ರಾವಲ್ಪಿಂಡಿ: ಐಸಿಸಿ ಚಾಂಪಿಯನ್ ಟ್ರೋಫಿಯ (ICC Champions Trophy) ಆಸ್ಟ್ರೇಲಿಯಾ (Australia) ಮತ್ತು ದಕ್ಷಿಣಾ ಆಫ್ರಿಕಾ (South Africa) ನಡುವಣ ಪಂದ್ಯ ಮಳೆಯಿಂದಾಗಿ (Rain) ರದ್ದಾಗಿದೆ.
ಟಾಸ್ ಹಾಕಲು ಮಳೆ ಅವಕಾಶ ನೀಡಲಿಲ್ಲ. ಮೂರು ಗಂಟೆಗಳಿಗೂ ಹೆಚ್ಚು ಕಾಲ ವಾತಾವರಣದಲ್ಲಿ ಬದಲಾವಣೆಯಾಗದ ಕಾರಣ ಪಂದ್ಯವನ್ನು ಅಂತಿಮವಾಗಿ ರದ್ದುಗೊಳಿಸಲಾಯಿತು.
Advertisement
ರದ್ದಾಗಿದ್ದರಿಂದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ತಲಾ ಒಂದೊಂದು ಅಂಕ ನೀಡಲಾಯಿತು. ಬುಧವಾರ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ಮಧ್ಯೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಸೋತವರು ಟೂರ್ನಿಯಿಂದಲೇ ನಿರ್ಗಮಿಸಲಿದ್ದಾರೆ.
Advertisement
Advertisement
ಬಿ ಗುಂಪಿನಿಂದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ 3 ಅಂಕ ಪಡೆದಿದ್ದರೂ ನೆಟ್ ರನ್ ರೇಟ್ ಉತ್ತಮವಾಗಿರುವ ಕಾರಣ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ. ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ ಸೋತಿದ್ದರೆ ಅಫ್ಘಾನಿಸ್ತಾನ ಆಫ್ರಿಕಾ ವಿರುದ್ಧ ಸೋತಿದೆ. ಇದನ್ನೂ ಓದಿ: ಸುಳ್ಳಾಯ್ತು ಐಐಟಿ ಬಾಬಾ ಭವಿಷ್ಯ – ಪಾಕ್ ವಿರುದ್ಧ ಗೆದ್ದು ಬೀಗಿದ ಭಾರತ
Advertisement
ಎ ಗುಂಪಿನಲ್ಲಿ ನ್ಯೂಜಿಲೆಂಡ್ ಮತ್ತು ಭಾರತ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿವೆ. ಬಾಂಗ್ಲಾದೇಶ ಮತ್ತು ಮತ್ತು ಪಾಕಿಸ್ತಾನ ಟೂರ್ನಿಯಿಂದ ನಿರ್ಗಮಿಸಿದೆ.