ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಗಲ್ಲಿ ಕ್ರಿಕೆಟ್ ಒಂದಕ್ಕೆ ಮೂರನೇ ಅಂಪೈರ್ ಆಗಿ ತೀರ್ಪು ನೀಡಿದೆ.
ಸುದ್ದಿ ಓದಿ ಕನ್‍ಫ್ಯೂಸ್ ಆಗಬೇಡಿ. ಕ್ರಿಕೆಟ್ ಅಭಿಮಾನಿಯೊಬ್ಬರು ಗಲ್ಲಿ ಕ್ರಿಕೆಟ್ ಒಂದರ ವಿಡಿಯೋ ಒಂದನ್ನು ಕಳುಹಿಸಿ ತೀರ್ಪು ಪ್ರಕಟಿಸಿ ಎಂದು ಕೇಳಿದ್ದರು. ಈ ವಿಡಿಯೋ ವನ್ನು ಐಸಿಸಿ ಟ್ವೀಟ್ ಮಾಡಿ ಔಟ್ ಎಂದು ಹೇಳಿದೆ.
Advertisement
ಟ್ವಿಟ್ಟರ್ ನಲ್ಲಿ ಹಂಝಾ ಎಂಬವರು, ಗಲ್ಲಿ ಕ್ರಿಕೆಟ್‍ನಲ್ಲಿ ಬ್ಯಾಟ್ಸ್ ಮ್ಯಾನ್ ಬಾಲ್‍ನನ್ನು ಹೊಡೆದಿದ್ದಾನೆ. ಆದರೆ ಬಾಲ್ ಸ್ವಿಂಗ್ ಆಗಿ ಬ್ಯಾಟ್ಸ್ ಮ್ಯಾನ್ ಕಾಲಿನಡಿ ಹೋಗಿ ವಿಕೆಟ್‍ಗೆ ತಾಗಿದೆ. ಈ ವಿಚಾರದ ಬಗ್ಗೆ ಚರ್ಚೆ ನಡೆದಿದೆ. ಹೀಗಾಗಿ ಇದು ಔಟಾ ಅಥವಾ ನಾಟೌಟಾ ಎಂದು ಕೇಳಿದ್ದಾರೆ.
Advertisement
Advertisement
ಇದಕ್ಕೆ ಐಸಿಸಿ, ಅಭಿಮಾನಿ ಹಂಝಾ ಅವರು ಈ ವಿಡಿಯೋವನ್ನು ಬೆಳಗ್ಗೆ ನಮಗೆ ಕಳುಹಿಸಿ ತೀರ್ಪು ನೀಡಬೇಕೆಂದು ಕೇಳಿಕೊಂಡರು. ಐಸಿಸಿ ನಿಯಾಮಾವಳಿ 32.1ರ ಪ್ರಕಾರ ಬ್ಯಾಟ್ಸ್ ಮ್ಯಾನ್ ಬಾರಿಸಿದ ಬಾಲ್ ವಿಕೆಟ್‍ಗೆ ತಾಗಿದರೆ ಅದು ಔಟ್ ಎಂದು ಟ್ವೀಟ್ ಮಾಡಿ ತನ್ನ ತೀರ್ಪನ್ನು ಪ್ರಕಟಿಸಿದೆ.
Advertisement
ಸದ್ಯ ಈ ಗಲ್ಲಿ ಕ್ರಿಕೆಟ್ ಆಡಿರುವುದು ಎಲ್ಲಿ ಎಂಬುದರ ಬಗ್ಗೆ ಸರಿಯಾದ ಮಾಹಿತಿ ತಿಳಿದು ಬಂದಿಲ್ಲ. ಈ ಟ್ವೀಟ್ ಅನ್ನು 4 ಸಾವಿರ ಮಂದಿ ರಿಟ್ವೀಟ್ ಮಾಡಿದ್ದರೆ, 13 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
A fan named Hamza sent this video to us this morning asking for a ruling.
Unfortunately for the (very unlucky) batsman, law 32.1 confirms… Out! ☝ pic.twitter.com/y3Esgtz48x
— ICC (@ICC) May 22, 2018