ನವದೆಹಲಿ: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ (World Cup 2023) ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗಾಗಿ ಆನ್ಲೈನ್ನಲ್ಲಿ ಟಿಕೆಟ್ಗಳ ಮಾರಾಟ ಇಂದಿನಿಂದ (ಶುಕ್ರವಾರ) ಆರಂಭವಾಗಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದೆ.
ಶುಕ್ರವಾರ, ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಅಧಿಕೃತ ಟಿಕೆಟಿಂಗ್ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅಭಿಮಾನಿಗಳು ವಿಶ್ವಕಪ್ 2023 ರ ಸೆಮಿ-ಫೈನಲ್ ಮತ್ತು ಫೈನಲ್ ಪಂದ್ಯಗಳ ವೀಕ್ಷಣೆಗೆ ಟಿಕೆಟ್ ಬುಕ್ ಮಾಡಬಹುದು. ಐಸಿಸಿ ವಿಶ್ವಕಪ್ ಅಧಿಕೃತ ವೆಬ್ಸೈಟ್ https://tickets.cricketworldcup.com ನಲ್ಲಿ ಟಿಕೆಟ್ ಮಾರಾಟ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಇದನ್ನೂ ಓದಿ: ಕೊಹ್ಲಿಯ ಪೇಂಟಿಂಗ್ ಚಿತ್ರಿಸಿ ಉಡುಗೊರೆ ನೀಡಿದ ಕಲಾವಿದೆ
Advertisement
Advertisement
ಪಂದ್ಯಗಳು ಯಾವಾಗ, ಎಲ್ಲಿ ನಡೆಯುತ್ತೆ?
ನವೆಂಬರ್ 15 (ಬುಧವಾರ) – ಸೆಮಿಫೈನಲ್ 1, ಮುಂಬೈನ ವಾಂಖೆಡೆ ಕ್ರೀಡಾಂಗಣ.
Advertisement
ನವೆಂಬರ್ 16 (ಗುರುವಾರ) – ಸೆಮಿಫೈನಲ್ 2, ಕೋಲ್ಕತ್ತಾದ ಈಡನ್ ಗಾರ್ಡನ್ಸ್.
Advertisement
ನವೆಂಬರ್ 19 (ಭಾನುವಾರ) – ಫೈನಲ್, ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ.
ಬುಕ್ ಮಾಡೋದು ಹೇಗೆ?
ಹಂತ-1: https://tickets.cricketworldcup.com ಗೆ ಲಾಗಿನ್ ಮಾಡಿ
ಹಂತ-2: ನೀವು ಟಿಕೆಟ್ ಖರೀದಿಸಲು ಬಯಸುವ ಪಂದ್ಯದ ಹೆಸರನ್ನು ಆಯ್ಕೆ ಮಾಡಿ. ಸೆಮಿಫೈನಲ್ 1, ಸೆಮಿಫೈನಲ್ 2 ಮತ್ತು ಫೈನಲ್. ಮತ್ತಷ್ಟು ಬುಕಿಂಗ್ಗಾಗಿ ಬುಕ್ ಮೈ ಶೋ ವೆಬ್ಸೈಟ್ಗೆ ನಿಮ್ಮನ್ನು ನಿರ್ದೇಶಿಸಲಾಗುತ್ತದೆ. ಇದನ್ನೂ ಓದಿ: ಶಾದಾಬ್ ವಿರುದ್ಧ ಅಂಗಳದಲ್ಲೇ ಸಿಟ್ಟು ಹೊರ ಹಾಕಿದ ಬಾಬರ್ ಅಜಂ, ಅಫ್ರಿದಿ
ಸೆಮಿಫೈನಲ್ 1 – https://in.bookmyshow.com/sports/mumbai-icc-mens-cwc-2023/ET00367212
ಸೆಮಿಫೈನಲ್ 2 – https://in.bookmyshow.com/sports/kolkata-icc-mens-cwc-2023/ET00367510
ಫೈನಲ್ – https://in.bookmyshow.com/sports/ahmedabad-icc-mens-cwc-2023/ET00367204
ಹಂತ-4: ಬುಕ್ಕಿಂಗ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ-5: ವಿವಿಧ ಬೆಲೆ ವರ್ಗಗಳ ಆಧಾರದ ಮೇಲೆ ನೀವು ಖರೀದಿಸಲು ಬಯಸುವ ಟಿಕೆಟ್ಗಳ ಅಗತ್ಯವಿರುವ ಸಂಖ್ಯೆಯನ್ನು ಆಯ್ಕೆ ಮಾಡಿ.
ಹಂತ-6: ‘Book’ ಮೇಲೆ ಕ್ಲಿಕ್ ಮಾಡಿ ಮತ್ತು ವಿತರಣಾ ವಿಳಾಸವನ್ನು ಸೇರಿಸಿ.
ಹಂತ-7: Proceed to Pay ಮೇಲೆ ಕ್ಲಿಕ್ ಮಾಡಿ ಮತ್ತು ಹಣ ಪಾವತಿ ಮಾಡಿ. ಆ ಮೂಲಕ ನಿಮ್ಮ ಟಿಕೆಟ್ ಅನ್ನು ಬುಕ್ ಮಾಡಿ.
Web Stories