ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ (Pakistan vs New Zealand) ನಡುವಿನ ಹೈವೋಲ್ಟೇಜ್ ಕದನಕ್ಕೆ ಮಳೆ ಅಡ್ಡಿಯುಂಟು ಮಾಡಿದೆ.
ಕಿವೀಸ್ ನೀಡಿರುವ 400 ರನ್‌ಗಳ ಗುರಿ ಬೆನ್ನತ್ತಿರುವ ಪಾಕ್ ತಂಡ ಸ್ಫೋಟಕ ಇನ್ನಿಂಗ್ಸ್ ಆರಂಭಿಸಿದೆ. 4 ರನ್‌ಗಳಿಗೆ ಮೊದಲ ವಿಕೆಟ್ ಕಳೆಕೊಂಡರೂ ಫಖರ್ ಝಮಾನ್ ಮತ್ತು ನಾಯಕ ಬಾಬರ್ ಆಜಂ ಶತಕದ ಜೊತೆಯಾಟದಿಂದ 21.3 ಓವರ್‌ಗಳಲ್ಲಿ 160 ರನ್ ಗಳಿಸಿತ್ತು. ಈ ವೇಳೆ ಮಳೆ ಅಡ್ಡಿಯುಂಟುಮಾಡಿದೆ. ಸದ್ಯ ಮೈದಾನ ನೀರಿನಿಂದ ನೆನೆಯದಂತೆ ಟಾರ್ಪಾಲ್‌ಗಳಿಂದ ಕವರ್ ಮಾಡಲಾಗಿದೆ. ನ್ಯೂಜಿಲೆಂಡ್ ತಂಡ 21 ಓವರ್‌ಗಳಲ್ಲಿ 1 ವಿಕೆಟ್‌ಗೆ 133 ರನ್ ಗಳಿಸಿತ್ತು. ಆದ್ರೆ ಪಾಕಿಸ್ತಾನ 1 ವಿಕೆಟ್‌ಗೆ 159 ರನ್ ಬಾರಿಸಿದೆ. ಇದನ್ನೂ ಓದಿ: ಕೊಹ್ಲಿಗೂ ಮುನ್ನವೇ ಸಚಿನ್ ಶತಕ ದಾಖಲೆ ಉಡೀಸ್ ಮಾಡಿದ ರಚಿನ್..!
Advertisement
Advertisement
213 ಓವರ್‌ನಲ್ಲಿ ಡಕ್ವರ್ತ್ ಲೂಯಿಸ್ ನಿಯಮಕ್ಕೆ (ಡಿಎಸ್‌ಎಲ್) 150 ರನ್ ಸಮಾನ ಸ್ಕೋರ್ ಆಗಿದೆ. ಆದ್ರೆ ಪಾಕಿಸ್ತಾನ 10 ರನ್ ಮುಂದಿದೆ. ಸದ್ಯ ಓವರ್ ಕಡಿತದ ಬಗ್ಗೆ ಇನ್ನೂ ಮಾತುಕತೆ ನಡೆದಿಲ್ಲ. ಒಂದು ವೇಳೆ ಡಕ್ವರ್ತ್ ಲೂಯಿಸ್ ನಿಯಮ ಅನ್ವಯಿಸಿದರೂ ಅದು ಪಾಕ್ ತಂಡಕ್ಕೆ ವರದಾನವಾಗುವ ಸಾಧ್ಯತೆಗಳಿವೆ.
