದೇಶದಲ್ಲಿ ತಲೆಮರೆಸಿಕೊಂಡ ಇಬ್ಬರು ಆರೋಪಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ

Public TV
By Public TV
1 hour ago
Siddaramaiah HD Kumaraswamy
Latest

ಹಣ ವಸೂಲಿಗಾಗಿ ಸಿದ್ದರಾಮಯ್ಯ ತಮ್ಮ ಮಗನನ್ನು ನೇಮಕ ಮಾಡಿಕೊಂಡಿದ್ದಾರೆ: ಹೆಚ್‌ಡಿಕೆ ವಾಗ್ದಾಳಿ

Public TV
By Public TV
2 hours ago
seemanth kumar singh 2
Bengaluru City

ಯುವಕ ಝಾಂಬಿ ಡ್ರಗ್‌ ಸೇವನೆ ಮಾಡಿಲ್ಲ – ದುನಿಯಾ ವಿಜಯ್‌ ಸೇರಿದಂತೆ 25 ಮಂದಿಗೆ ಪೊಲೀಸರ ನೋಟಿಸ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?