ಇಂದು ಇಂಡೋ, ಅಫ್ಘಾನ್ ಸಮರ – ಸುಲಭ ಜಯದ ನಿರೀಕ್ಷೆಯಲ್ಲಿ ವಿರಾಟ್ ಬಳಗ

Public TV
1 Min Read
INDvs AFG

ಸೌತಾಂಪ್ಟನ್: ಹರಿಣಗಳ ಬೇಟೆಯಾಡಿ, ಕಾಂಗರೂಗಳ ಹುಟ್ಟಡಗಿಸಿ, ಪಾಕ್ ತಂಡವನ್ನ ಬಡಿದಟ್ಟಿದ ಟೀಂ ಇಂಡಿಯಾ ವಿಶ್ವಕಪ್‍ನಲ್ಲಿ ವಿರಾಜಮಾನವಾಗಿದೆ. ಗೆಲುವಿನ ಮೇಲೆ ಗೆಲುವು ಸಾಧಿಸುತ್ತಾ ವಿಶ್ವಕಪ್‍ನಲ್ಲಿ ವಿಜಯಿಶಾಲಿಯಾಗಿ ಮುನ್ನುಗ್ಗುತ್ತಿರುವ ಕೊಹ್ಲಿ ಸೈನ್ಯಕ್ಕೆ ಕ್ರಿಕೆಟ್ ಶಿಶು ಅಪ್ಘಾನಿಸ್ತಾನ್ ಪಡೆ ಇಂದು ಸವಾಲೊಡ್ಡಲಿದೆ.

ಸೌತಾಂಪ್ಟನ್‍ನಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪಂದ್ಯ ನಡೆಯಲಿದೆ. ವಿಶ್ವಕಪ್‍ನಲ್ಲಿ ಅಫ್ಘಾನಿಸ್ತಾನ ಈವರೆಗೆ 5 ಪಂದ್ಯಗಳನ್ನಾಡಿದ್ದು, ಒಂದೇ ಒಂದು ಪಂದ್ಯವನ್ನ ಗೆದ್ದಿಲ್ಲ. ಸದ್ಯ ಅಪ್ಘಾನ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಈ ಹಿಂದೆ ಆಡಿದ ತಂಡವೇ ಕಣಕ್ಕಿಳಿಯಲಿದೆ.

cricket

ಆದರೆ ಭಾರತದ ತಂಡದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ. ಶಿಖರ್ ಧವನ್ ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಭುವನೇಶ್ವರ್ ಸಹ ಗಾಯಗೊಂಡು ಕೆಲ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಭುವಿ ಸ್ಥಾನವನ್ನು ಮೊಹಮದ್ ಶಮಿ ತುಂಬಲಿದ್ದಾರೆ. ಅಭ್ಯಾಸದ ವೇಳೆ ಗಾಯಗೊಂಡಿದ್ದ ಆಲ್‍ರೌಂಡರ್ ವಿಜಯ್ ಶಂಕರ್ ಫಿಟ್ ಆಗಿದ್ದು, ಇಂದು ಕಣಕ್ಕಿಳಿಯಲಿದ್ದಾರೆ.

ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಟೀಂ ಇಂಡಿಯಾ ಬಲಿಷ್ಠವಾಗಿದ್ದು ಗೆಲುವಿನ ವಿಶ್ವಾಸದಲ್ಲಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಅಫ್ಘಾನ್ ಪಡೆ, ಬ್ಯಾಟಿಂಗ್ ಬೌಲಿಂಗ್‍ನಲ್ಲಿ ವೈಫಲ್ಯ ಅನುಭವಿಸುತ್ತಿದ್ದು, ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದೆ. ಸದ್ಯ ಪಂದ್ಯಕ್ಕೆ ಮಳೆಯ ಭೀತಿಯಲ್ಲ. ಪಿಚ್ ಬ್ಯಾಟಿಂಗ್‍ಗೆ ಹೆಚ್ಚು ಸಹಕಾರಿಯಾಗಲಿದ್ದು, ರನ್ ಹೊಳೆಯೇ ಹರಿಯಲಿದೆ.

virat 1

ಒಟ್ಟಿನಲ್ಲಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಟೀಂ ಇಂಡಿಯಾ ಇಂದಿನ ಪಂದ್ಯದಲ್ಲಿ ಗೆದ್ದು 3ನೇ ಸ್ಥಾನಕ್ಕೆ ಜಿಗಿಯಲು ತಂತ್ರ ರೂಪಿಸಿದೆ.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Share This Article
Leave a Comment

Leave a Reply

Your email address will not be published. Required fields are marked *