ಮುಂಬೈ: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಚಾರಣಕ್ಕೆ ತೆರಳಿದ್ದ ಐಬಿಎಂ ಸಾಫ್ಟ್ ವೇರ್ ಎಂಜಿನಿಯರ್ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಮುಂಬೈನಲ್ಲಿ ನಡೆದಿದೆ.
ಈ ಘಟನೆ ಮುಂಬೈನ ದಾದರ್ ರೈಲ್ವೆ ನಿಲ್ದಾಣದಲ್ಲಿ ಭಾನುವಾರ ನಡೆದಿದ್ದು, ಮೃತ ದುರ್ದೈವಿ ಎಂಜಿನಿಯರ್ ನನ್ನು 31 ವರ್ಷದ ಸುದರ್ಶನ್ ಚೌಧರಿ ಎಂದು ಗುರುತಿಸಲಾಗಿದೆ.
Advertisement
ನಡದಿದ್ದೇನು?:
ಮಲಾಡ್ ನ ಪಿಜಿಯೊಂದರಲ್ಲಿ ನೆಲೆಸಿದ್ದ ಸುದರ್ಶನ್ ಶನಿವಾರ ಮುಂಜಾನೆ ದಾದರ್ ರೈಲ್ವೇ ನಿಲ್ದಾಣಕ್ಕೆ ಬಂದಿದ್ದಾರೆ. ಟ್ರೆಕ್ಕಿಂಗ್ ಗೆ ಹೋಗೋದಾಗಿ ನಿರ್ಧರಿಸಿದ್ದ ಸುದರ್ಶನ್ ಗೆಳೆಯರು ಕರ್ಜತ್ ನಲ್ಲಿ ಮುಂಜಾನೆ 5.40 ರ ಸುಮಾರಿಗೆ ಎಲ್ಲರು ಒಟ್ಟಾಗೋಣ ಅಂತ ಹೇಳಿದ್ದರು. ಹೀಗಾಗಿ ಸುದರ್ಶನ್ ಅವರು ಕರ್ಜತ್ ಗೆ ತೆರಳಲು ಪಶ್ಚಿಮ ರೈಲ್ವೇ ಯಿಂದ ಸೆಂಟ್ರಲ್ ರೈಲ್ವೆಗೆ ರೈಲು ಚೇಂಜ್ ಮಾಡಬೇಕಿತ್ತು. ಅದಾಗಲೇ ಕರ್ಜತ್ ಕಡೆ ಹೋಗುವ ರೈಲು ಹೊರಟಿತ್ತು.
Advertisement
Advertisement
ಈ ರೈಲು ಮಿಸ್ ಮಾಡಿಕೊಂಡ್ರೆ ತಡವಾಗುತ್ತೆ ಅಂದುಕೊಂಡ ಸುದರ್ಶನ್ ಚಲಿಸುತ್ತಿರುವ ರೈಲನ್ನೇ ಹತ್ತಲು ಓಡಿದ್ದಾರೆ. ಹೀಗೆ ಓಡುತ್ತಿರಬೇಕಾದ್ರೆ ಕಾಲು ಎಡವಿ ಪ್ಲಾಟ್ ಫಾರಂ ನಲ್ಲಿ ಬಿದ್ದಿದ್ದಾರೆ. ಚಲಿಸುತ್ತಿದ್ದುದರಿಂದ ಸುದರ್ಶನ್ ಅವರನ್ನು ರೈಲು ಸುಮಾರು 50 ಮೀಟರ್ ದೂರ ಎಳೆದುಕೊಂಡು ಹೋಗಿದೆ. ಪರಿಣಾಮ ಅವರ ಬಟ್ಟೆ-ಬರೆ ಹರಿದುಹೋಗಿತ್ತು. ನಿಲ್ದಾಣದಿಂದ ತುಸು ದೂರದಲ್ಲಿ ರಸ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಗಮನಿಸಿದ ಪ್ರಯಾಣಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Advertisement
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸುದರ್ಶನ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರೂ ಅದಾಗಲೇ ಮೃತಪಟ್ಟಿದ್ದಾರೆ ಅಂತ ಸಿಯೋನ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಇತ್ತ ಕರ್ಜತ್ ನಲ್ಲಿ ಕಾದುಕುಳಿತಿರೋ ಗೆಳೆಯರು ಸುದರ್ಶನ್ ಬರದಿರುವುದರಿಂದ ಎಡಬಿಡದೆ ಫೋನ್ ಮಾಡುತ್ತಿದ್ದು, ಕರೆ ಸ್ವೀಕರಿಸುತ್ತಿರಲಿಲ್ಲ. ಸ್ವಲ್ಪ ಸಮಯದ ಬಳಿಕ ದಾದರ್ ಪ್ಲಾಟ್ ಫಾರಂ ಸುದರ್ಶನ್ ಎಡವಿ ಬಿದ್ದ ಜಾಗದಲ್ಲಿ ಮೊಬೈಲ್ ಬಿದ್ದಿರುವುದನ್ನು ಗಮನಿಸಿದ ಪ್ರಯಾಣಿಕರು ಅದನ್ನು ರೈಲ್ವೇ ರಕ್ಷಣಾ ಪಡೆ(ಆರ್‍ಪಿಎಫ್)ಗೆ ಹಸ್ತಾಂತರಿಸಿದ್ದಾರೆ. ಈ ವೇಳೆಯೂ ಕರೆ ಬಂದಿದ್ದು, ರೈಲ್ವೇ ಅಧಿಕಾರಿ ಕರೆ ಸ್ವೀಕರಿಸಿ ಈ ಫೋನ್ ಬಿದ್ದು ಸಿಕ್ಕಿರುವುದಾಗಿ ಹೇಳಿದ್ದಾರೆ. ಇದರಿಂದ ಗಾಬರಿಗೊಂಡ ಸುದರ್ಶನ್ ಗೆಳೆಯ ಗಾಬರಿಗೊಂಡು ಸುದರ್ಶನ್ ಗೆ ಎಲ್ಲದರೂ ಅಪಘಾತವಾಗಿರಬಹುದಾ ಎಂದು ಚೆಕ್ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ.
2 ತಿಂಗ್ಳ ಹಿಂದೆಯಷ್ಟೇ ಮದ್ವೆಯಾಗಿತ್ತು:
ಸುದರ್ಶನ್ ಸಾಂಗ್ಲಿಯ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಓದಿದ್ದಾರೆ. ಎರಡು ತಿಂಗಳ ಹಿಂದೆಯಷ್ಟೆ ಮದುವೆಯಾಗಿತ್ತು. ಮೂಲತಃ ನಾಗ್ಪುರದವರಾಗಿರೋ ಸುದರ್ಶನ್, ಕೆಲಸಕ್ಕಾಗಿ ಮುಂಬೈಗೆ ತೆರಳಿದ್ದರು. ಸದ್ಯ ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡಿರೋ ಸುದರ್ಶನ್ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ ಅಂತ ಗೆಳೆಯ ಸಂದೀಪ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv