– ಮಾಜಿ ಉದ್ಯೋಗಿಯಿಂದ ನ್ಯಾಯಾಲಯದಲ್ಲಿ ಕೇಸ್
ಸ್ಯಾನ್‍ಫ್ರಾನ್ಸಿಸ್ಕೋ: ಐಬಿಎಂ ಕಂಪನಿ ಕೆಲ ವರ್ಷಗಳಿಂದ ಒಟ್ಟು ಅಂದಾಜು 1 ಲಕ್ಷ ಹಿರಿಯ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ.
ಆಫೀಸಿನಲ್ಲಿ ಯುವ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಹಿರಿಯ ಉದ್ಯೋಗಿಗಳನ್ನು ಬಲವಂತವಾಗಿ ಕಂಪನಿ ಗೇಟ್ ಪಾಸ್ ನೀಡುತ್ತಿದೆ ಎಂದು ಆರೋಪಿಸಿ ಐಬಿಎಂ ಮಾಜಿ ಉದ್ಯೋಗಿಯೊಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
Advertisement
Advertisement
ಜೊನಾಥನ್ ಲಾಂಗ್ಲೆ ಎಂಬವರು ಈ ದಾವೆ ಹೂಡಿದ್ದು, ಅರ್ಜಿಯಲ್ಲಿ ಕಳೆದ ಐದು ವರ್ಷದಲ್ಲಿ ಹತ್ತಿರ ವಿಶ್ವದೆಲ್ಲೆಡೆ ಒಟ್ಟು 1 ಲಕ್ಷ ಹಿರಿಯ ಉದ್ಯೋಗಿಗಳನ್ನು ಮನೆಗೆ ಕಳುಹಿಸಿದೆ ಎಂದು ಆರೋಪಿಸಿದ್ದಾರೆ.
Advertisement
ಗೂಗಲ್, ಫೇಸ್‍ಬುಕ್, ಅಮೇಜಾನ್ ಕಂಪನಿಯಂತೆ ಯುವ ಉದ್ಯೋಗಿಗಳಿಗೆ ಐಬಿಎಂ ಮಣೆ ಹಾಕುತ್ತಿದ್ದು, ಈ ಹಿನ್ನೆಯಲ್ಲಿ ಹಿರಿಯ ನುರಿತ ಉದ್ಯೋಗಿಗಳನ್ನು ಕಾರಣವಿಲ್ಲದೇ ತೆಗೆದು ಹಾಕುತ್ತಿದೆ ಎಂದು 61 ವರ್ಷ ಜೊನಾಥನ್ ಆರೋಪಿಸಿದ್ದಾರೆ. ಹೈ ಬ್ರಿಡ್ ಕ್ಲೌಡ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜೊನಾಥನ್ ಅವರನ್ನು ಐಬಿಎಂ ಕಳೆದ ವರ್ಷ ತೆಗೆದು ಹಾಕಿತ್ತು.
Advertisement
108 ವರ್ಷ ಹಳೆಯ ಐಬಿಎಂ ಕಂಪನಿ ಈ ವಿಚಾರವಾಗಿ ಪ್ರತಿಕ್ರಿಯಿಸಿ, ವರ್ಷದ ಆಧಾರದ ಮೇಲೆ ನಾವು ಯಾವುದೇ ತಾರತಮ್ಯ ಮಾಡಿಲ್ಲ, ಪ್ರತಿ ವರ್ಷ ನಾವು 50 ಸಾವಿರ ಮಂದಿಗೆ ಉದ್ಯೋಗ ನೀಡುತ್ತೇವೆ. ಇವರಿಗೆ ತರಬೇತಿ ನೀಡಲೆಂದೇ ಅರ್ಧ ಶತಕೋಟಿ ಡಾಲರ್ ಹಣವನ್ನು ಖರ್ಚು ಮಾಡುತ್ತೇವೆ. ಉದ್ಯೋಗಕ್ಕಾಗಿ ಪ್ರತಿ ದಿನ 8 ಸಾವಿರಕ್ಕೂ ಅಧಿಕ ಅರ್ಜಿಗಳು ಬರುತ್ತಿರುವುನ್ನು ನೋಡಿ ನಾವು ಉತ್ಸಾಹಗೊಂಡಿದ್ದೇವೆ ಎಂದು ತಿಳಿಸಿದೆ.
ಸರಿಯಾಗಿ ಕೆಲಸ ಮಾಡದ ಉದ್ಯೋಗಿಗಳನ್ನು ತೆಗೆದು ಹಾಕುತ್ತಿರುವುದು ಇದೇ ಮೊದಲಲ್ಲ. ಹಲವು ವರ್ಷಗಳಿಂದ ನಾವು ಈ ಕೆಲಸ ಮಾಡಿಕೊಂಡು ಬಂದಿದ್ದೇವೆ ಎಂದು ಕಂಪನಿ ಪ್ರತಿಕ್ರಿಯಿಸಿದೆ.
ಪ್ರೊಪಬ್ಲಿಕ ಹೆಸರಿನ ಅಮೆರಿಕದ ಸಂಸ್ಥೆಯೊಂದು 2018ರ ಮಾರ್ಚ್ ತಿಂಗಳಿನಲ್ಲಿ ತನಿಖೆ ನಡೆಸಿ, ಕಳೆದ 4 ವರ್ಷದಲ್ಲಿ ಅಮೆರಿಕ ಒಂದೇ ದೇಶದಲ್ಲಿ ಐಬಿಎಂ 40 ವರ್ಷಕ್ಕೂ ಮೇಲ್ಪಟ್ಟ ಅಂದಾಜು 20 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ ಎಂದು ತಿಳಿಸಿದೆ.