ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಐಸಿಸಿ 2021ರ ವರ್ಷದ ತಂಡವನ್ನು ಪ್ರಕಟಿಸಿದೆ. ಆದರೆ ಟಿ20 ಮತ್ತು ಏಕದಿನ ತಂಡದಲ್ಲಿ ಟೀಂ ಇಂಡಿಯಾದ ಒಬ್ಬನೇ ಒಬ್ಬ ಆಟಗಾರ ಸ್ಥಾನ ಪಡೆದಿಲ್ಲ. ಈ ಎರಡೂ ತಂಡಕ್ಕೂ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ನಾಯಕನಾಗಿ ಆಯ್ಕೆಗೊಂಡಿದ್ದಾರೆ.
Advertisement
ಐಸಿಸಿ ವರ್ಷದಲ್ಲಿ ಆಟಗಾರರ ಪ್ರದರ್ಶನವನ್ನು ಗಮನಿಸಿ ಆ ವರ್ಷದ ಶ್ರೇಷ್ಠ ಪ್ಲೇಯಿಂಗ್ 11 ಆಯ್ಕೆ ಮಾಡುತ್ತದೆ. ಕಳೆದ ವರ್ಷ 2021 ರಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರನ್ನೊಳಗೊಂಡ ತಂಡವನ್ನು ಇದೀಗ ಐಸಿಸಿ ಪ್ರಕಟಿಸಿದೆ. ನಿನ್ನೆ ಟಿ20 ತಂಡವನ್ನು ಬಿಡುಗಡೆ ಮಾಡಿದರೆ, ಇಂದು ಏಕದಿನ ತಂಡವನ್ನು ಬಿಡುಗಡೆ ಮಾಡಿದೆ. ಈ ಎರಡು ತಂಡಕ್ಕೂ ಪಾಕಿಸ್ತಾನ ತಂಡದ ಪ್ರಸ್ತುತ ನಾಯಕ ಬಾಬರ್ ಅಜಂ ಅವರನ್ನು ನಾಯಕನ್ನಾಗಿ ಆಯ್ಕೆ ಮಾಡಿದೆ. ಆದರೆ ಟೀಂ ಇಂಡಿಯಾದ ಯಾವೊಬ್ಬ ಆಟಗಾರ ಕೂಡ ಸ್ಥಾನ ಪಡೆಯಲು ಯಶಸ್ಸಿಯಾಗಿಲ್ಲ. ಇದನ್ನೂ ಓದಿ: ಟೀಂ ಇಂಡಿಯಾದ ಬ್ಯಾಟಿಂಗ್ ವೈಫಲ್ಯ – ಆಫ್ರಿಕಾಗೆ ಜಯ
Advertisement
The ICC Men's T20I Team of the Year certainly packs a punch ????
More ???? https://t.co/TtQKyBL3rw pic.twitter.com/mhfNsE2mU3
— ICC (@ICC) January 19, 2022
Advertisement
2021ರ ವರ್ಷದ ಟಿ20 ತಂಡವನ್ನು ಬಾಬರ್ ಅಜಂ ಮುನ್ನಡೆಸಿದರೆ, ತನ್ನದೇ ದೇಶದ ಇನ್ನಿಬ್ಬರು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮೊಹಮ್ಮದ್ ರಿಜ್ವಾನ್ ಮತ್ತು ಶಾಹಿನ್ ಅಫ್ರಿದಿ ತಂಡದಲ್ಲಿದ್ದು, ಉಳಿದಂತೆ ಜೋಸ್ ಬಟ್ಲರ್, ಮಕ್ರಾರ್ಮ್, ಮಿಚೆಲ್ ಮಾರ್ಷ್, ಡೇವಿಡ್ ಮಿಲ್ಲರ್, ಶಮ್ಸಿ, ಜೋಶ್ ಹ್ಯಾಝೆಲ್‌ವುಡ್ , ವನಿಂದು ಹಸರಂಗ, ಮುಸ್ತಿಫಿಜುರ್ ರಹಮಾನ್ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಕುಟುಂಬದ ಜೊತೆ ಸಮಯ ಕಳೆಯಲು ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ: ಸ್ಟೇನ್
Advertisement
Power-hitters, terrific all-rounders, fiery pacers ????
The 2021 ICC Men's ODI Team of the Year has all the bases covered ???? pic.twitter.com/R2SCJl04kQ
— ICC (@ICC) January 20, 2022
ಏಕದಿನ ತಂಡದಲ್ಲಿ ಬಾಬರ್ ಅಜಂ ನಾಯಕನಾದರೆ, ಪೌಲ್ ಸ್ಟಿರ್ಲಿಂಗ್, ಜನೆಮನ್ ಮಲನ್, ಫಖರ್ ಜಮಾನ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಶಕಿಬ್ ಅಲ್ ಹಸನ್, ಮುಸ್ತಿಫಿಜರ್ ರಹೀಂ, ವನಿಂದು ಹಸರಂಗ, ಮುಸ್ತಿಫಿಜುರ್ ರಹಮಾನ್, ಸಿಮಿ ಸಿಂಗ್, ದುಷ್ಮಂತ ಚಮೀರ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಟೆಸ್ಟ್ ನಾಯಕತ್ವಕ್ಕೆ ಗುಡ್‌ಬೈ – ಕೊಹ್ಲಿ ಬ್ರ್ಯಾಂಡ್ ಮೌಲ್ಯ ಇಳಿಕೆ?
Here's your 2021 ICC Men's Test Team of the Year ????
Are your favourite players a part of the XI? ???? pic.twitter.com/GrfiaNDkpx
— ICC (@ICC) January 20, 2022
ಟೆಸ್ಟ್ ತಂಡದಲ್ಲಿ ರೋಹಿತ್ ಶರ್ಮಾ, ರಿಷಭ್ ಪಂತ್ ಮತ್ತು ಆರ್ ಅಶ್ವಿನ್ ಸ್ಥಾನ ಪಡೆದಿದ್ದು, ಟೆಸ್ಟ್ ತಂಡದ ನಾಯಕನಾಗಿ ಕೇನ್ ವಿಲಿಯಮ್‍ಸನ್ ಆಯ್ಕೆಯಾಗಿದ್ದಾರೆ.