Advertisement
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಕಿವೀಸ್ ಪಡೆ 50 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 401 ರನ್ ಪೇರಿಸಿದೆ. 68 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಬಳಿಕ 2ನೇ ವಿಕೆಟ್‌ಗೆ ಬೃಹತ್ ಮೊತ್ತ ಪೇರಿಸಿತು. ಸ್ಫೋಟಕ ಇನ್ನಿಂಗ್ಸ್ ಆರಂಭಿಸಿದ ಕೇನ್ ವಿಲಿಯಮ್ಸನ್ ಹಾಗೂ ರಚಿನ್ ರವೀಂದ್ರ ಜೋಡಿ 2ನೇ ವಿಕೆಟ್‌ಗೆ 142 ಎಸೆತಗಳಲ್ಲಿ ಬರೋಬ್ಬರಿ 180 ರನ್ ಬಾರಿಸಿತ್ತು. ರಚಿನ್ ರವೀಂದ್ರ 108 ರನ್ (94 ಎಸೆತ, 15 ಬೌಂಡರಿ, 1 ಸಿಕ್ಸರ್) ಚಚ್ಚುವ ಮೂಲಕ 23ನೇ ವಯಸ್ಸಿಗೆ ವಿಶ್ವಕಪ್‌ನಲ್ಲಿ 3 ಶತಕ ಸಿಡಿಸಿ, 2 ಶತಕ ಸಿಡಿಸಿದ್ದ ಸಚಿನ್ ತೆಂಡೂಲ್ಕರ್ ದಾಖಲೆ ನುಚ್ಚು ನೂರು ಮಾಡಿದರು. ಇದನ್ನೂ ಓದಿ: World Cup 2023: ಶತಕ ಸಿಡಿಸಿ ಮೆರೆದಾಡಿದ ರಚಿನ್ – ಪಾಕಿಸ್ತಾನಕ್ಕೆ 402 ರನ್‌ಗಳ ಗುರಿ
Advertisement
ಇದರೊಂದಿಗೆ ಮೊಣಕಾಲು ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡ ನಂತರ ಮೊದಲ ಪಂದ್ಯವಾಡಿದ ಕೇನ್ ವಿಲಿಯಮ್ಸನ್ 95 ರನ್ (79 ಎಸೆತ, 10 ಬೌಂಡರಿ, 2 ಸಿಕ್ಸರ್) ಸಿಡಿಸಿ ಮಿಂಚಿದರು. ಇದರೊಂದಿಗೆ ಮಧ್ಯಮ ಕ್ರಮಾಂಕದಲ್ಲಿ ಡೇರಿಲ್ ಮಿಚೆಲ್ ಹಾಗೂ ಮಾರ್ಕ್ ಚಾಪ್ಮನ್ ಜೋಡಿ 32 ಎಸೆತಗಳಲ್ಲಿ 57 ರನ್, ಮಿಚೆಲ್ ಸ್ಯಾಂಟ್ನರ್ ಮತ್ತು ಗ್ಲೇನ್ ಫಿಲಿಪ್ಸ್ ಜೋಡಿ 26 ಎಸೆತಗಳಲ್ಲಿ 43 ರನ್‌ಗಳ ಜೊತೆಯಾಟ ನೀಡುವ ಮೂಲಕ ತಂಡದ ಮೊತ್ತ 400 ರನ್ ಗಡಿದಾಟಿಸುವಲ್ಲಿ ಯಶಸ್ವಿಯಾದರು.
ಡೆವೋನ್ ಕಾನ್ವೆ 35 ರನ್, ಡೇರಿಲ್ ಮಿಚೆಲ್ 29 ರನ್, ಮಾರ್ಕ್ ಚಾಪ್ಮನ್ 39 ರನ್, ಗ್ಲೇನ್ ಫಿಲಿಪ್ಸ್ 41 ರನ್, ಮಿಚೆಲ್ ಸ್ಯಾಂಟ್ನರ್ 26 ರನ್, ಟಾಮ್ ಲಾಥಮ್ 2 ರನ್ ಗಳಿಸಿದರು. ಪಾಕಿಸ್ತಾನ ಪರ ಮೊಹಮ್ಮದ್ ವಸೀಮ್ 3 ವಿಕೆಟ್ ಕಿತ್ತರೆ, ಹಸನ್ ಅಲಿ, ಇಫ್ತಿಕಾರ್ ಅಹ್ಮದ್ ಮತ್ತು ಹ್ಯಾರಿಸ್ ರೌಫ್ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ವಿಶ್ವಕಪ್‌ನಿಂದ ಹೊರಗುಳಿದ ಪಾಂಡ್ಯ – ಉಪನಾಯಕನಾಗಿ ಕೆಎಲ್ ರಾಹುಲ್ ಆಯ್ಕೆ
ರನ್ ಏರಿದ್ದು ಹೇಗೆ?
94 ಎಸೆತ 100 ರನ್
138 ಎಸೆತ 150 ರನ್
209 ಎಸೆತ 250 ರನ್
239 ಎಸೆತ 300 ರನ್
300 ಎಸೆತ 401 ರನ್