ಲಂಡನ್: 2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮುನ್ನವೇ ಐಸಿಸಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರಾಜನಂತೆ ಕುಳಿತಿರುವ ಚಿತ್ರವನ್ನು ಟ್ವೀಟ್ ಮಾಡಿತ್ತು. ಈ ಟ್ವೀಟ್‍ಗೆ ಐಸಿಸಿ ಕಾಲೆಳೆದಿದ್ದ ಇಂಗ್ಲೆಂಡಿನ ಮಾಜಿ ಕ್ರಿಕೆಟ್ ಆಟಗಾರ ಮೈಕಲ್ ವಾನ್‍ಗೆ ಐಸಿಸಿ ಖಡಕ್ ಉತ್ತರ ನೀಡಿದೆ.
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಐಸಿಸಿ ಕೆಲ ವಿಶೇಷ ಟ್ವೀಟ್ ಗಳನ್ನು ಮಾಡುವ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತದೆ. ಕೊಹ್ಲಿ ಅವರ ಪೈಂಟಿಂಗ್ ಟ್ವೀಟ್‍ಗೆ ಹಲವರು ತಮ್ಮದೇ ಪ್ರತಿಕ್ರಿಯೆ ನೀಡದ್ದು, ಕೆಲವರು ಐಸಿಸಿ ವಿರುದ್ಧ ಟೀಕೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಸಂತಸ ವ್ಯಕ್ತಪಡಿಸಿದ್ದಾರೆ. ಮತ್ತು ಕೆಲವರು ಪೈಂಟಿಂಗ್ ನಲ್ಲಿ ಇರುವುದು ಕೊಹ್ಲಿನ ಅಥವಾ ಕೆಎಲ್ ರಾಹುಲ್ ಅವರ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
Nothing like impartiality!!! https://t.co/Ok0y95MI0z
— Michael Vaughan (@MichaelVaughan) June 5, 2019
Advertisement
ಇತ್ತ ಮೈಕಲ್ ವಾನ್ ಅವರು ಕೂಡ ಐಸಿಸಿ ಟ್ವೀಟ್‍ಗೆ ಪರೋಕ್ಷವಾಗಿ ಕಿಡಿಕಾರಿದ್ದು, ಟ್ವೀಟ್ ನಿಷ್ಪಕ್ಷಪಾತ ಮಾಡಿದಂತೆ ಕಾಣುತ್ತದೆ ಎಂದು ಬರೆದುಕೊಂಡಿದ್ದರು. ಮೈಕಲ್ ವಾನ್ ರ ಈ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಐಸಿಸಿ ಮೂರು ಸ್ಕ್ರೀನ್ ಶಾಟ್ ಫೋಟೋಗಳನ್ನು ಟ್ವೀಟ್ ಮಾಡಿದೆ. ಮೊದಲ ಫೋಟೋದಲ್ಲಿ ಐಸಿಸಿ ಏಕದಿನ ಮಾದರಿಯ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನ, 2ನೇ ಫೋಟೋದಲ್ಲಿ ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಹಾಗೂ ಐಸಿಸಿ ವಾರ್ಷಿಕ ಕ್ರಿಕೆಟಿಗ ಪ್ರಶಸ್ತಿಯ ಹ್ಯಾಟ್ರಿಕ್ ಸಾಧನೆ ಮಾಡಿರುವ ಕೊಹ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿದೆ.
Advertisement
ಐಸಿಸಿ ಪ್ರತಿಕ್ರಿಯೆಗೆ ಅಭಿಮಾನಿಗಳು ಫಿದಾ ಆಗಿದ್ದು, ಮೈಕಲ್ ವಾನ್ ಅವರಿಗೆ ತಕ್ಕ ಉತ್ತರ ಎಂದು ಪ್ರತಿಕ್ರಿಯೆ ನೀಡಿದ್ದರೆ. ಉಳಿದಂತೆ ಫೋಟೋದಲ್ಲಿ ಕೊಹ್ಲಿ ಕೈಯಲ್ಲಿ ಬ್ಯಾಟ್ ಹಾಗೂ ಬಾಲ್ ಹಿಡಿದು ತಾನೇ ನಂ.1 ಎಂಬಂತೆ ಇರುವ ಪೈಂಟಿಂಗ್ ಇದಾಗಿದೆ.
Advertisement
¯_(ツ)_/¯ pic.twitter.com/WxtoWaz3Qa
— ICC (@ICC) June 5, 2019
????#TeamIndia#CWC19 pic.twitter.com/cGY12LaV3H
— ICC (@ICC) June 5, 2019