ಸೌತಾಂಪ್ಟನ್: ವಿಶ್ವಕಪ್ ಕ್ರಿಕೆಟಿನ ಮೊದಲ ಪಂದ್ಯದಲ್ಲಿ ಭಾರತಕ್ಕೆ ದಕ್ಷಿಣ ಆಫ್ರಿಕಾ 228 ರನ್‍ಗಳ ಗುರಿಯನ್ನು ನೀಡಿದೆ.
ಆರಂಭ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್ ಮನ್‍ಗಳು ಬೇಗನೇ ಔಟಾದರೂ ಕೊನೆಯಲ್ಲಿ ಬೌಲರ್ ಗಳು ಆಡಿದ ಪರಿಣಾಮ ದಕ್ಷಿಣ ಆಫ್ರಿಕಾ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 227 ರನ್ ಗಳಿಸಿತು.
Advertisement
WHAT A START FROM JASPRIT BUMRAH! ????
Here is the first wicket of the day when he dismissed Hashim Amla.https://t.co/RDlXGEFzro
— ICC Cricket World Cup (@cricketworldcup) June 5, 2019
Advertisement
ಆಫ್ರಿಕಾಗೆ ಮೊದಲ ಆಘಾತ ನೀಡಿದ ಟೀಂ ಇಂಡಿಯಾ ಬೌಲರ್ ಜಸ್ಪ್ರೀತ್ ಬುಮ್ರಾ ತಮ್ಮ 2ನೇ ಮತ್ತು 3ನೇ ಓವರಿನಲ್ಲಿ ಕ್ರಮವಾಗಿ 6 ರನ್ ಗಳಿಸಿದ್ದ ಹಶಿಮ್ ಆಮ್ಲಾ, 10 ರನ್ ಗಳಿಸಿದ್ದ ಡಿ ಕಾಕ್ ವಿಕೆಟ್ ಪಡೆದರು. ದಕ್ಷಿಣ ಆಫ್ರಿಕಾ ತಂಡದ ನಾಯಕ ಫಾಫ್ ಡುಪ್ಲೆಸಿಸ್, ರಸಿ ವ್ಯಾನ್ ಡರ್ ಡಸೆನ್ ಜೊತೆಯಾಗಿ ತಂಡಕ್ಕೆ ಚೇತರಿಕೆ ನೀಡುವ ಪ್ರಯತ್ನ ನಡೆಸಿದರು. ಈ ಜೋಡಿ 3ನೇ ವಿಕೆಟ್‍ಗೆ 54 ರನ್ ಗಳ ಜೊತೆಯಾಟ ನೀಡಿತು.
Advertisement
ರೋಹಿತ್ ಕ್ಯಾಚ್ ಡ್ರಾಪ್: ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಠಿಣ ಕ್ಯಾಚ್ ಡ್ರಾಪ್ ಮಾಡಿದರು. ಇದಕ್ಕೂ ಮುನ್ನ ಆಮ್ಲಾ ಕ್ಯಾಚ್ ಪಡೆದಿದ್ದ ರೋಹಿತ್, ಬುಮ್ರಾ ಬೌಲಿಂಗ್ ನಲ್ಲಿ ಫಾಫ್ ಡುಪ್ಲೆಸಿಸ್ ಗೆ ಜೀವದಾನ ನೀಡಿದ್ದರು.
Advertisement
It's been an impressive showing from Yuzvendra Chahal today!
