ಬಾಲಿವುಡ್ ನಟ ಸೈಫ್ ಅಲಿ ಖಾನ್ (Saif Ali Khan) ಪುತ್ರ ಇಬ್ರಾಹಿಂ ಅಲಿ ಖಾನ್ ಚೊಚ್ಚಲ ಸಿನಿಮಾ ಮೂಲಕ ಸದ್ದು ಮಾಡುತ್ತಿದ್ದಾರೆ. ಇಬ್ರಾಹಿಂ ಅಲಿ ಖಾನ್ ಮತ್ತು ಖುಷಿ ಕಪೂರ್ (Kushi Kapoor) ನಟನೆಯ ಈ ಚಿತ್ರಕ್ಕೆ ಕರಣ್ ಜೋಹರ್ ಸಾಥ್ ನೀಡಿದ್ದಾರೆ. ಚಿತ್ರದ ಪೋಸ್ಟರ್ ರಿವೀಲ್ ಮಾಡುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.
Advertisement
‘ನಾದನಿಯನ್’ ಎಂದು ಚಿತ್ರಕ್ಕೆ ಟೈಟಲ್ ಇಡಲಾಗಿದ್ದು, ಈ ಚಿತ್ರದ ಮೂಲಕ ಹೊಸ ಜೋಡಿಯನ್ನು ಕರಣ್ ಜೋಹರ್ ಪರಿಚಯಿಸಲು ಹೊರಟಿದ್ದಾರೆ. ಹದಿಹರೆಯದ ರೊಮ್ಯಾಂಟಿಕ್ ಕಥೆ ಈ ಸಿನಿಮಾದಲ್ಲಿ ಇರಲಿದೆ. ಇಬ್ರಾಹಿಂ ಮತ್ತು ಖುಷಿ ಕಪೂರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಫೆ.16ರಂದು ಹಸೆಮಣೆ ಏರಲು ಸಜ್ಜಾದ ‘ಪಾರು’ ನಟಿ ಮಾನಸಿ ಜೋಶಿ
Advertisement
View this post on Instagram
Advertisement
ಈ ಚಿತ್ರವನ್ನು ಶೌನಾ ಗೌತಮ್ ನಿರ್ದೇಶನ ಮಾಡಿದ್ದಾರೆ. ಸೈಫ್ ಪುತ್ರನ ಚಿತ್ರಕ್ಕೆ ಕರಣ್ ಜೋಹರ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಚಿತ್ರದ ರಿಲೀಸ್ ಡೇಟ್ ಇನ್ನೂ ರಿವೀಲ್ ಆಗಿಲ್ಲ. ಇದನ್ನೂ ಓದಿ:ಡಾಲಿ ನಿರ್ಮಾಣದ ‘ವಿದ್ಯಾಪತಿ’ಗೆ ಕೆಜಿಎಫ್ ವಿಲನ್ ಎಂಟ್ರಿ- ನಾಗಭೂಷಣ್ ಎದುರು ತೊಡೆತಟ್ಟಿದ ಗರುಡ ರಾಮ್
Advertisement
ಅಂದಹಾಗೆ, ಇಬ್ರಾಹಿಂ ಈ ಚಿತ್ರದ ಜೊತೆಗೆ ಶ್ರೀಲೀಲಾ ಅವರೊಂದಿಗೆ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಅದಕ್ಕೆ ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಇತ್ತ ಖುಷಿ ಕಪೂರ್ ಅವರು ಆಮೀರ್ ಖಾನ್ ಪುತ್ರ ಜುನೈದ್ ಖಾನ್ ಜೊತೆ ‘ಲವ್‌ಯಾಪಾ’ ಎಂಬ ಸಿನಿಮಾ ಮಾಡಿದ್ದಾರೆ. ಈ ಸಿನಿಮಾ ಫೆ.7ರಂದು ರಿಲೀಸ್ ಆಗಲಿದೆ.