Here's him taking the important wicket of David Miller.#SAvIND #TeamIndiahttps://t.co/mWqkQJX7mj
— ICC Cricket World Cup (@cricketworldcup) June 5, 2019
ಚಹಲ್ ಮೋಡಿ: ಈ ಹಂತದಲ್ಲಿ ದಾಳಿಗಿಳಿದ ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಲ್ 38 ರನ್ ಗಳಿಸಿ ತಂಡಕ್ಕೆ ಮಾರಕವಾಗುತ್ತಿದ್ದ ಡುಪ್ಲೆಸಿ ಹಾಗೂ 22 ರನ್ ಗಳಿಸಿದ್ದ ರಸಿ ವ್ಯಾನ್ ಡರ್ ಡಸೆನ್ ವಿಕೆಟ್ ಪಡೆದು ಪಡೆದು ಎದುರಾಳಿ ತಂಡಕ್ಕೆ ಆಘಾತ ಡಬಲ್ ಆಘಾತ ನೀಡಿದರು. ಇದರ ಬೆನ್ನಲ್ಲೇ ಜೆಡಿ ಡುಮಿನಿರನ್ನ ಕುಲ್ದೀಪ್ ಯಾದವ್ ಎಲ್‍ಬಿ ಬಲೆಗೆ ಕೆಡವಿದರು. 22.6 ಓವರ್ ಗಳಲ್ಲಿ ದಕ್ಷಿಣ ಆಫ್ರಿಕಾ ತಂಡದ ಪ್ರಮುಖ ಐವರು ಬ್ಯಾಟ್ಸ್ ಮನ್‍ಗಳು 89 ರನ್ ಗಳಿಸಿ ಪೆವಿಲಿಯನ್ ಸೇರಿದ್ದರು.
ಮಧ್ಯಮ ಕ್ರಮಾಂಕದಲ್ಲಿ ಒಂದಾದ ಡೇವಿಡ್ ಮಿಲ್ಲರ್ ಹಾಗೂ ಡ್ವೇನ್ ಪೆಟೊರ್ಟರಿಯಸ್ ಜೋಡಿ 75 ಎಸೆತಗಳಲ್ಲಿ 46 ರನ್ ಜೊತೆಯಾಟ ಆಡಿ ತಂಡ ಅಲ್ಪ ಮೊತ್ತಕ್ಕೆ ಕುಸಿಯದಂತೆ ಎಚ್ಚರಿಕೆ ವಹಿಸಿದರು. 40 ಎಸೆತಗಳಲ್ಲಿ 31 ರನ್ ಸಿಡಿಸಿದ್ದ ಮಿಲ್ಲರ್, ಚಹಲ್‍ಗೆ ಕ್ಯಾಚ್ ನೀಡಿ ಔಟಾದರು.
39.3 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡಿದ್ದಾಗ 8ನೇ ವಿಕೆಟ್‍ಗೆ ಕ್ರಿಸ್ ಮೋರಿಸ್ ಮತ್ತು ಕಗಿಸೊ ರಬಾಡ 66 ರನ್ ಜೊತೆಯಾಟವಾಡಿ ತಂಡ 200ರ ಗಡಿ ದಾಟುವಂತೆ ಮಾಡಿದರು. ಮೋರಿಸ್ 42 ರನ್(34 ಎಸೆತ, 1 ಬೌಂಡರಿ, 2 ಸಿಕ್ಸರ್), ರಬಾಡ ಔಟಾಗದೇ 31 ರನ್(35 ಎಸೆತ, 2 ಬೌಂಡರಿ) ಹೊಡೆದು ಚೇತರಿಕೆಗೆ ಕಾರಣರಾದರು.
ಚಹಲ್ 4 ವಿಕೆಟ್ ಕಿತ್ತರೆ, ಭುವನೇಶ್ವರ್ ಕುಮಾರ್, ಬುಮ್ರಾ ತಲಾ 2 ವಿಕೆಟ್, ಕುಲದೀಪ್ ಯಾದವ್ ಒಂದು ವಿಕೆಟ್ ಪಡೆದರು.
Innings Break!
A 4-wkt haul from Chahal as #TeamIndia restrict South Africa to a total of 227/9 after 50 overs.
Updates – https://t.co/Ehv6d9cOXp #CWC19 pic.twitter.com/1zvqXKghsg
— BCCI (@BCCI) June 5, 2019